ಬೇಸಿಗೆಯಲ್ಲಿ ಹೆಚ್ಚಾಗಿ ನಾವು ಸೌತೆಕಾಯಿಯನ್ನು ಸೇವಿಸುವುದನ್ನು ನಾವು ನೋಡುತ್ತೇವೆ ಅದರಲ್ಲಿ ನೀರಿನ ಅಂಶ ಹೆಚ್ಚು ಇರುವ ಕಾರಣ ದೇಹದ ದಾಹವನ್ನು ತಣಿಸುವ ಮೂಲಕ ದೇಹವನ್ನು ತಂಪಾಗಿ ಇಡಲು ತುಂಬಾ ಸಹಕಾರಿ ಆಗುತ್ತದೆ. ಸೌತೆಕಾಯಿಯಲ್ಲಿ ಶೇಕಡಾ 95 ರಷ್ಟು ನೀರು 5 ರಷ್ಟು ನಾರಿನ ಅಂಶವನ್ನು ಹೊಂದಿರುವುದರಿಂದ ನಮ್ಮ ದೇಹವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದರಲ್ಲಿ ಒಳ್ಳೆಯ ಕೆಲಸ ಮಾಡುತ್ತದೆ ಅಷ್ಟೆ ಅಲ್ಲದೆ ಈ ಸೌತೆಕಾಯಿ ಅಲ್ಲಿ ನಮಗೆ ತುಂಬಾ ಆರೋಗ್ಯಕರ ಅಂಶಗಳು ಅಡಗಿವೆ ಅದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ. ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಳು ಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಸೌತೆಕಾಯಿಯ ತಿರುಳುಗಳನ್ನು ಅಂಗೈ ಮತ್ತು ಪದಗಳಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ ದೇಹಕ್ಕೆ ತಂಪು ನೀಡುತ್ತದೆ ದೇಹದಲ್ಲಿ ಇರುವ ಉರಿಯನ್ನು ಕಡಿಮೆ ಮಾಡುತ್ತದೆ ಚರ್ಮದ ಉರಿ ಹಾಗೂ ಸನ್ ಬರ್ನ್ ಗಳಿಗೆ ಸೌತೆಕಾಯಿ ರಸ ತುಂಬಾ ಉಪಯೋಗಕ್ಕೆ ಬರುತ್ತದೆ
ಸೌತೆಕಾಯಿ ಅಲ್ಲಿ ಹೆಚ್ಚು ನೀರಿನ ಪ್ರಮಾಣ ಹಾಗೂ ಕಡಿಮೆ ಕ್ಯಾಲೋರಿಗಳು ಇರುವುದರಿಂದ ಅದು ಪಚನ ಕ್ರಿಯೆಗೆ ಅನುಕೂಲ ಆಗುತ್ತದೆ. ಈ ಸೌತೆಕಾಯಿಯ ರಸ ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದಿಸುವ ಗ್ರಂಥಿ ಗೆ ಸಹಾಯ ಮಾಡುತ್ತದೆ ಮುಖದಲ್ಲಿ ಕಪ್ಪು ಕಲೆ ಇದ್ದರೆ ಸೌತೆಕಾಯಿಯ ಸಿಪ್ಪೆ ಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸಿದರೆ ಆ ಕಲೆಗಳು ಮಾಯ ಆಗುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ಉಜ್ಜುವುದರಿಂದ ಮುಖ ಕಾಂತಿಯುತ ಆಗುತ್ತದೆ ಈ ಸೌತೆಕಾಯಿ ಮಧುಮೇಹ ರೋಗದವರಿಗೆ ತುಂಬಾ ಒಳ್ಳೆಯದು ಅವರು ಊಟದ ಮೊದಲಿಗೆ ಸೇವಿಸಿದರೆ ಮಧುಮೇಹ ರೋಗ ಕಡಿಮೆ ಆಗುತ್ತದೆ ಒಂದು ಬಟ್ಟಲು ಸೌತೆ ರಸವನ್ನು ಒಂದು ಚಮಚ ಜೇನುತುಪ್ಪವನ್ನು ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಸರಿಯಾಗಿ ಜೀರ್ಣ ಶಕ್ತಿ ಆಗಿ ದೇಹದ ಉಷ್ಣಾಂಶ ದಿಂದ ಆಗುವ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ.
ಎಳೆ ಸೌತೆಕಾಯಿ ತಿನ್ನುವುದರಿಂದ ವೀರ್ಯ ಶುದ್ಧಿ ಆಗುತ್ತದೆ. ಸೌತೆಕಾಯಿ ರಸವು ರೋಗ ಪೀಡಿತ ವಸಡುಗಳನ್ನು ಗುಣ ಪಡಿಸುವಲ್ಲಿ ತುಂಬಾ ಒಳ್ಳೆಯ ಕೆಲಸ ಮಾಡುತ್ತದೆ ಇದರಲ್ಲಿ ಇರುವ ಖನಿಜ ಅಂಶವಾದ ಸಿಲಿಕಾನ್ ನಮ್ಮ ಕೂದಲು ಮತ್ತು ಉಗುರುಗಳನ್ನು ಹೊಳಪು ಮತ್ತು ಶಕ್ತಿಯುತವಾಗಿ ಮಾಡುತ್ತದೆ. ಸೌತೆಕಾಯಿ ಪೀಸ್ ಗಳನ್ನು ಮಾಡಿ ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಸೌತೆಕಾಯಿ ಯನ್ನ ನಿಯಮಿತವಾಗಿ ಸೇವಿಸುವುದರಿಂದ ಎದೆ ಗರ್ಭಾಶಯ ಅಂಡಾಶಯ ಪ್ರಾಸ್ಟೇಟ್ ಮುಂತಾದ ಕ್ಯಾನ್ಸರ್ ಗಳನ್ನ ತಡೆಗಟ್ಟುತ್ತದೆ. ಬೇಸಿಗೆ ಯಲ್ಲಿ ಹೆಚ್ಚಾಗಿ ಸೌತೆಕಾಯಿ ಬಳಸುವುದರಿಂದ ಬಾಯಾರಿಕೆ ಕಡಿಮೆ ಆಗುತ್ತದೆ ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡುತ್ತದೆ. ಸೌತೆಕಾಯಿ ಯಲ್ಲಿ ಇರುವ ಬೈಟೂ ರಾಸಾಯನಿಕಗಳು ನಿಮ್ಮ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾದ ಸೂಕ್ಷ್ಮ ಜೀವಿಗಳನ್ನು ನಾಶ ಪಡಿಸುತ್ತದೆ.