ನಿಮಗೆ ತಿಳಿಯದ ತಿರುಪತಿ ತಿಮ್ಮಪ್ಪನ ಮಹಿಮೆ ಇಲ್ಲಿದೆ. ತಿರುಪತಿ ತಿಮ್ಮಪ್ಪನ ಏಳು ಬೆಟ್ಟಗಳಿಗೆ ಹಾಗೂ ಶೇಷ ನಾಗನಿಗೆ ಇರುವ ರಹಸ್ಯಕಾರಿ ಸಂಬಂಧ ಏನು ಗೊತ್ತಾ? ವರ್ಷಕ್ಕೆ ಒಮ್ಮೆ ಎಷ್ಟೋ ಜನ ತಿಮ್ಮಪ್ಪನ ದರ್ಶನ ಮೊರಗಿ ತಲೆ ಬೋಳಿಸಿಕೊಂಡು ಬರುತ್ತಾರೆ. ಆದರೆ ಎಷ್ಟೋ ಜನಕ್ಕೆ ತಿಮ್ಮಪ್ಪನ ಮಹಿಮೆ ಬಗ್ಗೆ ಗೊತ್ತೇ ಇಲ್ಲ ಬನ್ನಿ ನೋಡೋಣ. ಆಂಧ್ರ ಪ್ರದೇಶದ ತಿರೂಚಿನ ಚಿತ್ತುರಿನಲ್ಲಿ ತಿರುಪತಿ ಬೆಟ್ಟದಲ್ಲಿ ಈ ಆದಿ ಶೇಷ ನೆಲಸಿರುವನು ನೀಲಾದ್ರಿ ಶೇಷಾದ್ರಿ ಹೀಗೆ ಏಳು ಬೆಟ್ಟಗಳನ್ನು ದಾಟಿದರೆ ತಿಮ್ಮಪ್ಪನ ದರ್ಶನ ಭಾಗ್ಯ ಲಭಿಸುತ್ತದೆ. ಹೀಗಾಗಿ ಇದು ಸೆವೆನ್ ಹಿಲ್ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ ಅಲ್ಲದೆ ಈ ಬೆಟ್ಟಗಳನ್ನು ಶೇಷ ನಾಗನ ಏಳು ಹೆಡೆಗಳು ಎಂದು ಕರೆಯಲಾಗುತ್ತದೆ ಜೊತೆಗೆ ತಿರುಪತಿ ತಿಮ್ಮಪ್ಪ ಅತ್ಯಂತ ಶಕ್ತಿಯುತ ಹಾಗೂ ಶ್ರೀಮಂತ ದೇವರು ಎಂದು ಹೇಳುವ ಮಾತಿದೆ. ಪ್ರಾಚೀನ ದೇವಾಲಯಗಳಲ್ಲಿ ಒಂದು ತಿರುಪತಿ ಹೌದು ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ
ಇದು ಕೂಡ ಒಂದು ಈ ದೇವಾಲಯದಲ್ಲಿ ಬಾಗಿಲನ್ನು ತೆಗೆಯುವುದರಿಂದ ಹಿಡಿದು ದೇವರಿಗೆ ಅಭಿಷೇಕ ಆರತಿ ಮುಗಿಸಿ ಬಾಗಿಲನ್ನು ಮುಚ್ಚುವ ವರೆಗೂ ವಿಶೇಷ ಪಾರಂಪರಿಕ ವಿಧಿ ವಿಧಾನ ಇಲ್ಲಿ ಅನುಸರಿಸಲಾಗುತ್ತದೆ. ಇಲ್ಲಿ ಪೂಜೆ ಆಗಮ ಶಾಸ್ತ್ರದ ಪ್ರಕಾರ ನೆರವೇರುತ್ತದೆ. ಎಂಟು ಅಡಿ ಎತ್ತರದ ಶ್ರೀ ವೆಂಕಟೇಶ್ವರ ಮೂರ್ತಿ ಆನಂದ ನಿಲಯ ದಿವ್ಯ ವಿಮಾನ ಗುಮ್ಮಟದ ಕೆಳಗೆ ಗರ್ಭ ಗುಡಿಯಲ್ಲಿ ಭವ್ಯವಾಗಿ ನಿಂತಿದೆ. ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಕಾಂಚೀಪುರಂ ನ ಪಲ್ಲವರು ಹಾಗೂ ಚೋಳರು ವಿಜಯನಗರದ ಅರಸರ ಕೊಡುಗೆ ಇದೆ ಇವರ ಕಾಲದಲ್ಲಿ ದೇಗುಲವನ್ನು ಹಂತ ಹಂತವಾಗಿ ಅಭಿವೃದ್ಧಿ ಆಯಿತು. ಶ್ರೀ ಕೃಷ್ಣ ದೇವರಾಯ ವಿಜಯನಗರ ಆಳ್ವಿಕೆಯಲ್ಲಿ ಈ ದೇಗುಲವು ಸಂಪತ್ತು ಹಾಗೂ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯಿತು ಹಾಗೂ ಅವರು ಅಪಾರ ಪ್ರಮಾಣದ ಚಿನ್ನ ಆಭರಣ ಕೊಡುಗೆಯಾಗಿ ಕೊಟ್ಟಿದ್ದರು ಇದೆ ಕಾರಣಕ್ಕೆ ಈಗಲೂ ಕೃಷ್ಣ ದೇವರಾಯ ಹಾಗೂ ಆತನ ರಾಣಿಯ ಮೂರ್ತಿ ಈ ದೇವಸ್ಥಾನದಲ್ಲಿ ಇದೆ. 11ನೆಯ ಶತಮಾನದಲ್ಲಿ ಇದ್ದ ಸಂತ ರಾಮಾನುಜರು ತಿರುಪತಿ ಶ್ರೀನಿವಾಸನ ದರ್ಶನ ಪಡೆದಿದ್ದರು. ಇಲ್ಲಿ ವೈಕುಂಠ ಏಕಾದಶಿಯ ದಿನ
ಸ್ವಾಮಿಯ ದರ್ಶನ ಪಡೆದರೆ ಎಲ್ಲಾ ಪಾಪಗಳು ನಾಶ ಆಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ತಿಮ್ಮಪ್ಪನ ನೋಡಲು ಬರುವ ಭಕ್ತರು ವಿವಿಧ ಬಗೆಯ ಹರಕೆ ಸಲ್ಲಿಸುತ್ತಾರೆ ಅದರಲ್ಲಿ ಮುಡಿ ಹರಕೆ ಇಲ್ಲಿ ಸಾಮಾನ್ಯವಾಗಿ ಇರುತ್ತದೆ ಅಲ್ಲದೆ ಇಲ್ಲಿನ ಲಡ್ಡು ಪ್ರಸಾದ ಕೂಡ ತುಂಬಾ ಪ್ರಸಿದ್ಧ. ತಿರುಪತಿ ದರ್ಶನಕ್ಕೆ ಹೋದವರು ಲಡ್ಡು ತಂದು ಇಲ್ಲ ಎಂದರೆ ತಿರುಪತಿಗೆ ಹೋಗಿಯೇ ಇಲ್ಲ ಎನ್ನುವ ಭಾವ ಭಕ್ತರಲ್ಲಿ ಬರುತ್ತದೆ. ಇನ್ನೂ ಬ್ರಹ್ಮೋತ್ಸವ ತಿರುಪತಿಯ ಪ್ರಮುಖ ಹಬ್ಬ ಇದನ್ನು ಪ್ರತಿ ಸೆಪ್ಟೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ ಇದಲ್ಲದೆ ಭವ್ಯವಾಗಿ ವೈಕುಂಠ ಏಕಾದಶಿ ರಾಮನವಮಿ ಮತ್ತು ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ವೈಷ್ಣವ ಉತ್ಸವಗಳನ್ನು ಆಚರಿಸಲಾಗುತ್ತದೆ. ಕಟೀಲು ದುರ್ಗಾ ದೇವಿಯ ಆರಾಧನೆ ಮಾಡುವ ವಾಸುದೇವನ್ ಮಹಾ ಗುರುಗಳು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾರೆ. ಒಳ್ಳೇ ಉದ್ಯೋಗ್ ಸಿಗಲಿಲ್ಲ ಅಥವ ಒಳ್ಳೆ ಹುಡುಗ ಸಿಗಲಿಲ್ಲ ಎನ್ನುವ ಚಿಂತೆ ಅಥವ ಒಳ್ಳೆ ಹುಡುಗಿ ಸಿಗಲಿಲ್ಲ ಎನ್ನುವ ಚಿಂತೆ ಹೀಗೆ ಹತ್ತಾರು ರೀತಿಯ ಸಮಸ್ಯೆಗಳು ಅಥವ ವಶೀಕರ್ನ್ ದಂತಹ ಸಾಕಷ್ಟು ತಂತ್ರ ಹೊಂದಿರುವ ಮಹಾ ಗುರು ಶ್ರೀನಿವಾಸ್ ಅವರ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತವಾಗಿ ದೊರೆಯಲಿದೆ.