ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಈ ಒಂದು ಸಸ್ಯ

ಮನೆ ಮದ್ದು

ಮರೆವು ಎನ್ನುವುದು ತುಂಬಾ ಜನಕ್ಕೆ ಇರುತ್ತದೆ ಕೆಲವೊಮ್ಮೆ ಯಾವುದೋ ಸ್ಥಳಕ್ಕೆ ಹೋಗಿ ನಾವೇಕೆ ಇಲ್ಲಿಗೆ ಬಂದಿದ್ದೇವೆ ಎನ್ನುವುದೇ ಮರೆತು ಹೋಗಿರುತ್ತದೆ ಇನ್ನು ಕೆಲವೊಮ್ಮೆ ಯಾವುದೋ ಒಂದು ವಸ್ತುವನ್ನು ಎಲ್ಲೋ ಇಟ್ಟಿರುತ್ತೇವೆ ಆ ವಸ್ತುವನ್ನು ಎಲ್ಲಿ ಇಟ್ಟಿದೀವಿ ಎನ್ನುವುದು ನೆನಪೇ ಆಗುವುದಿಲ್ಲ ಈ ರೀತಿ ಅನುಭವ ಜೀವನದಲ್ಲಿ ಒಂದು ಬಾರಿಯಾದರೂ ಎಲ್ಲರಿಗೂ ಕೂಡ ಆಗಿರುತ್ತದೆ ಇದಕ್ಕೆ ಪರಿಹಾರ ಇದೆಯಾ ಎಂದು ತುಂಬಾ ಜನರನ್ನು ನೀವು ಕೇಳಿರುತ್ತೀರಿ ಅಷ್ಟಕ್ಕೂ ಈ ಮರೆವಿಗೆ ಪರಿಹಾರ ಇದೆಯಾ ಎಂದು ಕೇಳುವುದಾರೆ ಖಂಡಿತ ಅದಕ್ಕೆ ಪರಿಹಾರ ಇದೆ ಒಂದೆಲಗ ಅಥವಾ ಬ್ರಾಂಹೀಗಿಡ ಈ ಗಿಡವು ನಿಮ್ಮ ಮನೆಯ ಅಂಗಳದಲ್ಲಿ ಹಿತ್ತಲಲ್ಲಿ ಹೀಗೆ ನಿಮ್ಮ ಸುತ್ತ ಮುತ್ತಲು ಈ ಗಿಡ ಬೆಳೆಯುತ್ತದೆ ಮಳೆಗಾಲದಲ್ಲಿ ಹೆಚ್ಚಾಗಿ ಇದು ಸಿಗುತ್ತದೆ ನೆನಪಿನ ಶಕ್ತಿಯನ್ನು ಹೆಚ್ಚಿಸಬಲ್ಲ ಇದರ ಎಲೆಗಳು ಮೆದುಳಿನ ಆಕಾರದಲ್ಲಿ ಇರುತ್ತದೆ ಗ್ರಹಣ ಶಕ್ತಿಯನ್ನು ಜಾಸ್ತಿ ಮಾಡಬಲ್ಲ ಇದು ಮೆದುಳಿನ ಟಾಣಿಕ್ ಇದ್ದಂತೆ ಇದರ ಎಲೆಯನ್ನು ದಂಟು ಸಮೇತ 48 ದಿನಗಳವರೆಗೆ ಹಸಿಯಾಗಿ ಸೇವಿಸಿದರೆ ಒಳ್ಳೆಯದು.

ಇದರ ಸೇವನೆಯಿಂದ ದೇಹ ದಾರ್ಢ್ಯತೆ ಹೆಚ್ಚುತ್ತದೆ ಸೊಂಟನೋವು ಬೆನ್ನುಹುರಿ ಕುತ್ತಿಗೆ ನೋವಿಗೆ ಇದು ರಾಮಬಾಣ. ಸಂಗೀತಗಾರರು ಇದನ್ನು ಸೇವಿಸಿದರೆ ನಿಮ್ಮ ರಾಗವೂ ಕೂಡ ಉತ್ತಮಗೊಳ್ಳುತ್ತದೆ. ಗರ್ಭಿಣಿಯರು ಸೇವಿಸಿದರೆ ಅವರ ದೇಹ ದಾರ್ಢ್ಯತೆ ಹೆಚ್ಚುವುದರೊಂದಿಗೆ ಹುಟ್ಟುವ ಮಗು ಕೂಡ ಬುದ್ಧಿವಂತವಾಗಿ ಹುಟ್ಟುತ್ತದೆ ಹಾಗಾಗಿಯೇ ಇದನ್ನು ಸರಸ್ವತಿ ಅಂತಾನೂ ಕರೆಯಲಾಗುತ್ತದೆ. ಇದನ್ನು ನೆಲ್ಲಿಕಾಯಿಯೊಂದಿಗೆ ಸೇರಿಸಿ ತಯಾರಿಸಿದ ತೈಲವನ್ನು ತಲೆಗೆ ಹಚ್ಚಿಕೊಂಡರೆ ಸೊಂಪಾದ ಕೂದಲು ಜೊತೆ ಒಳ್ಳೆಯ ನಿದ್ದೆ ಕೂಡ ಬರುತ್ತದೆ. ಇಷ್ಟೆಲ್ಲ ಉಪಯೋಗದ ಜೊತೆಗೆ ಈ ಒಂದೆಲಗ ಅಡುಗೆಗೂ ಸಹ ತುಂಬಾ ಉಪಯುಕ್ತವಾಗಿದೆ ಮಲೆನಾಡಿನ ಹಳ್ಳಿಗಳಲ್ಲಿ ಈ ಸಸ್ಯದ ಬಗ್ಗೆ ಕೇಳಿನೋಡಿ ಇದನ್ನು ಅಲ್ಲಿ ಜನರು ಹೆಚ್ಚಾಗಿ ಚಟ್ನಿಗೆ ಹಾಗೂ ತಂಬುಳಿಗೆ ಬಳಸುತ್ತಾರೆ ಇದರ ಇನ್ನಷ್ಟು ಉಪಯೋಗ ಎಂದರೆ ಇದು ಜ್ಞಾನಕಾರಕ ಕಫ ಹಾಗೂ ಪಿತ್ತದೋಷವನ್ನು ನಿವಾರಣೆ ಮಾಡುತ್ತದೆ. ಚರ್ಮರೋಗ ವಿನಾಶಕ ಅಪಸ್ಮಾರ ವಿದ್ದಲ್ಲಿ ಇದರ ಸೇವನೆ ಒಳ್ಳೆಯದು ಅಜೀರ್ಣ ನಾಶಕ ಕೂಡ ಹೌದು ಹೃದ್ರೋಗ ಶ್ವಾಸಕೋಶದ ತೊಂದರೆ ಮಧುಮೇಹವನ್ನು ಹೋಗಲಾಡಿಸಲು ಇದು ಸಹಕಾರಿ

ಬಾಣಂತಿಯರಿಗೆ ಎದೆಹಾಲನ್ನು ಹೆಚ್ಚಿಸಲು ಕೂಡ ಇದು ತುಂಬಾ ಉಪಯುಕ್ತವಾಗಿದೆ. ಇಷ್ಟೆಲ್ಲ ಉಪಯೋಗ ಇರುವ ಈ ಸಸ್ಯ ನಿಮ್ಮ ಮನೆ ಹತ್ತಿರ ಇದ್ದರೆ ಇನ್ನು ತಡಮಾಡದೆ ಕೂಡಲೇ ಅದನ್ನು ಬಳಸಲು ಪ್ರಾರಂಭಿಸಿ ನಗರ ಪ್ರದೇಶಗಳಲ್ಲಿ ಇರುವವರು ಕೂಡ ಇದನ್ನು ಸುಲಭವಾಗಿ ಬೆಳಸಬಹುದು ಅದು ಹೇಗೆಂದರೆ ಒಂದು ಸಣ್ಣ ಹೂವಿನ ಕುಂಡಲಿನಲ್ಲಿ ಸಹ ಇದನ್ನು ಸುಲಭವಾಗಿ ಬೆಳೆಸಬಹುದು ಅಲ್ಲಿಯೂ ಕೂಡ ಇದು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಹೀಗೆ ಮಕ್ಕಳಿಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಂತಹ ಈ ಒಂದು ಒಂದೆಲಗ ಎಲೆಯನ್ನು ನೀವು ಸಹ ಮನೆಯಲ್ಲಿ ಪ್ರತಿನಿತ್ಯ ಬಳಸಿರಿ ಮತ್ತು ಅದರ ಸದುಪಯೋಗ ಪಡೆಯಿರಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.