ವ್ಯಾಯಾಮದ ಜೊತೆಗೆ ಇದನ್ನು ಪಾಲಿಸಿದರೆ ಸಕ್ಕರೆ ಕಾಯಿಲೆ ಹತೋಟಿಯಲ್ಲಿ ಇರುತ್ತದೆ. ನಾವು ನಮ್ಮ ದೇಹದ ತೂಕವನ್ನು ಇಳಿಸಲು ಹಲವಾರು ವಿಧಾನಗಳನ್ನು ಬಳಸುತ್ತೇವೆ ಜೊತೆಗೆ ವ್ಯಾಯಾಮ ಮಾಡುವುದರ ಮೂಲಕವೂ ಸಹ ದೇಹದ ತೂಕವನ್ನು ಇಳಿಸಲು ಪ್ರಯತ್ನ ಪಡುತ್ತಾರೆ ಆದರೆ ಕೇವಲ ವ್ಯಾಯಾಮ ಮಾಡುವುದರಿಂದ ಯಾವುದೇ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ ಬದಲಾಗಿ ಮನಷ್ಯನ ಮನಸ್ಸಿಗೆ ಸಂತೋಷ ಬಹಳ ಮುಖ್ಯ. ನಮ್ಮ ಖಾದ್ಯ ಪಧಾರ್ಥಗಳಲ್ಲಿ ಇತ್ತೀಚೆಗೆ ಬಹಳಷ್ಟು ಸಕ್ಕರೆ ಮುಕ್ತ ಅಂದರೆ ಶುಗರ್ ಫ್ರೀ ವಸ್ತುಗಳೆಂದು ಕರೆಯುವ ಪಧಾರ್ಥಗಳಿಂದ ಆರೋಗ್ಯ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಆಧುನಿಕ ಸಕ್ಕರೆ ಇಲ್ಲದ ವಸ್ತುಗಳಿಗಿಂತ ಸಕ್ಕರೆ ಒಳ್ಳೆಯದು ಬೆಲ್ಲ ಅವು ಎಲ್ಲವುಗಲಿಗಿಂತಲು ಹೆಚ್ಚು ಒಳ್ಳೆಯದು ಎಂದಿದ್ದಾರೆ ವೈದ್ಯರಾದ ಹೆಗಡೆಯವರು
ಆಹಾರ ಮತ್ತು ವ್ಯಾಯಾಮದಿಂದ ಮಧುಮೇಹ ಕಾಯಿಲೆ ಕಡಿಮೆ ಆಗುತ್ತದೆ ಅದರ ಜೊತೆಗೆ ಈಜುವುದರಿಂದಲು ಮಧುಮೇಹವನ್ನು ತಡೆಗಟ್ಟಬಹುದು ವ್ಯಾಯಾಮ ಮಾಡುವ ಬದಲು ಓಡುವವರೆ ಹೆಚ್ಚು ಒಡದಿರಿ ಬದಲಾಗಿ ನಡೆಯಿರಿ ನಿಸರ್ಗದಲ್ಲಿ ನಡೆಯುವಾಗ ಹಕ್ಕಿಗಳ ಚಿಲಿಪಿಲಿ ಬೇರೆಯವರ ಸಂತೋಷದ ಜೊತೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಲು ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ದೊರಕುತ್ತದೆ ಸಂತೋಷದಿಂದ ಇದ್ದರೆ ತನ್ನಿಂದ ತಾನೇ ಎಲ್ಲ ರೋಗಗಳು ಕಡಿಮೆಯಾಗುತ್ತದೆ. ಎಲ್ಲರೂ ವ್ಯಾಯಾಮವನ್ನು ಮಾಡಿದರೆ ಒಳಿತು ವ್ಯಾಯಾಮ ಎಂದರೆ ಕೇವಲ ಓಡುವುದಲ್ಲ ಬಿರುಸಾಗಿ ಓಡುವುದರಿಂದ ಕಾಲಿನ ಸಂದುಗಳು ಹಾಳಾಗುತ್ತವೆ. ಇನ್ನು ಮಧುಮೇಹ ನಿಯಂತ್ರಣಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ಎಂದರೆ ಬೆಳಿಗ್ಗೆ ಜಾಗಿಂಗ್ ಎಂದು ಮಾಡುವವರಿಗೂ ಇದು ಅನ್ವಯಿಸುತ್ತದೆ ಹದವಾದ ನಡಿಗೆ ಒಳ್ಳೆಯದು ನಡೆಯುವಾಗಲು ಮನೆಯಲ್ಲಿ ಯಂತ್ರದ ಮೂಲಕ ನಡೆಯುವುದರಿಂದಲು ಮನಸ್ಸಿಗೆ ನೆಮ್ಮದಿ ದೊರೆಯದು ನಡೆಯುವುದರ ಜೊತೆಗೆ ಸಂತೋಷವು ಸಿಕ್ಕಲ್ಲಿ ಸಕ್ಕರೆ ಕಾಯಿಲೆಗೆ ಅನುಕೂಲವಾಗುತ್ತದೆ.
ಈ ಎಲ್ಲ ಶಾರೀರಿಕ ತೊಂದರೆಗಳು ಮಧುಮೇಹದಿಂದ ಆಗಬಹುದು ಉದಾಹರಣೆಗೆ ಹೃದಯ ಸಂಬಂಧಿ ಕಾಯಿಲೆಗಳು ದೇಹದ ಪ್ರತಿ ಅಂಗಕ್ಕೂ ಸಕ್ಕರೆ ಅಂಶ ಹೋಗುವುದರಿಂದ ಆರೋಗ್ಯದಲ್ಲಿ ಏರುಪೇರುಗಳು ಆಗುತ್ತವೆ ಇವುಗಳನ್ನು ತಡೆಗಟ್ಟಲು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸಂತೋಷದಿಂದ ಇರಬೇಕು ಮಧುಮೇಹ ಬಂದಾಗ ತಕ್ಷಣ ಅದನ್ನು ನಿಯಂತ್ರಿಸಬೇಕು. ಇನ್ನು ಮಧುಮೇಹ ತಡೆಗಟ್ಟಬೇಕಾದರೆ ಏನೆಲ್ಲ ಮಾಡಬೇಕು ಅಂದರೆ ನಾವು ಆರೋಗ್ಯ ವಂತರಾಗಿರಲು ಆಹಾರ ಕ್ರಮ ತುಂಬಾ ಮುಖ್ಯ ಆಹಾರ ತಿನ್ನುವಾಗ ತಿನ್ನುವುದನ್ನು ಒಂದೇ ಬಾರಿಗೆ ತಿನ್ನಬಾರದು ಸ್ವಲ್ಪ ಸ್ವಲ್ಪವೇ ತಿನ್ನಬೇಕು ಬಾಳೆಹಣ್ಣು ಚಿಕ್ಕು ದ್ರಾಕ್ಷಿಯಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ ಆದ್ದರಿಂದ ಮಧುಮೇಹ ಇರುವವರು ಈ ಹಣ್ಣುಗಳನ್ನು ಕಡಿಮೆ ತಿನ್ನಬೇಕು ಪೇರಳೆ ಉಪಯೋಗಿಸಿದರೆ ಮಧುಮೇಹಕ್ಕೆ ಹೆಚ್ಚು ಉತ್ತಮ ಮಾವಿನ ಹಣ್ಣನ್ನು ದಿನಕ್ಕೆ ಎರಡು ತುಂಡು ತಿಂದರೆ ಮಧುಮೇಹಕ್ಕೆ ಒಳ್ಳೆಯದು ಎರಡಕ್ಕಿಂತ ಹೆಚ್ಚು ತಿಂದರೆ ಸಮಸ್ಯೆ ಆಗುತ್ತದೆ ಹಾಗಲ ಕಾಯಿಯನ್ನು ತೊಳೆದು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎದ್ದು 3 ರಿಂದ 4 ಬಾರಿ ತೊಳೆದು ತಿಂದಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಸಹಕಾರಿಯಾಗುತ್ತದೆ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ