ಬಾಳೆ ಹಣ್ಣಿನಲ್ಲಿ ಏನೆಲ್ಲ ಪೋಷಕಾಂಶಗಳು ಇವೆ ನೋಡಿ. ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮತ್ತು ನಮ್ಮ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಲು ಹಾಗೇನೇ ನಮ್ಮ ದೇಹದ ಸುಸ್ತನ್ನು ನಿವಾರಿಸಿಕೊಳ್ಳಲು ಹೀಗೆ ಹಲವಾರು ಕಾರಣದಿಂದಾಗಿ ನಾವು ಹಲವಾರು ಬಗೆಯ ಹಣ್ಣುಗಳನ್ನು ತಿನ್ನುತ್ತೇವೆ ಹಾಗಾದ್ರೆ ಈ ಬಾಳೆ ಹಣ್ಣು ಯಾವ ಸಮಯದಲ್ಲಿ ತಿನ್ನಬೇಕು. ಒಂದೊಂದು ಹಣ್ಣಿನಲ್ಲಿ ಒಂದು ಪೋಷಕಾಂಶಗಳ ಜೊತೆಗೆ ನಮಗೆ ಉಪಯುಕ್ತ ಇರುವ ಅಂಶಗಳು ಸಹ ಇರುತ್ತವೆ ಹಾಗೇನೇ ಅದರಲ್ಲಿ ಅತ್ಯಂತ ಕಡಿಮೆ ಬೆಲೆಗೆ ಎಲ್ಲ ಕಡೆ ದೊರೆಯುವಂತಹ ಒಂದು ಹಣ್ಣು ಎಂದರೆ ಅದು ಬಾಳೆಹಣ್ಣು ಈ ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಮಲಬದ್ಧತೆ ಸಮಸ್ಯೆ ಇರುವವರು ಪ್ರತಿದಿನ ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೇನೇ ಉಷ್ಣ ದೇಹ ಇರುವವರಿಗೆ ಇದು ತುಂಬಾನೇ ಒಳ್ಳೆಯ ಹಣ್ಣು ಎಂದು ಹೇಳಬಹುದು
ಹಾಗಾದರೆ ಈ ಬಾಳೆಹಣ್ಣಿನ ಮೂಲ ಯಾವುದು ಮೊದಲು ಈ ಹಣ್ಣನ್ನು ಎಲ್ಲಿ ಬೆಳೆಯುತ್ತಿದ್ದರು ಇದರಲ್ಲಿ ಯಾವ ಯಾವ ಪೋಷಕಾಂಶಗಳು ಇವೆ ಎಂದು ಪ್ರತಿಯೊಬ್ಬರಿಗೂ ಗೊತ್ತಿರುವುದು ತುಂಬಾನೇ ಕಷ್ಟ ಸಾಧ್ಯ. ಬಾಳೆಹಣ್ಣು ಉತ್ತಮ ಆರೋಗ್ಯವನ್ನು ವೃದ್ಧಿಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಪ್ರತಿಯೊಬ್ಬರು ಬಾಳೆ ಹಣ್ಣನ್ನು ತಿನ್ನುತ್ತಾರೆ ಹಾಗೆ ಅದರ ರುಚಿ ಕೂಡ ನೋಡಿರುತ್ತಾರೆ. ಈ ಬಾಳೆಹಣ್ಣನ್ನು ಇಷ್ಟ ಪಡದೆ ಇರುವವರು ಬಹಳ ಕಡಿಮೆ ಜನ ಇದು ಆಹಾರ ಜೀರ್ಣವಾಗಲು ತುಂಬಾ ಸಹಾಯಕಾರಿಯಾಗಿವೆ. ತುಂಬಾ ಜನ ಬಾಳೆಹಣ್ಣಿನ ಮೂಲ ಭಾರತ ಅಂದುಕೊಂಡಿದ್ದಾರೆ ಆದರೆ ಬಾಳೆಹಣ್ಣಿನ ಮೂಲ ನಮ್ಮ ದೇಶ ಅಲ್ಲವೇ ಅಲ್ಲ. ಹಾಗಾದರೆ ಬಾಳೆಹಣ್ಣು ಯಾವ ದೇಶಕ್ಕೆ ಸೇರಿದ್ದು ಎನ್ನುವ ಈ ಕುತೂಹಲಕಾರಿ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಬಾಳೆಹಣ್ಣು ಮೊದಲು ಆಗ್ನೇಯ ಏಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಬೆಳೆಯಲಾಯಿತು ಅಲ್ಲಿನ ಅರಣ್ಯಗಳಲ್ಲಿ ಕಾಡುಬಾಳೆ ಬೆಳೆಯುತ್ತಿತ್ತು ಅನೇಕ ವರ್ಷಗಳ ನಂತರ ಕಾಡುಬಾಳೆಯನ್ನು ಸೂಕ್ತ ವಿಧಾನದಲ್ಲಿ ಬೆಳೆಸಲಾಯಿತು
ಇದರ ಫಲವಾಗಿ ರುಚಿಕರವಾದ ಬಾಳೆಹಣ್ಣು ದೊರೆಯಿತು ಕಾಲ ಕಳೆದಂತೆ ಬಾಳೆಹಣ್ಣು ತುಂಬಾ ಜನಪ್ರಿಯತೆ ಪಡೆಯಿತು ಇದರಿಂದ ಬಾಳೆಹಣ್ಣನ್ನು ವಿಶ್ವದೆಲ್ಲೆಡೆ ಬೆಳೆಯಲು ಪ್ರಾರಂಭಿಸಿದರು. ಬಾಳೆಹಣ್ಣಿನಲ್ಲಿ ಪ್ರತಿಶತ 74 ರಷ್ಟು ನೀರು ಹಾಗೂ 20 ರಷ್ಟು ಸಕ್ಕರೆ 2ರಷ್ಟು ಪ್ರೊಟೀನ್ ಮತ್ತು 1.7ರಷ್ಟು ಜಿಡ್ಡು ಪಧಾರ್ಥ ಮತ್ತು 1 ರಷ್ಟು ಸೇಲ್ಲಿಲೋಸ್ ಬೆಳೆದಿರುತ್ತವೆ. ಈ ಹಣ್ಣಿನಲ್ಲಿ ಎ ಸಿ ಬಿ1 ಬಿ2 ವಿಟಮಿನಗಳು ಸಹ ಇರುತ್ತವೆ. ಬಾಳೆಹಣ್ಣನ್ನು ಒಣಗಿಸಿ ಹಿಟ್ಟನ್ನು ಸಹ ಮಾಡುತ್ತಾರೆ ಆಫ್ರಿಕಾದ ಜನರು ತಮ್ಮ ಗುಡಿಸಲಿಗೆ ಬಾಳೆ ಎಲೆಯನ್ನು ಹಾಕಿ ಮುಚ್ಚುತ್ತಾರೆ ಬಾಳೆಗಿಡವನ್ನು ಒಣಗಿಸಿ ಅದರ ನಾರಿನಿಂದ ಹಗ್ಗವನ್ನು ಸಹ ತಯಾರಿಸುತ್ತಾರೆ ಬಾಳೆಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಸಣ್ಣಗೆ ಇರುವವರು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು ನಿಯಮಿತವಾಗಿ ಬಾಳೆಹಣ್ಣು ಸೇವಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಹಾಗೆಯೇ ಈ ಬಾಳೆ ಹಣ್ಣು ಕೆಲವರು ರಾತ್ರಿ ಸಮಯ ಸೇವನೆ ಮಾಡ್ತಾರೆ ಆದ್ರೆ ಇದು ತಪ್ಪು ಬಾಳೆ ಹಣ್ಣು ಸೇವನೆ ಯಾವಾಗ ಮಾಡಬೇಕು ಅಂದ್ರೆ ಮದ್ಯಾನ್ಹ ಊಟದ ನಂತರ ಮಾತ್ರ ಮಾಡಬೇಕು ಮತ್ತು ಬಾಳೆ ಹಣ್ಣು ತಿಂದ ತಕ್ಷಣ ಅರ್ದ ಗಂಟೆ ಯಾವುದೇ ಕಾರಣಕ್ಕೂ ಸಹ ನೀರು ಕುಡಿಯಬಾರದು.