ಮಂಡಿ ನೋವು ಗುಣ ಆಗಲು ಮನೆ ಮದ್ದು

ಮನೆ ಮದ್ದು

ಹೀಗೆ ಮಾಡುವುದರಿಂದ ಮಂಡಿನೋವು ಶಮನವಾಗುತ್ತದೆ. ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರಲ್ಲೂ ಸಹ ಈ ಮಂಡಿನೋವು ಕಾಣಿಸಿಕೊಳ್ಳುತ್ತದೆ ಇದೊಂದು ಸಾಮಾನ್ಯ ಲಕ್ಷಣವಾಗಿದೆ. ಮಂಡಿನೋವು ವಿಶ್ವದ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವ ಅನಾರೋಗ್ಯವಾಗಿದೆ ಇದಕ್ಕೆ ಕಾರಣ ಹುಡುಕುತ್ತ ಹೊರಟರೆ ಹಲವಾರು ವಿಭಿನ್ನ ಮಾಹಿತಿಗಳು ದೊರಕುತ್ತವೆ. ಮಂಡಿನೋವಿನ ಸಾಮಾನ್ಯ ಲಕ್ಷಣಗಳು ಯಾವುವು ಮತ್ತು ಅವುಗಳಿಗೆ ಪರಿಹಾರ ಏನು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ. ಮಂಡಿನೋವಿನ ಲಕ್ಷಣಗಳೆಂದರೆ ತಾಳಲಾರದ ನೋವು ಮೂಳೆಗಳು ಒತ್ತಿದರೆ ಚಿಕ್ಕ ಗುಂಡಿ ಬಿಳುವಷ್ಟು ಮೃದುವಾಗುವುದು ಮಡಚಲು ಆಗದಷ್ಟು ದೃಢವಾಗುವುದು ಮಡಚಲು ಭಾರಿ ಕಷ್ಟವಾಗುವುದು ಹಾಗೂ ಕೆಲವೊಮ್ಮೆ ಮಂಡಿ ಒಳಭಾಗದಲ್ಲಿ ದ್ರವ ತುಂಬಿಕೊಂಡು ಊದಿಕೊಳ್ಳುವುದು ಹೀಗೆ ಅನೇಕ ಕಾರಣಗಳಿವೆ.

ಇವುಗಳಿಗೆ ಮನೆಮದ್ದು ಕೂಡ ಇದೆ ಹಾಗಾದರೆ ಆ ಮನೆಮದ್ದುಗಳು ಯಾವುವು ನೋಡೋಣ ಬನ್ನಿ.ಅರಿಷಿಣ ಅರಿಷಿಣ ಹಲವಾರು ತೊಂದರೆಗಳಿಗೆ ಚಿಕಿತ್ಸೆ ರೂಪದಲ್ಲಿ ಬಳಸಬಹುದಾಗಿದೆ ವಿಶೇಷವಾಗಿ ಉರಿಯೂತದ ಕಾರಣದಿಂದ ಏದುರಾಗುವ ಕಾಯಿಲೆಗಳಿಗೆ ಉತ್ತಮ ಉಪಶಮನ ಒದಗಿಸುತ್ತದೆ. ಸಂದಿವಾತವು ಉರಿಯೂತದ ಕಾರಣದಿಂದ ಎದುರಾಗಿರುವುದರಿಂದ ಅರಿಷಿಣ ಇಲ್ಲಿಯೂ ತನ್ನ ಪ್ರಾಭಲ್ಯವನ್ನು ತೋರಿಸುತ್ತದೆ ಸ್ವಲ್ಪ ಅರಿಷಿಣವನ್ನು ನೀರಿನೊಂದಿಗೆ ಬೆರಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆ ಎರಡು ಬಾರಿ ಹಚ್ಚಿ ಒಣಗಲು ಬಿಡಿ ಸುಮಾರು15 ರಿಂದ 20 ನಿಮಿಷ ಬಿಟ್ಟು ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ. ಹಸಿಶುಂಠಿ ಆಯುರ್ವೇದ ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಹಸಿಶುಂಠಿಯನ್ನು ಬಳಸುತ್ತಾ ಬಂದಿದೆ

ಇದರ ಉರಿಯೂತ ನಿವಾರಕ ಗುಣದಿಂದ ಹಸಿಶುಂಠಿಯನ್ನು ಹೆಚ್ಚಾಗಿ ಎಲ್ಲ ಆಹಾರಗಳಲ್ಲಿ ಬಳಸಬಹುದು ಒಣಶುಂಠಿಯಿಂದ ಹಿಂಡಲ್ಪಟ್ಟ ಶುಂಠಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಹಸಿ ಶುಂಠಿಯನ್ನು ಬೆರಸಿ ತಯಾರಿಸಿದ ಚಹಾ ಕುಡಿಯುವ ಮೂಲಕ ಮಂಡಿನೋವು ಶೀಘ್ರವಾಗಿ ಕಡಿಮೆಯಾಗುತ್ತದೆ. ಅಶ್ವಗಂಧ ಸಂಸ್ಕೃತದ ಈ ಶಬ್ದವನ್ನು ಕನ್ನಡಕ್ಕೆ ಭಾಷಾಂತರಿಸಿದರೆ ಕುದುರೆ ಕಂಪು ಎಂಬ ಅರ್ಥ ಬರುತ್ತದೆ ಇದಕ್ಕೆ ಒಂದು ಕಾರಣವೂ ಇದೆ ಈ ಮೂಲಿಕೆಯನ್ನು ಸೇವಿಸಿದ ವ್ಯಕ್ತಿ ಕುದುರೆಯಷ್ಟು ಬಲವಾಗಿ ಮತ್ತು ಕುದುರೆಯಂತ ಹುರುಪನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ ಈ ಮೂಲಿಕೆಯಿಂದ ನಿವಾರೀಸಿದ ಸಾರದಲ್ಲಿ ಪ್ರಭಲ ಉರಿಯೂತ ನಿವಾರಕ ಗುಣವಿದ್ದು ಮಂಡಿನೋವು ಶೀಘ್ರವೇ ಗುಣವಾಗುತ್ತದೆ. ಶತಾವರಿ ಇದರಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿ ಇದೆ ಇದರಲ್ಲಿ ಇರುವ ಉರಿಯೂತ ನಿವಾರಕ ಗುಣವು ಮಂಡಿನೋವು ಸೆಳೆತ ಉಳುಕು ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ. ಉದಿಕೊಂಡಿರುವ ಮಂಡಿಯನ್ನು ಗುಣಪಡಿಸಲು ನೆರವಾಗುತ್ತದೆ.

ಮಸಾಜ್ ಮಂಡಿನೋವನ್ನು ಕಡಿಮೆ ಮಾಡಲು ಮಸಾಜ್ ನೆರವಾಗುತ್ತದೆ ಮಂಡಿಗಳನ್ನು ಸುತ್ತುವರೆದಿರುವ ಸ್ನಾಯುಗಳನ್ನು ನಿರಾಳಗೊಳಿಸಿ ಒತ್ತಡ ನಿವಾರಿಸುವ ಮೂಲಕ ನೋವನ್ನು ಗುಣಪಡಿಸುತ್ತದೆ. ವ್ಯಾಯಾಮ ಮಂಡಿನೋವು ಕಡಿಮೆಗೊಳಿಸಲು ಕೆಲವು ಯೋಗಾಸನಗಳು ನೆರವಾಗುತ್ತವೆ. ಹಾಗೂ ಇವು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿ ಇವೆ. ಮಂಡಿನೋವಿನೊಂದಿಗೆ ಬೆನ್ನುನೋವು ಸ್ನಾಯುಗಳ ಸೆಳೆತ ಕಾಲು ಮಡಚಲಿಕ್ಕೆ ಆಗದೆ ಇರುವುದು ಉರಿಯೂತ ಮೊದಲಾದ ತೊಂದರೆಗಳು ಇದ್ದಾಗ ಈ ಸುಲಭ ಯೋಗಾಸನ ನೆರವಿಗೆ ಬರುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿರಿ

Leave a Reply

Your email address will not be published.