ಬಿಳಿ ಕೂದಲಿಗೆ ಬೊಂಬಾಟ್ ಮನೆ ಮದ್ದು

ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುವುದು ತುಂಬಾ ಜಾಸ್ತಿ ಆಗಿದೆ. ಹಿಂದಿನ ಕಾಲದಲ್ಲಿ ಸುಮಾರು 80 ವಯಸ್ಸಿನ ವರೆಗೆ ಬಿಳಿ ಕೂದಲು ಬರುತ್ತಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಕಾರಣ ಅಧಿಕ ಒತ್ತಡ ಸೇವಿಸುವ ಆಹಾರ ಕ್ರಮ ಅನುವಂಶೀಯತೆ ಮುಂತಾದ ಕಾರಣಗಳಿಂದ ಕೂದಲು ಬೆಳ್ಳಗೆ ಆಗಬಹುದು. ಉದ್ದವಾದ ಅಂದವಾದ ಕೂದಲು ಇದ್ದು ಇದರಲ್ಲಿ ಬರೀ ಬಿಳಿ ಕೂದಲು ಕಾಣಿಸಿಕೊಂಡರೆ ಮುಜುಗರದ ಪರಿಸ್ಥಿತಿ ಉಂಟಾಗುತ್ತದೆ. ಕೆಲವರಲ್ಲಿ ಉತ್ಸಾಹವೇ ಕಡಿಮೆ ಆಗುತ್ತದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಅನೇಕ ಸೌಂದರ್ಯ ವರ್ಧಕಗಳಿಗೆ ಮೊರೆ ಹೋಗುತ್ತಾರೆ ಅಲ್ಲದೆ ಅಧಿಕ ಹಣ ವ್ಯಯ ಆಗುತ್ತದೆ.

ಆದರೆ ಹಿರಿಯರು ತಿಳಿಸಿರುವ ಕೆಲವು ನೈಸರ್ಗಿಕ ಎಣ್ಣೆಯನ್ನು ನಾವು ಮನೆಯಲ್ಲಿಯೇ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಸಮಸ್ಯೆಗಳಿಂದ ಪಾರಾಗಬಹುದು ಅಲ್ಲದೇ ಆರೋಗ್ಯಕ್ಕೂ ಸಹಕಾರಿ ಎಂದಿದ್ದಾರೆ. ಹಾಗಾದರೆ ಈ ಎಣ್ಣೆ ತಯಾರಿಸುವುದು ಹೇಗೆ ತಿಳಿಯೋಣ ಬನ್ನಿ. ಬೇಕಾಗಿರುವುದು ತಾಜಾ ಕೊಬ್ಬರಿ ಎಣ್ಣೆ ಒಂದು ಬಟ್ಟಲು ಕರಿಬೇವಿನ ಎಲೆ ಒಂದು ಬೌಲ್. ಕೊಬ್ಬರಿ ಎಣ್ಣೆ ಮತ್ತು ಕರಿಬೇವಿನ ಎಲೆಗಳನ್ನು ಒಂದು ಚಿಕ್ಕ ಬೌಲ್ನಲ್ಲಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಸಮಯದ ವರೆಗೆ ಕಡಿಮೆ ಫ್ಲೇಮ್ ನಲ್ಲಿ ಕಾಯಿಸಬೇಕು. ನಂತರ ತಳ ಭಾಗದಲ್ಲಿ ಕಪ್ಪಗಿನ ಪುಡಿ ನಿಂತುಕೊಳ್ಳುತ್ತದೆ ಈ ರೀತಿ ಆದಮೇಲೆ ಕಾಯಿಸಿವುದನ್ನು ನಿಲ್ಲಿಸಿ ಅದನ್ನು ಆರಿಸಿ ನೆತ್ತಿಯ ಮೇಲೆ ತಲೆ ಬುರುಡೆ ಹಾಗೂ ಕೂದಲಿಗೆ ಹಚ್ಚಿ ನಯವಾಗಿ ಮಸಾಜ್ ಮಾಡಿರಿ. ಸುಮಾರು 2 ಗಂಟೆಗಳ ಕಾಲ ಬಿಟ್ಟು ತಲೆ ಸ್ನಾನ ಮಾಡಿರಿ. ಈ ರೀತಿ ವಾರಕ್ಕೆ ನಾಲ್ಕು ಬಾರಿಯಾದರೂ ಮಾಡಬೇಕು. ಎರಡನೆಯದಾಗಿ ಹರಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಉಪಯೋಗಿಸಿ ಬಿಳಿ ಕೂದಲನ್ನು ಕಪ್ಪಗಿಸಬಹುದು.

ಸಾಸಿವೆ ಎಣ್ಣೆ 4 ದೊಡ್ಡ ಚಮಚ ಹರಳೆಣ್ಣೆ 2 ದೊಡ್ಡ ಚಮಚ ಬೇಕಾಗುತ್ತದೆ. ಒಂದು ಚಿಕ್ಕ ಬೌಲ್ ನಲ್ಲಿ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಸ್ಟೌವ್ ಮೇಲೆ ಇಟ್ಟು ಬಿಸಿ ಮಾಡಿ ಇದು ಕೇವಲ ಬೆಚ್ಚಗಾಗುವ ವರೆಗೆ ಮಾತ್ರ ಹೆಚ್ಚಾಗಿ ಕಾಯಿಸ ಬಾರದು ನಂತರ ತಲೆ ಬುರುಡೆ ಹಾಗೂ ಕೂದಲಿಗೆ ಹಚ್ಚಿಕೊಂಡು ಸುಮಾರು 5 ರಿಂದ 10 ನಿಮಿಷ ವರೆಗೆ ಮಸಾಜ್ ಮಾಡಿ ನೆತ್ತಿಯ ಭಾಗಕ್ಕೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಮೃದುವಾಗಿ ಮಸಾಜ್ ಮಾಡಿ ನಂತರ ಒಂದರಿಂದ 2 ಗಂಟೆಗಳ ಕಾಲ ಬಿಟ್ಟು ತಲೆ ಸ್ನಾನ ಮಾಡಿರಿ. ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿಯಾದರೂ ಮಾಡಬೇಕು. ಮೂರನೆಯದಾಗಿ ಕೊಬ್ಬರಿ ಎಣ್ಣೆ 4 ದೊಡ್ಡ ಚಮಚ ಮದರಂಗಿಯ ಎಲೆಗಳು ಒಂದು ಬೌಲ್ ನಷ್ಟು. ಇವುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಚೆನ್ನಾಗಿ ಕಾಯಿಸಿ ಫ್ಲೇಮ್ ಕಡಿಮೆ ಮಾಡಿ ಒಂದು ಸ್ಪೂನ್ ಯಿಂದ ತಿರುವುತ್ತಾ ಕಾಯಿಸಿ. ಮದರಂಗಿ ಎಲೆಗಳು ಕಂದು ಬಣ್ಣಕ್ಕೆ ಬಂದಾಗ ಸ್ಟೌವ್ ಆಫ್ ಮಾಡಿ ಬೌಲ್ ಕೆಳಗಿಳಿಸಿ ಎಣ್ಣೆಯನ್ನು ತಣ್ಣಗಾದ ಮೇಲೆ ಅದನ್ನು ಶೋಧಿಸಿ ತಲೆಗೆ ಹಚ್ಚಿ ನಂತರ ತಲೆ ಸ್ನಾನ ಮಾಡಿರಿ.

Leave a Reply

Your email address will not be published.