ಸೃಷ್ಟಿಕರ್ತರಾದ ತ್ರಿಮೂರ್ತಿಗಳ ಸೃಷ್ಟಿಯ ರಹಸ್ಯ

ದೇವರು

ಈ ಪ್ರಪಂಚದಲ್ಲಿ ಪ್ರತಿಯೊಬ್ಬರು ದೇವರಿಗಾಗಿ ಹುಡುಕುತ್ತಿದ್ದಾರೆ ತಾವು ಹುಡುಕುತ್ತಿದ್ದೇವೆ ಎಂದು ಕೆಲವರಿಗೆ ತಿಳಿಯದು ಆದರೂ ದೇವರನ್ನು ಹುಡುಕುತ್ತಿದ್ದಾರೆ ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿ ಇರುವ ಎಲ್ಲದರ ಮೂಲ ದೇವರು ಈಗ ಇರುವ ಹಿಂದೆ ಇದ್ದ ಮತ್ತು ಮುಂದೆ ಇರುವ ಎಲ್ಲದರ ಕಾರಣ ದೇವರು ದೇವರಿಗೆ ಮಿತಿ ಇಲ್ಲ ಆದ್ದರಿಂದ ಅವನಿಗೆ ಹಲವಾರು ಹೆಸರುಗಳಿವೆ ಅಲ್ಲ ಬುದ್ಧ ಯೇಸು ಜಿಹೋವಾ ರಾಮ ಹೀಗೆ ಎಲ್ಲರೂ ದೇವರೇ ಎಲ್ಲರೂ ಒಂದೇ ಎಲ್ಲ ದೇವರು ಭೂಮಿಯ ಮೇಲೆ ಧರ್ಮವನ್ನು ಸ್ಥಾಪಿಸಲು ಧರ್ಮವನ್ನು ನಡೆಸಲು ಧರ್ಮವನ್ನು ಸಂರಕ್ಷಿಸಲು ಬೇರೆ ಬೇರೆ ರೂಪದಲ್ಲಿ ಬಂದು ಧರ್ಮವನ್ನು ಹೇಳಿಕೊಟ್ಟರು ದೇವರು ಧರ್ಮವನ್ನು ಸ್ಥಾಪಿಸಿದರು ಅದೇರೀತಿ ಧರ್ಮದ ಬೆಲೆ ತಿಳಿಯಲೆಂದು ಅಧರ್ಮವನ್ನು ಕೂಡ ಸೃಷ್ಟಿಸಿದರು ಒಂದುವೇಳೆ ಅಧರ್ಮ ಮಿತಿಮೀರಿದರೆ ಅಧರ್ಮದ ನಿರ್ಮೂಲನೆಗೆ ಕಾರಣನು ದೇವರೇ ಆದರೂ ಹೀಗೆ ಈ ಎಲ್ಲ ದೇವರು ತಮ್ಮ ಪುರಾಣ ಗ್ರಂಥಗಳಲ್ಲಿ ಹೇಳಿದ್ದು ಅಂದರೆ ಕುರಾನ್ ಬೈಬಲ್ ಭಗವತ್ ಗೀತೆಯಲ್ಲಿ ಹೇಳಿದ್ದು

ಒಂದೇ ಇವುಗಳಲ್ಲಿ ಇರುವ ಎಲ್ಲ ತತ್ವವು ಕೂಡ ಒಂದೇ ಅದೇ ಲಾ ಕರ್ಮ ಯದ್ವಾವಂ ತತ್ವವತಿ ನಾವು ಹೇಗೆ ಯೋಚನೆ ಮಾಡುತ್ತೇವೋ ಅದೇರೀತಿ ನಾವು ತಯಾರಾಗುತ್ತೇವೆ ಎಂದು ಇದನ್ನು ಅರ್ಥ ಮಾಡಿಕೊಂಡಂತವರು ವಿದ್ವಾಂಸರಾಗಿ ಪುಸ್ತಕಗಳನ್ನು ಬರೆಯುತ್ತಿದ್ದಾರೆ ಹಾಗೆ ದೊಡ್ಡ ದೊಡ್ಡ ಸ್ಥಾಯಿಗಳಿಗೆ ಹೋಗುತ್ತಿದ್ದಾರೆ ಇದನ್ನರಿಯದ ನಾವು ಪ್ರಾಪಂಚಿಕ ಸುಖಗಳಿಗಾಗಿ ಮತ್ತು ಇಂದ್ರಿಯ ಸುಖಗಳಿಗಾಗಿ ನಮ್ಮ ಬುದ್ಧಿಶಕ್ತಿಯನ್ನು ಅಹ್ಮ್ ನ ಕೈಗೆ ಕೊಟ್ಟು ಕೊಳೆಯಾದ ಕನ್ನಡಿಯಂತೆ ನಮ್ಮ ಪ್ರತಿಬಿಂಬವನ್ನು ನಾವೇ ಗುರುತಿಸಲು ಸಾಧ್ಯವಾಗದಂತ ಜೀವನವನ್ನು ನಾವು ನಡೆಸುತ್ತಿದ್ದೇವೆ ಇಲ್ಲಿ ನಮ್ಮ ಉದ್ದೇಶ ಒಂದೇ ಎಲ್ಲ ದೇವರುಗಳು ಎಲ್ಲ ಧರ್ಮಗಳು ಒಂದೇ ಎಂದು. ನಮಗೆ ಈ ಸೃಷ್ಟಿ ಅಂದರೆ ಈ ಭೂಮಿ ಹೇಗೆ ಸೃಷ್ಟಿಯಾಯಿತು. ಎಂದು ವಿಜ್ಞಾನದ ಪ್ರಕಾರ ತಿಳಿದುಕೊಂಡಿದ್ದೇವೆ ಆದರೆ ನಮ್ಮ ಹಿಂದೂ ಪುರಾಣಗಳ ಪ್ರಕಾರ ಈ ಜಗದೊತ್ಪತ್ತಿ ಹೇಗೆ ಆಯಿತು ಹಾಗೆ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರ ಸೃಷ್ಟಿ ಹೇಗಾಯಿತು ಎಂದು ನಮ್ಮಲ್ಲಿ ಕೆಲವರಿಗೆ ಮಾತ್ರ ಗೊತ್ತಿರುವಂತಹ ವಿಷಯವಾಗಿದೆ. ಈ ಅಂಡ ಪಿಂಡ ಬ್ರಹ್ಮಾನಂದ ದಲ್ಲಿನ ಸೃಷ್ಟಿ ಸ್ಥಿತಿ ಲಯಾದಿಗಳಿಗೆ ಕಾರಣ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು.

ಸಚ್ಚಿದಾನಂದ ಸ್ವರೂಪನಾದ ಪರಮಾತ್ಮನು ಎಷ್ಟೋ ಅನಂತ ವರ್ಷಗಳ ಕಾಲದ ವರೆಗೆ ಆತ್ಮಾನಂದದಲ್ಲಿ ಲಿನನಾಗಿದ್ದನು ಮುಂದೆ ಈ ಆದಿಮೂರ್ತಿಯಿಂದ ಅವ್ಯಕ್ತವೂ ಸೃಷ್ಟಿಯಾಯಿತು ಈ ಅವ್ಯಕ್ತದಿಂದ ಆತ್ಮ ಆತ್ಮದಿಂದ ಬುದ್ದಿ ಬುದ್ದಿಯಿಂದ ಮನಸ್ಸು ಸೃಷ್ಟಿಯಾಗಿ ಈ ಮನಸ್ಸಿನಿಂದ ಆಕಾಶವನ್ನು ಉಂಟುಮಾಡಿದನು ಈ ಆಕಾಶದಿಂದ ವಾಯುವನ್ನು ವಾಯುವಿನಿಂದ ಅಗ್ನಿಯನ್ನು ಅಗ್ನಿಯಿಂದ ಜಲವನ್ನು ಜಲದಿಂದ ಈ ಅಂಡವನ್ನು ಅಂದರೆ ಈ ಪೃತ್ವಿಯನ್ನು ನಿರ್ಮಿಸಿ ಪ್ರಳಯ ಕಾಲದಲ್ಲಿ ಸಂರಕ್ಷಿಸು ವಂತಹ ವಟ ಪತ್ರ ಶಾಹಿಯು ಇವನೇ ಆಗಿದ್ದನು ಹೀಗೆ ಜಗದೋದ್ದಾರನು ಸಪ್ತ ಲೋಕಗಳು ಸಪ್ತ ಸಮುದ್ರಗಳು ಸಪ್ತ ದ್ವೀಪಗಳು ಕುಡಿದ ಭೂಮಿಯನ್ನು ಸೃಷ್ಟಿಸಿದನು ಕೆಲಕಾಲದ ನಂತರ ಸೃಷ್ಟಿ ಸ್ಥಿತಿ ಲಯಾದಿಗಳಿಗೆ ಕಾರಣರಾದಂತಹ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿದನು ಬ್ರಹ್ಮನಿಗೆ ಸೃಷ್ಟಿಸುವ ಮತ್ತು ವಿಷ್ಣುವಿಗೆ ಸ್ಥಿತಿ ಎಂದರೆ ಸರ್ವ ಪ್ರಾಣಿಗಳು ಮಾಡುವಂತಹ ಧರ್ಮಾಧರ್ಮಗಳನ್ನು ಲೆಕ್ಕಿಸುವಂತಹ ಮತ್ತು ಅಂತ್ಯ ಎಂದರೆ ಲೋಕ ವಿನಾಶದ ಕಾಲದಲ್ಲಿ ಲೋಕ ಸಂರಕ್ಷಕನಾಗಿ ಮಹೇಶ್ವರ ಹೀಗೆ ಎಲ್ಲ ತ್ರಿಮೂರ್ತಿಗಳಿಗೂ ಅವರವರ ಕಾರ್ಯಗಳನ್ನು ತಿಳಿಸಿ ಕೊಟ್ಟನು ನಂತರ ಪರಮಾತ್ಮನ ನಿಯಮದಂತೆ ಸಕಲ ಕಾರ್ಯಗಳು ಸಂಯಂತ್ರಿತವಾಗಿ ಸಾಗುವಂತೆ ಮಾಡಿದನು ಹೀಗೆ ಜಗದೊತ್ಪತ್ತಿ ಹಾಗೂ ಸೃಷ್ಟಿಯ ನಿಯಮಗಳನ್ನು ಕಾಪಾಡಲು ತ್ರಿಮೂರ್ತಿ ಗಳಾದಂತಹ ಬ್ರಹ್ಮ ವಿಷ್ಣು ಮಹೇಶ್ವರರ ಸೃಷ್ಟಿಯಾಯಿತು.

Leave a Reply

Your email address will not be published.