ವಯಸ್ಸು ಇಪ್ಪತ್ತು ದಾಟುತ್ತಾ ಇದ್ದಂತೆ ಹುಡುಗಿಯರಿಗೆ ಈ ಬದಲಾವಣೆ ಆಗುತ್ತೆ

ಉಪಯುಕ್ತ ಸಲಹೆ

ವಯಸ್ಸು 20 ಆದಂತೆ ಹುಡುಗಿಯರಲ್ಲಿ ಆಗುವ ಬದಲಾವಣೆಗಳು. ಮನುಷ್ಯರಲ್ಲಿ ಒಂದು ಸಹಜ ಕ್ರಿಯೆ ಸಣ್ಣವರಿದ್ದಾಗ ಒಂದು ರೀತಿಯ ಜೀವನ ಕ್ರಿಯೆ ಪ್ರಾರಂಭವಾದರೆ ಒಂದು ವಯಸ್ಸಿಗೆ ಬಂದಂತೆ ಹಲವಾರು ಪ್ರಕೃತಿ ದತ್ತವಾದ ಕ್ರಿಯೆಗಳು ಮನುಷ್ಯನ ದೇಹದಲ್ಲಿ ಪ್ರಾರಂಭ ವಾಗುತ್ತವೆ ಅವರು ಬೆಳೆಯುವ ಆಧಾರದ ಮೇಲೆ ಹುಡುಗಿಯರು ಮತ್ತು ಹುಡುಗರಲ್ಲಿ ಹಾರ್ಮೋನ್ ಬದಲಾವಣೆಯಿಂದ ಹಲವಾರು ಸಮಸ್ಯೆಗಳು ಆಗುತ್ತವೆ ಹುಡುಗರಲ್ಲಿ ಅವರ ದ್ವನಿ ಗಡುಸಾಗುತ್ತದೆ ಹಾಗೇನೇ ಅವರಿಗೂ ಸಹ ಹಾರ್ಮೋನ್ ಬದಲಾವಣೆಯಿಂದ ಮುಖದ ಮೇಲೆ ಹುಡುಗಿಯರ ಹಾಗೆ ಮೊಡವೆಗಳು ಸಹ ಆಗುತ್ತವೆ ಹಾಗೇನೇ ಹುಡುಗಿಯರಲ್ಲೂ ಸಹ ಹಾರ್ಮೋನ್ ಬದಲಾವಣೆಯಿಂದ ಹಲವಾರು ಸಮಸ್ಯೆಗಳು ಆಗುತ್ತವೆ ಹಾಗಾದರೆ ಹಾರ್ಮೋನ್ ಬದಲಾವಣೆಯಿಂದ ಆಗುವ ಸಮಸ್ಯೆಗಳು ಯಾವುವು ಎನ್ನುವುದನ್ನು ಈಗ ನಾವು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.

ಹುಡುಗಿಯರು 20ನೆ ವರ್ಷಕ್ಕೆ ಕಾಲಿಡುತ್ತಿದ್ದಂತೆ ಅವರ ಹಾರ್ಮೋನ ನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ ಇದರಿಂದ ಹುಡುಗಿಯರಲ್ಲಿ ಕೆಲವು ಅವರ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟ ಎದುರಿಸ ಬೇಕಾಗುತ್ತದೆ. ಹಾಗಾದರೆ ಹುಡುಗಿಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಏನೆಲ್ಲ ತೊಂದರೆಗಳು ಆಗುತ್ತವೆ ಮತ್ತು ಅದಕ್ಕೆ ಪರಿಹಾರ ಏನು ಎನ್ನುವುದನ್ನು ಈ ಒಂದು ಲೆಖನದಲ್ಲಿದಲ್ಲಿ ನೋಡೋಣ. ಮೊದಲನೇ ಸಮಸ್ಯೆ ಎಂದರೆ ಅದು ಮುಟ್ಟಿನ ಸಮಸ್ಯೆ ಕೆಲವು ಹುಡುಗಿಯರು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ 20 ನೆ ವಯಸ್ಸಿನಲ್ಲಿ ಹಾರ್ಮೋನ್ ಏರುಪೇರು ಆಗುವುದರಿಂದ ಅವರ ದೇಹದಲ್ಲಿ ಈ ಬದಲಾವಣೆಗಳು ಆಗುತ್ತವೆ ಆದ್ದರಿಂದ ಇದಕ್ಕೆ ಪರಿಹಾರವೆಂದರೆ ವಿಟಮಿನ್ ಪ್ರೊಟೀನ್ ಹಾಗೂ ಕಬ್ಬಿಣವುಳ್ಳ ಆಹಾರವನ್ನು ಸೇವನೆ ಮಾಡಬೇಕು. ಜೊತೆಗೆ ಹುಡುಗಿಯರು ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು ಮತ್ತು ಅತೀಯಾದ ಯೋಚನೆ ಮಾಡುವುದು ಬಿಡಬೇಕು.

ಎರಡನೇ ಸಮಸ್ಯೆ ಮೊಡವೆಗಳು 20 ವರ್ಷ ವಯಸ್ಸಿನ ಹುಡುಗಿಯರಲ್ಲಿ ಮೊಡವೆಗಳು ಸಾಮಾನ್ಯ ಇದರಿಂದ ತಪ್ಪಿಸಿಕೊಳ್ಳಲು ಎಣ್ಣೆಯುಕ್ತ ಆಹಾರ ಹಾಗೂ ಉಪ್ಪಿನ ಕಾಯಿಯಿಂದ ದೂರವಿರಿ ಮುಖವನ್ನು ದಿನಕ್ಕೆ 5 ಬಾರಿ ತೊಳೆಯಿರಿ. ಮೂರನೇ ಸಮಸ್ಯೆ ತೂಕ ಹೆಚ್ಚಳ ಅಥವಾ ಇಳಿಕೆ ಈ ಸಮಯದಲ್ಲಿ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ ಹಾಗಾಗಿ 20 ವರ್ಷ ವಯಸ್ಸಿನ ಹುಡುಗಿಯರು ಆಹಾರದ ಜೊತೆಗೆ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಹಾಗೇನೆ ನಾಲ್ಕನೇ ಸಮಸ್ಯೆ ಹಾರ್ಮೋನ್ ಬದಲಾವಣೆ ಯಿಂದಾಗಿ ಸೂಕ್ತವಲ್ಲದ ಜಾಗದಲ್ಲಿ ಕೂದಲು ಹುಟ್ಟಿಕೊಳ್ಳುತ್ತದೆ ಇದರಿಂದ ತಪ್ಪಿಸಿಕೊಳ್ಳಲು ಮನೆಮದ್ದನ್ನು ಉಪಯೋಗಿಸಿ. ಹೀಗೆ 20 ವರ್ಷ ವಯಸ್ಸಿನ ಹುಡುಗಿಯರಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಅದಕ್ಕೆ ತಕ್ಕಂತೆ ಅವರು ಸಹ ಬದಲಾಗಬೇಕು ಇದರಿಂದ ಅವರು ಅವರ ದೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮನಸು ಚಂಚಲ ಜಾಸ್ತಿ ಇರುತ್ತದೆ ಅದನ್ನ ಹತೋಟಿಯಲ್ಲಿ ಇಡುವುದು ಸಹ ಸೂಕ್ತ. ಹೀಗೆ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ಹುಡುಗಿಯರಲ್ಲಿ ಮತ್ತು ಹುಡುಗರಲ್ಲಿಯೂ ಸಹ ಹಲವಾರು ಬದಲಾವಣೆಗಳು ಆಗುತ್ತವೆ.

Leave a Reply

Your email address will not be published.