ಪ್ರಯಾಣ ಮಾಡೋವಾಗ ವಾಕರಿಕೆ ಅನುಭವ ಆದ್ರೆ ತಕ್ಷಣ ಹೀಗೆ ಮಾಡಿರಿ

ಮನೆ ಮದ್ದು

ಪದೇ ಪದೇ ವಾಂತಿಯಾಗಲು ಕಾರಣ ಇಲ್ಲಿದೆ ನೋಡಿ. ನಾವು ಎಲ್ಲಿಗಾದರು ಪ್ರಯಾಣ ಮಾಡುವಾಗ ಮತ್ತು ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ ಅಥವಾ ಅತಿಯಾಗಿ ತಿಂದಾಗ ವಾಕರಿಕೆ ಬಂದ ಹಾಗೆ ಅನಿಸುತ್ತದೆ ಆದರೆ ಪ್ರತಿಬಾರಿಯೂ ವಾಕರಿಕೆ ಉಂಟಾದಾಗ ನೀವು ವಾಂತಿ ಮಾಡಬೇಕೆಂದಿಲ್ಲ ಮತ್ತು ವಾಕರಿಕೆ ಸದಾ ವಾಂತಿಗೆ ಕಾರಣಾವಾಗುವುದು ಇಲ್ಲ ಹಾಗಾದರೆ ವಾಂತಿಯಾಗಲು ನಿಖರ ಕಾರಣವೇನು ಮತ್ತು ನೀವು ವೈದ್ಯರನ್ನು ಯಾವಾಗ ಭೇಟಿಯಾಗಬೇಕು ಅಥವಾ ವಾಂತಿ ನಿರೋಧಕಗಳು ಅಥವಾ ಮನೆಮದ್ದುಗಳನ್ನು ಯಾವಾಗ ಬಳಸಬಾರದು ಈ ಎಲ್ಲ ನಿಮ್ಮ ಗೊಂದಲಮಯ ಪ್ರಶ್ನೆಗಳಿಗೆ ಉತ್ತರ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ. ಪ್ರಯಾಣ ಸ್ವಸ್ಥತೆ ಇದು ಕಾರು ದೋಣಿ ಬಸ್ಸು ಅಥವಾ ಯಾವುದೇ ಚಲಿಸುವ ವಾಹನದಲ್ಲಿ ಪ್ರಯಣಿಸುತ್ತಿದ್ದಾಗ ಕಾಣಿಸಿಕೊಳ್ಳುತ್ತದೆ. ವಿಷಾಹಾರದ ಸೇವನೆ ಕಲಬೆರಕೆಯ ಅಥವಾ ಹಳಸಿದ ಆಹಾರ ಸೇವಿಸಿದಾಗ ವಾಕರಿಕೆ ಅಥವಾ ವಾಂತಿ ಆಗುತ್ತದೆ

ಜಠರ ಅಥವಾ ಕರುಳಿನ ಯಾವುದೇ ಸೋಂಕು ಇದ್ದಾಗ ಕೂಡ ವಾಂತಿ ಬಂದಂತೆ ಆಗುತ್ತದೆ. ಹೊಟ್ಟೆಯ ಸಮಸ್ಯೆಗಳು ನೀವು ಸೇವಿಸಿದ ಆಹಾರ ಜಠರ ಅಥವಾ ಕರುಳನ್ನು ಹಾದು ಹೋಗಿರದಿದ್ದರೆ ಅಥವಾ ಅದಕ್ಕೆ ಕರುಳಿನಲ್ಲಿ ತಡೆ ಉಂಟಾಗಿದ್ದರೆ ವಾಕರಿಕೆ ಅಥವಾ ವಾಂತಿ ಆಗಬಹುದು. ಜಠರ ಕರುಳಿನ ಅನ್ನನಾಳದ ಕಾಯಿಲೆ ಇದು ಅನ್ನನಾಳದ ಸ್ನಾಯುಗಳು ತಪ್ಪು ಹೊತ್ತಿನಲ್ಲಿ ಸಡಿಲಗೊಂಡು ಗ್ಯಾಸ್ಟ್ರಿಕ್ ದ್ರವಗಳನ್ನು ಮರಳಿ ಅನ್ನನಾಳಕ್ಕೆ ಕಳಿಸುವ ಸ್ಥಿತಿಯಾಗಿದ್ದು ಇದು ವಾಕರಿಕೆ ಅಥವಾ ವಾಂತಿಗೆ ಕಾರಣವಾಗುತ್ತದೆ. ಅರೆ ತಲೆನೋವು ಮೈಗ್ರೇನ್ ಅಥವಾ ಅರೆತಲೆನೋವಿನಿಂದ ಬಳಲುತ್ತಿರುವವರಿಗೂ ಸಹ ವಾಕರಿಕೆ ಅಥವಾ ವಾಂತಿ ಆಗಬಹುದು. ಇನ್ನು ಔಷಧಿಗಳು ಕೆಲವು ಔಷಧಿಗಳು ವಾಕರಿಕೆ ಅಥವಾ ವಾಂತಿಯನ್ನು ಉಂಟು ಮಾಡುತ್ತವೆ ಆಂಟಿ ಬಯೋಟಿಕ್ ಗಳು ಜನನ ನಿಯಂತ್ರಣ ಮಾತ್ರೆಗಳು ತಲೆನೋವು ನಿವಾರಕಗಳು ಮತ್ತು ಖಿನ್ನತೆ ನಿವಾರಕಗಳು ಇವುಗಳಲ್ಲಿ ಸೇರಿವೆ.

ಮದ್ಯ ಸೇವನೆ ಅತಿಯಾದ ಮದ್ಯಪಾನವು ಸಹ ವಾಂತಿಗೆ ಕಾರಣವಾಗುತ್ತದೆ ಗರ್ಭಾವಸ್ಥೆ ವಾಕರಿಕೆ ಅಥವಾ ವಾಂತಿ ಮಹಿಳೆಯರು ಗರ್ಭ ಧರಿಸಿದ್ದಾರೆ ಎಂಬುದಕ್ಕೆ ಸಾಮಾನ್ಯ ಸಂಕೇತಗಳಾಗಿವೆ ಇದನ್ನು ಮಾರ್ನಿಂಗ್ ಸಿಕ್ನೆಸ್ ಎನ್ನುತ್ತಾರೆ ಪದೇ ಪದೇ ವಾಂತಿಯಾಗುತ್ತಿದ್ದರೆ ವೈದ್ಯರನ್ನು ಯಾವಾಗ ಭೇಟಿಯಾಗಬೇಕು ಎನ್ನುವುದನ್ನು ಈಗ ನೋಡೋಣ ಎರಡು ಮೂರು ದಿನಗಳವರೆಗೂ ವಾಕರಿಕೆಯ ಅನುಭವ ಆಗುತ್ತಿದ್ದರೆ ಅಥವಾ ಈ ಲಕ್ಷಣಗಳು ತೀವ್ರಗೊಂಡಿದ್ದರೆ ಅದು ನೀವು ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು ಎನ್ನುವುದನ್ನು ಸೂಚಿಸುತ್ತದೆ ಇಂತಹ ಸಂದರ್ಭಗಳಲ್ಲಿ ವಾಂತಿ ನಿವಾರಕಗಳು ಅಥವಾ ಮನೆಮದ್ದುಗಳ ಸೇವನೆ ಸೂಕ್ತವಲ್ಲ. ಅಲ್ಲದೆ ಎದೆ ಅಥವಾ ಹೊಟ್ಟೆನೋವು ರ ಕ್ತ ವಾಂತಿ ಅಥವಾ ಕಾಫಿ ಪುಡಿಯಂತಹ ವಸ್ತು ವಾಂತಿಯಲ್ಲಿ ಬಿದ್ದರೆ ತೀವ್ರವಾದ ಜ್ವರವಿದ್ದರೆ ತಲೆನೋವು ಇದ್ದರೆ ಬುದ್ದಿಗೆ ಪೆಡಸಾಗಿದ್ದರೆ ಅತಿಯಾದ ಬಳಲಿಕೆ ಎದ್ದು ನಿಲ್ಲಲು ಕಷ್ಟವಾಗುತ್ತಿದ್ದರೆ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಾಣಿಸಿಕೊಂಡರು ಸಹ ನೀವು ವೈದ್ಯರನ್ನು ತಕ್ಷಣವೇ ಭೇಟಿಯಾಗಿ. ಇವೆಲ್ಲವೂ ಪದೇ ಪದೇ ವಾಂತಿಯಾಗಲು ಕಾರಣವಾಗಿವೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ

Leave a Reply

Your email address will not be published.