ಪ್ಯಾಕೆಟ್ ಹಾಲು ಕುಡಿಯುವ ಮುನ್ನ ತಿಳಿಯಿರಿ

ಉಪಯುಕ್ತ ಸಲಹೆ

ಪ್ಯಾಕೆಟ್ ಹಾಲು ನಮ್ಮ ಆರೋಗ್ಯಕ್ಕೆ ಎಷ್ಟು ಉತ್ತಮ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಈಗ ಪ್ಯಾಕೆಟ್ ಹಾಲನ್ನೇ ಕುಡಿಯುತ್ತಿದ್ದೇವೆ ಕಾರಣ ನಮಗೆ ಬೇರೆ ದಾರಿ ಇಲ್ಲ ಕೆಲವು ಹಾಲು ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಬೆಳೆಸಲು ಮೂಖ ಜೀವಿಗಳಿಗೆ ಚುಚ್ಚುಮದ್ದು ನೀಡುತ್ತಿದ್ದಾರೆ ಇನ್ನು ಕೆಲವರು ಹೆಚ್ಚು ಕಾಲ ಹಾಲು ಉಳಿಸುವ ವ್ಯಾಪಾರವನ್ನು ಮಾಡುತ್ತಿದ್ದಾರೆ ಇದಕ್ಕಾಗಿ ಹಾಲಿನಲ್ಲಿ ವಿಷಪೂರಿತವಾದಾ ಫ್ರಿಜರವೆಂಟರಿ ರಾಸಾಯನಿಕಗಳನ್ನು ಬೆರೆಸುತ್ತಿದ್ದಾರೆ ಹಣಕ್ಕಾಗಿ ಅವರ ವ್ಯಾಪಾರವನ್ನು ಬೆಳೆಸುವುದಕ್ಕಾಗಿ ಪವಿತ್ರವಾದ ಹಾಲನ್ನು ಹಾಲಿನ ಪಧಾರ್ಥಗಳನ್ನು ಕಲಬೆರಕೆ ಮಾಡುವದೂ ಎಷ್ಟು ಸರಿ. ಎಫ್ ಎಸ್ ಎಸ್ ಎ ಐ ವರದಿಗಳ ಪ್ರಕಾರ ದೇಶದ ದೊಡ್ಡ ಹಾಲಿನ ಬ್ರ್ಯಾಂಡಗಳ ಪ್ಯಾಕೆಟ್ ಹಾಲು ಪರೀಕ್ಷೆಯಲ್ಲಿ ವಿಫಲವಾಗಿದೆ ನೀವು ಕೂಡ ಪ್ಯಾಕೆಟ್ ಹಾಲು ಬಳಸುತ್ತಿದ್ದರೆ ಎಚ್ಚರಿಕೆಯಿಂದಿರಿ ಏಕೆಂದರೆ ಹಾಲನ್ನು ಮಾರುವಂತಹ ಕಂಪನಿಗಳು ನಮ್ಮ ಆರೋಗ್ಯದ ಜೊತೆ ಆಟವಾಡುತ್ತಿವೆ.

ಸರ್ಕಾರದ ಸಂಶೋಧನಾ ಸಂಸ್ಥೆ ಪ್ರಕಾರ ಸರಿಸುಮಾರು ಸಾಕಷ್ಟು ಕಂಪನಿಗಳ ಹಾಲು ಉನ್ನತ ಗುಣಮಟ್ಟವನ್ನು ನಿರೂಪಿಸಿ ಕೊಳ್ಳುವುದರಲ್ಲಿ ವಿಫಲವಾಗುತ್ತಿದೆ ಒಂದು ಕಾಲದಲ್ಲಿ ಮನೆಯಲ್ಲೇ ಹಸು ಎಮ್ಮೆಗಳನ್ನು ಪ್ರೀತಿಯಿಂದ ಬೆಳಸಿ ಅವು ಕೊಟ್ಟಷ್ಟೇ ಹಾಲನ್ನು ಕರೆಯುತ್ತಿದ್ದರು ಅದು ಉತ್ತಮವಾದ ಹಾಲಾಗಿತ್ತು ನಂತರ ಹಸುವಿನ ಕರು ಕುಡಿಯುವುದಕ್ಕೂ ಸಹ ಹಾಲನ್ನು ಉಳಿಸುತ್ತಿದ್ದರು ಇದರಿಂದ ಹಸುಗಳು ಆರೋಗ್ಯವಾಗಿ ಇರುತ್ತಿದ್ದವು ಆದರೆ ಈಗಿನ ತಂತ್ರಜ್ಞಾನದ ಹೆಸರಿನಲ್ಲಿ ಬಂದ ಯಂತ್ರಗಳು ಹಸುಗಳ ಜೀವನವನ್ನು ನರಕ ಮಯವಾಗಿಸುತ್ತಿವೆ. ಈಗ ಹಾಲನ್ನು ಕರೆಯಲು ಸಹ ಯಂತ್ರಗಳನ್ನು ಬಳಸುತ್ತಿದ್ದಾರೆ. ಮತ್ತೆ ಹಾಲು ಹಾಳಾಗದೆ ಇರುವುದಕ್ಕೆ ಬಳಸುವ ರಾಸಾಯನಿಕಗಳಿಂದ ಹಾಲಿನಲ್ಲಿ ಗುಣಮಟ್ಟ ಇರದೇ ಗೋಗುತ್ತಿದೆ ಬಣ್ಣ ಬಣ್ಣದ ಬಾಟಲಿಗಳಲ್ಲಿ ಇಡುವುದರಿಂದ ಹಾಲಿನ ಗುಣಮಟ್ಟ ಬೆಳೆಯುತ್ತದೆಯ ಇಲ್ಲ ಕೇವಲ ಹಣ ಗಳಿಸುವ ಉದ್ದೇಶದಿಂದ ಇರುವವರ ಜೇಬು ಮಾತ್ರ ತುಂಬುತ್ತದೆ.

ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಸೋಸಿಯೇಷನ್ ಆಫ್ ಇಂಡಿಯ ವಿವರಗಳ ಪ್ರಕಾರ ದೇಶದಲ್ಲೇ ಅತಿ ದೊಡ್ಡ ಕಂಪನಿಯ ಪ್ಯಾಕೆಟ್ ಹಾಲನ್ನು ಕುಡಿದರೆ ನಮ್ಮ ಆರೋಗ್ಯ ಕೆಡುತ್ತದೆ ಈ ಹಾಲಿನಲ್ಲಿ ಹೆಚ್ಚಾಗಿ ಅಲ್ಪೊಟಸಿನ್ ಎಮ್ ಒನ್ ಆಂಟಿಬಯೋಟಿಕ್ ಮತ್ತು ಪೆಸಿಸೇಡ ಗಳು ಬೆರೆತಿವೆ ಎನ್ನುವ ವಿಷಯ ಈಗ ಹೊರಗೆ ಬಂದಿದೆ ಇದರಿಂದ ನಮ್ಮ ದೇಹದ ಮೇಲೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗಬಹುದು ನಮ್ಮ ದೇಶದ 40ರಷ್ಟು ಹಾಲಿನ ಪರೀಕ್ಷೆಯಲ್ಲಿ ಹೀಗೆ ಇದೆಯಂತೆ ಇನ್ನು 7ರಷ್ಟು ಹಾಲಿನ ಪರೀಕ್ಷೆಯಲ್ಲಿ ಅತ್ಯಂತ ಹಾನಿಕಾರಕ ರಾಸಾಯನಿಕಗಳು ಇದೆ ಎಂದು ತಿಳಿದು ಬಂದಿದೆ. ದಿಲ್ಲಿ ತಮಿಳುನಾಡು ಕೇರಳ ಮಧ್ಯಪ್ರದೇಶ ಯುಪಿ ಮಹಾರಾಷ್ಟ್ರಗಳಿಂದ ಈ ಸ್ಯಾಂಪಲಗಳು ಬರುತ್ತಿವೆ ಇದಕ್ಕಾಗಿ ಎಫ್ ಎಸ್ ಎಸ್ ಎ ಐ 2020 ಜನವರಿಯಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ ಇನ್ನು ಪ್ಯಾಕೆಟ್ ಹಾಲನ್ನು ಈ ರೀತಿ ತಯಾರಿಸುತ್ತಾರೆ ಮೊದಲಿಗೆ ಯಂತ್ರಗಳಿಂದ ಕ್ರೂರವಾಗಿ ಹಸುಗಳಿಂದ ಹಾಲನ್ನು ಕರೆಯುತ್ತಾರೆ ನಂತರ

ಆ ಹಾಲನ್ನು ಪರೀಕ್ಷೆ ಮಾಡಿ ಇದರ ಅನುಸಾರ ಹಾಲು ಉತ್ಪಾದಕರಿಗೆ ಹಣ ನೀಡುತ್ತಾರೆ ಆದರೆ ಅಧಿಕಾರಿಗಳ ಮಾತಿಗೆ ಮರೆಹೋಗಿ ಕೆಲವೊಂದು ರೈತರು ಹಸುಗಳಿಗೆ ಚುಚ್ಚುಮದ್ದನ್ನು ಹಾಕುತ್ತಿದ್ದಾರೆ ಇದರ ಪ್ರಭಾವ ಹಾಲಿನ ಮೇಲೆ ಬೀಳುತ್ತದೆ ನಂತರ ಹಾಲನ್ನು ಪ್ಯಾಕ್ಟರಿಗೆ ರವಾನಿಸುತ್ತಾರೆ ಯಂತ್ರಗಳಲ್ಲಿ ಹಾಕಿ ಮಿಶ್ರಣ ಮಾಡಿ ಬೆಣ್ಣೆಯ ಅಂಶವನ್ನು ತೆಗೆದು ನಂತರ ಹಾಲನ್ನು 40ಡಿಗ್ರಿಯಲ್ಲಿ ಬಿಸಿ ಮಾಡುತ್ತಾರೆ ಏಕೆಂದರೆ ಹಾಲು ಹಾಳಾಗದಂತೆ ಅದರಲ್ಲಿರುವ ಬ್ಯಾಕ್ಟೀರಿಯವನ್ನು ತೊಲಗಿಸುತ್ತಾರೆ. ನಂತರ ಹಾಲಿಗೆ ವಿಟಮಿನ್ ಎ ಮತ್ತು ವಿಟಮಿನ್ ಡಿ ಎನ್ನು ಸೇರಿಸಿ ನಂತರ ಹಾಲನ್ನು ಪ್ಯಾಕ್ ಮಾಡುತ್ತಾರೆ. ನಿಮಗೆ ಹಸು ಹಾಲು ಸಿಗದ್ದೆ ಇದ್ದಲ್ಲಿ ದಯವಿಟ್ಟು ಬೇರೆ ಬೇರೆ ರಾಜ್ಯದ ವಿಷಯುಕ್ತ ಬೆರೆಕೆ ಆಗಿರೋ ಪ್ಯಾಕೆಟ್ ಹಾಲು ಮಾತ್ರ ಕುಡಿಯಬೇಡಿ. ಇಡೀ ದೇಶದಲ್ಲಿ ಎಲ್ಲ ಪ್ಯಾಕೆಟ್ ಹಾಲುಗಳಿಗೆ ಹೋಲಿಕೆ ಮಾಡಿದ್ರೆ ನಂದಿನಿ ಹಾಲಿನ ಗುಣಮಟ್ಟ ಸ್ವಲ್ಪ ಹೆಚ್ಚಾಗಿದೆ.

Leave a Reply

Your email address will not be published.