ಸೇಬುಹಣ್ಣಿನ ಬೀಜ ತಿನ್ನುವುದರಿಂದ ಹೇಗೆಲ್ಲ ಆಗುತ್ತದೆ ನೋಡಿ. ಹಣ್ಣುಗಳು ಯಾರಿಗೆ ಇಷ್ಟ ಇಲ್ಲ ಹೇಳಿ ನಾವು ಪ್ರತಿದಿನ ಸೇವಿಸುವ ಆಹಾರ ಪಧಾರ್ಥಗಳು ನಮ್ಮ ದೇಹಕ್ಕೆ ಹೆಚ್ಚಿನ ಪ್ರೊಟೀನ್ ವಿಟಮಿನ್ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ ಅದರಲ್ಲೂ ನಾವು ತಿನ್ನುವ ಕೆಲವೊಂದು ಹಣ್ಣುಹಂಪಲುಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತವೆ ಅಷ್ಟೇ ಅಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡುವುದಕ್ಕೆ ಹಣ್ಣುಹಂಪಲು ನಮ್ಮ ದೇಹಕ್ಕೆ ಎಷ್ಟು ಅಗತ್ಯವಾಗಿರುತ್ತದೆ ಕೆಲವೊಮ್ಮೆ ನಾವು ವಿವಿಧ ಬಗೆಯ ಹಣ್ಣುಗಳನ್ನು ತಿನ್ನಲು ಬಯಸುತ್ತೇವೆ ಅವುಗಳಲ್ಲಿ ಒಂದು ಸೇಬುಹಣ್ಣು ಈ ಸೇಬುಹಣ್ಣು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ಸಹ ಈ ಸೇಬುಹಣ್ಣು ತುಂಬಾ ಇಷ್ಟ ಆದರೆ ಇತ್ತೀಚೆಗೆ ಕೆಲವೊಂದು ಸುದ್ದಿಗಳ ಪ್ರಕಾರ ತಿಳಿದು ಬಂದಿರೋದು ಏನೆಂದರೆ ದಿನಕ್ಕೆ ಒಂದು ಸೇಬುಹಣ್ಣು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಆ ಸೇಬುಹಣ್ಣನ್ನು ತಿನ್ನುವಾಗ ಈ ಒಂದು ಬಹುಮುಖ್ಯ ಅಂಶವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು
ಹಾಗಾದರೆ ಆ ಒಂದು ಅಂಶ ಏನು ಎನ್ನುವುದನ್ನು ಈ ಲೇಖನದಲ್ಲಿ ನಾವು ಈಗ ತಿಳಿಯೋಣ ಬನ್ನಿ. ಈ ಸೇಬುಹಣ್ಣು ಸೇವಿಸುವಾಗ ನಾವು ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಒಂದು ಅಂಶ ಏನೆಂದರೆ ಈ ಸೇಬುಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹದ ಮೇಲೆದುಷ್ಪರಿಣಾಮ ಬೀರುತ್ತದೆ ಎಂದು ಕೆಲವೊಂದು ಸಂಶೋಧನೆಗಳಲ್ಲಿ ಈಗ ತಿಳಿದು ಬಂದಿದೆ ಆದ್ದರಿಂದ ಸೇಬುಹಣ್ಣಿನ ಬೀಜ ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವ ರೀತಿಯ ದುಷ್ಪರಿಣಾಮ ಆಗುತ್ತದೆ ಎಂದು ತಿಳಿಯೋಣ. ಹಣ್ಣುಗಳ ಬೀಜಗಳಲ್ಲಿ ಪೋಷಕಾಂಶಗಳು ಇರುತ್ತವೆ ಎಂದು ಎಲ್ಲರಿಗೂ ಗೊತ್ತಿದೆ ಆದರೆ ಕೆಲವೊಂದು ಹಣ್ಣಿನ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹ ಅನಾರೋಗ್ಯದ ಪಾಲಾಗುತ್ತದೆ ಎಂದು ಕೆಲವೊಂದು ಸಂಶೋಧನೆಗಳಿಂದ ತಿಳಿದು ಬಂದಿದೆ ಏಕೆಂದರೆ ಕೆಲವು ಹಣ್ಣಿನ ಬೀಜಗಳು ಉಪಯೋಗಕ್ಕೆ ಬರುವುದಿಲ್ಲ ಅದರಲ್ಲೂ ಮುಖ್ಯವಾದದ್ದು ಸೇಬು ಈ ಸೇಬುಹಣ್ಣಿನ ಬೀಜಗಳನ್ನು ನಾವು ಯಾವುದೇ ಕಾರಣಕ್ಕೂ ಸೇವಿಸಬಾರದು.
ಒಂದು ವೇಳೆ ತಿನ್ನುವಾಗ ನಮ್ಮ ಹಲ್ಲಿಗೆ ಆ ಬೀಜ ಸಿಕ್ಕಿದರೆ ತಕ್ಷಣವೇ ಅದನ್ನು ತೆಗೆದು ಬಿಸಾಡಬೇಕು ಸೇಬುಹಣ್ಣಿನ ಬೀಜಗಳನ್ನು 1 ಅಥವಾ 2 ಬೀಜಗಳನ್ನು ತಿನ್ನುವುದರಿಂದ ಏನು ಆಗುವುದಿಲ್ಲ ಆದರೆ 5 ಗ್ರಾಮ್ ಗಿಂತ ಅಧಿಕ ಬೀಜಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅನಾರೋಗ್ಯಕರ ಸಮಸ್ಯೆಗಳು ಬರುತ್ತವೆ ಎಂದು ಕೆಲವೊಂದು ಸಂಶೋಧನೆಗಳು ತಿಳಿಸಿವೆ ಏಕೆಂದರೆ ಈ ಬೀಜಗಳಲ್ಲಿ ಅಮೆಡಾಲಿನ ಎಂಬ ಪಧಾರ್ಥ ಇರುತ್ತದೆ ಇದು ದೇಹಕ್ಕೆ ಒಳ್ಳೆಯದಲ್ಲ ಹಾಗಾಗಿ ಈ ಬೀಜಗಳನ್ನು ನಾವು ಸೇವಿಸುವುದರಿಂದ ನಮಗೆ ಉಸಿರಾಟದ ತೊಂದರೆ ಉಂಟಾಗುತ್ತದೆ ಎಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ತಲೆನೋವು ವಾಂತಿ ಬಲಹೀನತೆ ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತಿದೆ ಹಾಗಾಗಿ ಇದನ್ನು ಸೇವಿಸಲೇ ಬಾರದು ಮಕ್ಕಳು ಇದನ್ನು ಸೇವಿಸಲೇಬಾರದು
ಮಕ್ಕಳಿಗೆ ಸೇಬು ಹಣ್ಣು ತಿನ್ನಲು ಕೊಡುವಾಗ ಬೀಜಗಳನ್ನು ತೆಗೆದು ಸೇಬುಹಣ್ಣನ್ನು ಕೊಡುವುದು ತುಂಬಾ ಮುಖ್ಯ ಒಂದೆರಡು ಬೀಜಗಳಿಂದ ಅಷ್ಟೇನು ಪರಿಣಾಮ ಬೀರುವುದಿಲ್ಲ ಬಾಯಿಗೆ ಸಿಕ್ಕ ತಕ್ಷಣ ನೋಡುವುದಕ್ಕೆ ಸುಂದರವಾಗಿದೆ ಬಾಯಿಗೆ ರುಚಿಯಾಗಿದೆ ಅಂತ ಆದಷ್ಟು ಸೇಬು ಹಣ್ಣುಗಳನ್ನು ಗಮನಿಸದೆ ಅದರ ಬೀಜಗಳನ್ನು ಸೇವಿಸುವುದರಿಂದ ನಾವು ತುಂಬಾ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಸೇಬುಹಣ್ಣು ತಿನ್ನುವಾಗ ಬೀಜಗಳನ್ನು ಬಿಸಾಡುವುದನ್ನು ಮಾತ್ರ ಮರಿಬೇಡಿ ಚಿಕ್ಕ ಮಕ್ಕಳಿಗೆ ಕೊಡುವಾಗ ಸೂಕ್ಷ್ಮವಾಗಿ ಗಮನಿಸಿ ಕೊಡುವುದು ತುಂಬಾ ಸೂಕ್ತ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಹಾಗೇನೇ ಇಂತಹ ಇನ್ನಷ್ಟು ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನುಲೈಕ್ ಮಾಡಲು ಮರೆಯದಿರಿ.