ಹಣೆಯಲ್ಲಿ ಮೂಡುವ ಗೆರೆಗಳು ನಿಮ್ಮ ಭವಿಷ್ಯ ಹೇಳುತ್ತದೆ

ಜೋತಿಷ್ಯ

ಸ್ನೇಹಿತರೆ ಹಣೆಯಲ್ಲಿ ಬರೆದಿದ್ದು ಆಗುತ್ತದೆ ಎನ್ನುವವರು ಇದ್ದಾರೆ ನಮ್ಮ ಭವಿಷ್ಯ ಹಣೆಯಲ್ಲಿ ಬರೆದಿರುತ್ತದೆ ಎಂದು ಅನೇಕರು ನಂಬುತ್ತಾರೆ. ಹುಬ್ಬೇರಿಸಿದಾಗ ಈ ಗೆರೆಗಳು ಕಾಣಿಸುತ್ತದೆ. ವಯೋಸಹಜವಾಗಿ ಮೂಡುವ ಗೆರೆಗಳನ್ನು ಬಿಟ್ಟರೆ ಕೆಲವರಿಗೆ ಒಂದು ಗೆರೆ ಕೆಲವರಿಗೆ ಎರಡು ಮೂರು ಗೆರೆಗಳು ಮೂಡುತ್ತದೆ. ಪ್ರತಿ ಗೆರೆಗಳು ಆಯಾ ಒಡೆಯನ ಗುಣವನ್ನು ಸಾರುತ್ತದೆ. ಇನ್ನೂ ಕೆಲವು ಗುಣಗಳನ್ನು ಅಷ್ಟೆ ಹೇಳದೆ ಆರೋಗ್ಯದ ಬಗೆಗಿನ ಮಾಹಿತಿಯನ್ನು ಸಹಾ ನೀಡುತ್ತದೆ. ಹಣೆಯಲ್ಲಿ ಮೂಡುವ ಗೆರೆಯಲ್ಲಿ ಎಲ್ಲಾ ಅಡಗಿದೆ ಎಂದು ಹೇಳುತ್ತಾರೆ ಹಣೆಯ ಯಾವ ಯಾವ ಗೆರೆಗಳು ಏನನ್ನು ಸೂಚಿಸುತ್ತದೆ ಎಂದು ಈಗ ತಿಳಿಯೋಣ ಬನ್ನಿ. ಇದನ್ನು ತಿಳಿಯಲು ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಹಣೆಯ ಮೊದಲ ಸಾಲು ಹುಬ್ಬಿನ ಹತ್ತಿರ ಇರುವ ರೇಖೆ ಅದು ಧನ ರೇಖೆ ಈ ರೇಖೆ ಎಷ್ಟು ಸ್ಪಷ್ಟವಾಗಿ ಇರುತ್ತದೆಯೋ ಆಸ್ತಿ ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಈ ರೇಖೆ ಸಾಲುಗಳು ಚಿಕ್ಕದಾಗಿ ಇದ್ದರೆ ಅಥವಾ ಅರ್ಧಕ್ಕೆ ಕತ್ತರಿಸಿದ್ದರೆ ಆರ್ಥಿಕ ಸ್ಥಿತಿ ಚೆನ್ನಾಗಿ ಇಲ್ಲ ಎಂದು ಅರ್ಥ. ಹುಬ್ಬಿನ ಮೇಲೆ ಇರುವ ಎರಡನೇ ರೇಖೆ ಆರೋಗ್ಯ ರೇಖೆ ಈ ರೇಖೆ ದಪ್ಪ ಹಾಗೂ ಸ್ಪಷ್ಟವಾಗಿ ಇದ್ದರೆ ಆ ವ್ಯಕ್ತಿ ಆರೋಗ್ಯವಾಗಿ ಇರುತ್ತಾನೆ ಎಂದು ಸೂಚಿಸುತ್ತದೆ. ಸಣ್ಣದಾಗಿ ಇದ್ದರೆ ಹಾಗೂ ತೆಳ್ಳಗೆ ಇದ್ದರೆ ಅನಾರೋಗ್ಯಕ್ಕೆ ಒಳಗಾಗುವರು ಎಂಬ ಸಂಕೇತ. ಕೆಳಗಿನಿಂದ ಮೂರನೇ ರೇಖೆ ಅದೃಷ್ಟದ ಸಂಕೇತ ಇದು ಎಲ್ಲರ ಹಣೆಯಲ್ಲಿ ಕಾಣುವುದಿಲ್ಲ ಈ ರೇಖೆ ಇದ್ದರೆ ಆ ವ್ಯಕ್ತಿ ತುಂಬಾ ಅದೃಷ್ಟಶಾಲಿ ಎಂದು ಅರ್ಥ ಬರುತ್ತದೆ. ಅಷ್ಟೆ ಅಲ್ಲ ಈ ಗೆರೆಗಳಿಂದ ಲಿವರ್ ತೊಂದರೆ ಮಧುಮೇಹ ಇತ್ಯಾದಿ ಬಗ್ಗೆ ಸೂಕ್ಷ್ಮವಾಗಿ ಅರಿಯಬಹುದು.

ನಾಲ್ಕನೆಯ ರೇಖೆ ಇರುವುದು ಅಪರೂಪದಲ್ಲಿ ಅಪರೂಪ ಇದು ಕಂಡು ಬಂದಲ್ಲಿ ಜೀವನದಲ್ಲಿ ಸಾಕಷ್ಟು ಏರಿಳಿತ ಇರುತ್ತದೆ ಎಂದು ಅರ್ಥ. ಇಪ್ಪತ್ತರಿಂದ ನಲವತ್ತು ವರ್ಷ ವಯಸ್ಸಿನಲ್ಲಿ ಈ ಏರಿಳಿತ ಹೆಚ್ಚಾಗುತ್ತದೆ ಎಂಬುದರ ಸಂಕೇತ ಇದು. ನಲವತ್ತು ವರ್ಷದ ನಂತರ ಅವರು ಯಶಸ್ಸು ಗಳಿಸುತ್ತಾರೆ ಒಂದಕ್ಕಿಂತ ಹೆಚ್ಚು ಆಸ್ತಿ ಮಾಡುತ್ತಾರೆ ಐದನೆಯ ರೇಖೆ ಚಿಂತೆಯ ಸಂಕೇತ ಆಗಿದೆ. ಈ ರೇಖೆ ಇರುವ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಚಿಂತೆ ಕಾಡುತ್ತದೆ. ಮೂಗಿನ ಮೇಲೆ ಇರುವ ಆರನೆಯ ರೇಖೆ ದೈವೀ ರೇಖೆ. ದೈವಿಕ ಅನುಗ್ರಹವನ್ನು ಈ ವ್ಯಕ್ತಿ ಹೊಂದುತ್ತಾನೆ ಎಂದರ್ಥ. ನೋಡಿದಿರಾ ಸ್ನೇಹಿತರೆ ಕೇವಲ ನಾವು ಮುಖದಲ್ಲಿ ಮೂಡುವ ಗೆರೆಗಳು ಎಂದು ಕಡೆಗಣಿಸಿದರೆ ಇದರಲ್ಲಿ ನಮ್ಮ ಭವಿಷ್ಯವೇ ಅಡಗಿದೆ ಅಷ್ಟೆ ಅಲ್ಲ ನಮ್ಮ ಅರೋಗ್ಯದ ಗುಟ್ಟು ಸಹಾ ಇದರಲ್ಲಿ ಸೂಚಿಸುತ್ತದೆ. ನಿಮ್ಮ ಮುಂದಿನ ಭವಿಷ್ಯ ಸ್ಪಷ್ಟವಾಗಿ ನಿಖರವಾಗಿ ಪ್ರಖ್ಯಾತ ಜ್ಯೋತಿಷಿಗಳಿಂದ ತಿಳಿಯುವ ಆಸೆ ನಿಮಗೆ ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ್ ಶಂಕರ ನಾರಾಯಣ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.