ಮೊಳಕೆ ಕಾಳುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ಔಷಧಿ

ಮನೆ ಮದ್ದು

ನಮ್ಮ ದೇಹದಲ್ಲಿ ನಮಗೆ ಶಕ್ತಿ ಬೇಕಾದರೆ ದೇಹವನ್ನು ನಾವು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದರೆ ವೈದ್ಯರು ನಮಗೆ ಮೊದಲು ಹೇಳುವ ಮಾತು ಹಸಿರು ತರಕಾರಿ ಸೊಪ್ಪು ತಿನ್ನಿರಿ ಎಂದು ಇವುಗಳ ಜೊತೆಗೆ ಮೊಳಕೆ ಕಾಳುಗಳು ಸಹ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ಈ ಮೊಳಕೆ ಕಟ್ಟಿದ ಕಾಳುಗಳಲ್ಲಿ ವಿಟಮಿನ್ ಅಂಶ ಹೆಚ್ಚಾಗಿ ಇರುತ್ತದೆ ಹಾಗಾಗಿ ಇವು ನಮ್ಮ ದೇಹಕ್ಕೆ ತುಂಬಾ ಸೂಕ್ತ. ಜೊತೆಗೆ ಮೊಳಕೆ ಕಾಳುಗಳನ್ನು ಸೇವಿಸುವುದು ಬರಿ ಬಾಯಿ ರುಚಿಗೆ ಮಾತ್ರವಲ್ಲದೆ ಅದರಲ್ಲಿ ಹಲವಾರು ರೋಗ ನಿರೋಧಕ ಶಕ್ತಿ ಕೂಡ ಇದೆ. ಮೊಳಕೆ ಕಾಳಿನಲ್ಲಿ ಹಲವು ರೋಗ ನಿರೋಧಕ ಶಕ್ತಿಗಳಿವೆ ಮೊಳಕೆ ಕಾಳಿನಲ್ಲಿ ಹಲವು ಉತ್ತಮ ಆರೋಗ್ಯಕ್ಕೆ ಸಹಕಾರಿ ಆಗುವಂತಹ ಅಂಶಗಳು ಕೂಡ ಇವೆ ಅದರಲ್ಲೂ ಮನುಷ್ಯನ ದೇಹಕ್ಕೆ ಮೊಳಕೆ ಕಾಳುಗಳು ತುಂಬಾ ಉತ್ತಮ ಹೇಗೆ ಅನ್ನೋದನ್ನ ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.

ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಮೊಳಕೆ ಕಾಳುಗಳನ್ನು ತಿನ್ನುವುದು ಒಳ್ಳೆಯದು ಇದರಲ್ಲಿ ಇರುವಂತಹ ಪೋಷಕಾಂಶಗಳು ಆಹಾರವು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತವೆ ರ ಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟು ಇರುತ್ತದೆ ಇದು ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ಇದು ನೋಡಿಕೊಳ್ಳುತ್ತದೆ. ಇನ್ನು ತೂಕ ಇಳಿಸಲು ವ್ಯಾಯಾಮ ಮಾಡುವವರು ತಮ್ಮ ಆಹಾರದ್ಲಲಿ ಮೊಳಕೆ ಕಾಳು ಇರಲೇಬೇಕು ಇದರಲ್ಲಿ ಫೈಬರ್ ಅಂಶ ಸಾಕಷ್ಟು ಇದ್ದು ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಇದರಿಂದಾಗಿ ಆಗಾಗ ಹೊಟ್ಟೆ ಹಸಿಯುವುದಿಲ್ಲ ನಾಲಿಗೆ ಮೇಲು ಸಹ ಈ ಮೊಳಕೆ ಕಾಳುಗಳಿಂದ ಕಡಿವಾಣವನ್ನು ಹಾಕಬಹುದು ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿ ಇದೆ ಇದರಲ್ಲಿ ವಿಟಮಿನ್ ಎ ಅಂಶವು ಕೂಡ ಹೆಚ್ಚಾಗಿ ಇದೆ.

ಹಾಗಾಗಿ ಸ್ನೇಹಿತರೆ ನಮ್ಮ ಊಟದಲ್ಲಿ ಹಸಿರು ಸೊಪ್ಪು ತರಕಾರಿಗಳನ್ನು ನಾವು ಎಷ್ಟು ಹೆಚ್ಚಾಗಿ ಬಳಸುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ಮೊಳಕೆ ಕಾಳುಗಳನ್ನು ಸಹ ನಾವು ಬಳಸಬೇಕು ಇದರಿಂದ ನಮಗೆ ಉತ್ತಮ ಅಗೋಗ್ಯ ದೊರೆಯುತ್ತದೆ. ನೀವು ಸಹ ಊಟದಲ್ಲಿ ತರಕಾರಿಯನ್ನು ಬಳಸುವುದರ ಜೊತೆಗೆ ಮೊಳಕೆ ಕಾಳುಗಳನ್ನು ಬಳಸಿ ಹಾಗೇನೇ ಮೊಳಕೆ ಕಾಳುಗಳನ್ನು ರಾತ್ರಿ ನೆನಸಿಟ್ಟು ಅವು ಮೊಳಕೆ ಬಂದ ನಂತರ ಬೆಳಿಗ್ಗೆ ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಶಕ್ತಿ ಕೂಡ ಸಿಗುತ್ತದೆ ಇದು ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಆದ್ದರಿಂದ ಚಿಕ್ಕ ಮಕ್ಕಳಿಗೂ ಕೂಡ ಹೀಗೆ ನೆನಸಿದ ಕಾಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಆರೋಗ್ಯ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.