ಅಷ್ಟ ಸಂಪತ್ತು ಸಿದ್ದಿಗಾಗಿ ಈ ವ್ರತ

ದೇವರು

ಮಾರ್ಗಶಿರ ಮಾಸದ ಗುರುವಾರ ಲಕ್ಷ್ಮೀ ವ್ರತ ನಿಯಮಗಳು. ಈ ವ್ರತವನ್ನು ಮಾರ್ಗಶಿರ ಮಾಸದ ಮೊದಲನೇ ಗುರುವಾರ ಸಂಕಲ್ಪ ಮಾಡಿ ಹಿಡಿದು ಅದೇ ಮಾರ್ಗಶಿರ ಮಾಸದ ಕೊನೆಯ ಗುರುವಾರ ಪೂಜೆ ಮಾಡಿ ಮುಕ್ತಾಯ ಮಾಡಬೇಕು ವ್ರತ ಮಾಡುವವರು ಉಪವಾಸವಿದ್ದು ರಾತ್ರಿ ಮನೆಯವರೊಂದಿಗೆ ಊಟ ಮಾಡಬೇಕು ಈ ವ್ರತ ಉದ್ಯಾಪನ ಮಾಡಿದ ಮೇಲು ಒಂದು ವರ್ಷ ಪ್ರತಿ ಗುರುವಾರ ರಾತ್ರಿ ಲಕ್ಷ್ಮಿ ಸ್ತೋತ್ರ ಓದಬೇಕು ವ್ರತ ಹಿಡಿದ ಮಹಿಳೆ ಅಶಕ್ತಳಾದರೆ ಬೇರೆ ಹೆಣ್ಣುಮಕ್ಕಳು ಈ ಪೂಜೆಯನ್ನು ಮಾಡಬಹುದು ಆದರೆ ವ್ರತ ಹಿಡಿದವರೆ ಉಪವಾಸ ಮಾಡಬೇಕು. ಮಾರ್ಗಶಿರ ಮಾಸದ ಕೊನೆಯ ಗುರುವಾರ ರಾತ್ರಿ 7 ಜನ ಮುತೈದೆಯರಿಗೆ ಅಥವಾ ಬಾಲಕಿಯರಿಗೆ ಅರಿಷಿಣ ಕುಂಕುಮ ಕೊಟ್ಟು ಊಟ ನೀಡಿ ಎಲೆ ಅಡಿಕೆ ದಕ್ಷಿಣೆ ಕೊಟ್ಟು ನಮಸ್ಕರಿಸಬೇಕು.

35 ಜನ ಮುತೈದೆಯರ ಪೂಜಾ ಫಲ ನಿಮ್ಮದಾಗುವುದು. ಇದರಿಂದ ಧನ ಸಿರಿ ಸರ್ವಸಂಪತ್ತು ಲಭಿಸುವುದು ಕಾರಣ ಶುಧ್ದ ಮನ ಸ್ವಚ್ಛ ಶರೀರದಿಂದ ಶಾಂತವಾದ ಪೂಜಾ ಆಚರಣೆ ಮಾಡಬೇಕು. ಹೀಗೆ ಲಕ್ಷ್ಮೀ ಸ್ಥಾಪನೆ ಮಾಡಿ ಗುರುವಾರ ದಿವಸ ಮುತೈದೆ ನಸುಕಿನಲ್ಲಿ ಎದ್ದು ತಲೆಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಹು ಮುಡಿದು ಅರಿಷಿಣ ಕುಂಕುಮ ಹಚ್ಚಿಕೊಂಡು ಲಕ್ಷ್ಮೀ ಕುರಿಸುವ ಜಾಗವನ್ನು ಗೊಮಯದಿಂದ ಸಾರಿಸಿ ರಂಗೋಲಿ ಹಾಕಿ ದೇವಿ ಕುರಿಸಲು ಮಣೆ ಅಥವಾ ಮಂಟಪ ಮಾಡಿ ಮಣೆಯ ಮೇಲೆ ಅಕ್ಕಿ ಹಾಕಿ ಅದರಲ್ಲಿ ಓಂ ಬರೆಯಬೇಕು. ಬೆಳ್ಳಿ ಅಥವಾ ತಾಮ್ರದ ತಂಬಿಗೆಗೆ ಮಡಿಯಿಂದ ನೀರು ತುಂಬಿ ಅದರೊಳಗೆ ಗರಿಕೆ ಪತ್ರಿ ದಕ್ಷಿಣೆ ಅಡಿಕೆಬೆಟ್ಟ ಹಾಕಿ ತಂಬಿಗೆ ಬಾಯಿಗೆ 5 ವಿಲ್ಲೆದೆಲೆ ಅಂಗಾತ ಇಟ್ಟು ಅದರ ಮೇಲೆ ಜುಟ್ಟು ಮೇಲೆ ಮಾಡಿ ತೆಂಗಿನ ಕಾಯಿ ಇಡಬೇಕು ಇದು ಕಳಶ ಕಳಶದ ಹಿಂದೆ ಲಕ್ಷ್ಮೀ ಫೋಟೋ ಇಡಬೇಕು ಕಳಶಕ್ಕೆ ಹೂವಿನ ಮಾಲೆ ಗೆಜ್ಜೆವಸ್ತ್ರ ಹಾಕಿ ಎರಡು ಕಡೆ ದೀಪ ಹಚ್ಚಬೇಕು ಕಳಶದ ಮುಂದೆ ನೈವ್ಯೆದ್ಯ ಹಣ್ಣುಕಾಯಿ ಎಲೆ ಅಡಿಕೆ ದಕ್ಷಿಣೆ ಇರುವ ತಾಟು ಇಡಬೇಕು

ಕಳಶದ ಮುಂದೆ ಬಲಗಡೆ ಎಡಗಡೆ ಮಣೆ ಹಾಕಬೇಕು ಎದುರುಗಡೆ ಮಣೆ ಮೇಲೆ ವ್ರತ ಮಾಡುವ ಮುತೈದೇ ಕುರಬೇಕು ಬಲಗಡೆ ಮಣೆ ಮೇಲೆ ಓದುಬರಹ ಬಲ್ಲ ಪತಿ ಕುಳಿತು ಲಕ್ಷ್ಮೀ ಪುಸ್ತಕದ ಮಂತ್ರಗಳನ್ನು ಹೇಳಬೇಕು ಹೇ ಜಗಜ್ಜನನಿ ಕರುಣಾಮಯಿ ಅಲ್ಪಳಾದ ನನ್ನ ಎಲ್ಲ ಮನದ ಕಾಮನೆಗಳನ್ನು ಈಡೇರಿಸಿ ಕೊಡು ತಾಯಿ ಎಂದು ಮನಸ್ಸಿನಲ್ಲಿ ಬೇಡಿಕೊಂಡು ನಮಸ್ಕಾರ ಮಾಡಿ ಮಣೆಯ ಮೇಲೆ ಕುರಬೇಕು. ಈ ಗುರುವಾರ ಪುಸ್ತಕದಲ್ಲಿ ಕೊಡಲಾದ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಬೇಕು. ಜೊತೆಗೆ ಮಹಾಗಣಪತಿ ಸ್ಮರಣೆ ಮಾಡಬೇಕು. ನಂತರ ದೂಪಬೆಳಗಿ ಅಕ್ಷತೆ ಕಾಳು ಹಾಕಿ ನಿಂತಲ್ಲೇ ಪ್ರದಕ್ಷಿಣೆ ಹಾಕಿ ಹಣೆ ಹಚ್ಚಿ ನಮಸ್ಕಾರ ಮಾಡಬೇಕು. ನಂತರ ಗುರುವಾರ ಲಕ್ಶ್ಮೀ ಪೂಜೆ ಮಹಿಮೆ ಕಥೆ ಇದೆ ಅದನ್ನು ಪೂಜೆ ಸಮಯದಲ್ಲಿ ಓದಬೇಕು ಹೀಗೆ ಭಕ್ತಿಯಿಂದ ಗುರುವಾರ ಲಕ್ಷ್ಮೀ ಪೂಜೆ ಮಾಡಬೇಕು.

ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ, ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

Leave a Reply

Your email address will not be published.