ಹನ್ನೊಂದು ರೋಗಗಳನ್ನು ಗುಣ ಮಾಡುವ ನವಿಲುಗರಿ

ಮನೆ ಮದ್ದು

ತನ್ನಷ್ಟಕ್ಕೆ ತಾನೇ ಉದುರಿ ಬಿದ್ದಂತಹ ನವಿಲುಗರಿಗಳಿಂದ ಔಷಧಿ ತಯಾರಿಸಬಹುದು ಅದಕ್ಕೋಸ್ಕರ ನವಿಲನ್ನು ಹಿಡಿದು ಹಿಂಸೆ ಮಾಡಿ ನವಿಲು ಗರಿ ತಂದು ಔಷಧಿ ಮಾಡಿದರೆ ಅದರಿಂದ ಯಾವುದೇ ಉಪಯೋಗ ಆಗುವುದಿಲ್ಲ ಆದ್ದರಿಂದ ಉದುರಿದ ನವಿಲು ಗರಿಯಿಂದ ಔಷಧಿ ಮಾಡಿದರೆ ಅದು ಉಪಯುಕ್ತ ಈ ನವಿಲು ಗರಿಯನ್ನು ಸ್ವಚ್ಚವಾಗಿ ತೊಳೆದು ತುಪ್ಪದಲ್ಲಿ ಅದ್ದಿ ಅದನ್ನು ಮಣ್ಣಿನಿಂದ ಮಾಡಿರುವಂತಹ ಹಣತೆ ತುಪ್ಪದ ದೀಪದಿಂದ ಸುಡಬೇಕು ಹಾಗೆ ಸುಟ್ಟಾಗಲೆ ಅದರಿಂದ ನಮಗೆ ಭಸ್ಮ ಸಿಗುತ್ತದೆ ಆ ಭಸ್ಮವನ್ನು ನಾವು ಹಿಕ್ಕಾ ಅಂದರೆ ಬಿಕ್ಕಳಿಕೆ ಬರುತ್ತದೆ ಅದನ್ನು ನಿಯಂತ್ರಣ ಮಾಡಲಿಕ್ಕೆ ಆಗುವುದಿಲ್ಲ ಗಂಟೆಗಟ್ಟಲೆ ಬಿಕ್ಕಳಿಕೆ ಬಂದಾಗ ಅಂತಹ ಸಂದರ್ಭದಲ್ಲಿ ಈ ಮಯೂರ ಪುಚ್ಛ ಭಸ್ಮವನ್ನು ಸ್ವಲ್ಪ ಜೇನುತುಪ್ಪದಲ್ಲಿ ನೆಕ್ಕಿಸಬೇಕು ಹೀಗೆ ಮಾಡಿದಾಗ ಆ ಬಿಕ್ಕಳಿಕೆ ನಿಲ್ಲುತ್ತದೆ. ಆಮೇಲೆ ಗರ್ಭವತಿಯರಲ್ಲಿ ಮುಂಜಾನೆ ವಾಂತಿ ಬಂದಂಗೆ ಆಗುತ್ತದೆ ಆದರೆ ಬರುವುದಿಲ್ಲ ಆಗ ಈ ಮಯೂರ ಪುಚ್ಚದ ಭಸ್ಮವನ್ನು ಉಪಯೋಗ ಮಾಡಬಹುದು

ಇದರ ಜೊತೆಗೆ ಪ್ರಯಾಣ ಮಾಡುವಾಗ ಕೆಲವೊಬ್ಬರಿಗೆ ವಾಂತಿ ಯಾಗುವಂತಹ ಅನುಭವ ಆಗುತ್ತದೆ ಅಂತವರು ಕೂಡ ಇದನ್ನು ಬಳಸಬಹುದು ನಂತರ ಪಿತ್ತದಿಂದ ತಲೆನೋವು ಬಂದಾಗ ಅಂತಹ ಸಂದರ್ಭದಲ್ಲಿ ಕೂಡ ಈ ಮಯೂರ ಪುಚ್ಛದ ಭಸ್ಮವನ್ನು ಎಳನೀರು ಅಥವಾ ಮಜ್ಜಿಗೆ ಜೊತೆಗೆ ಸೇವನೆ ಮಾಡಿದ್ದೆ ಆದಲ್ಲಿ ಪಿತ್ತದಿಂದ ಬಂದಿರುವ ತಲೆನೋವು ಕೂಡ ಶಮನ ಆಗುತ್ತದೆ. ಆದ್ದರಿಂದ ಸ್ನೇಹಿತರೆ ನಾವು ಪ್ರಕೃತಿಯ ಜೊತೆಗೆ ನಾವು ಎಷ್ಟು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಎನ್ನುವುದು ನಮಗೆ ಇದರಿಂದಾನೆ ಗೊತ್ತಾಗುತ್ತದೆ ಮನುಷ್ಯ ಒಬ್ಬನೇ ಈ ಪ್ರಕೃತಿಯಲ್ಲಿ ಬದುಕಲು ಸಾಧ್ಯವಿಲ್ಲ ಒಂದಕೊಂದು ಎಷ್ಟು ಪೂರಕವಾಗಿವೆ ನವಿಲು ಗರಿಯ ಭಸ್ಮದಿಂದ ಮನುಷ್ಯನ ಆರೋಗ್ಯ ಅದು ನಮಗೆ ಎಷ್ಟೊಂದು ಪರೋಪಕಾರಿಯಾಗಿ ಕಾಣುತ್ತದೆ ಅದೇ ರೀತಿ ನಾವು ಕೂಡ ಅದನ್ನು ಅದಕ್ಕೆ ಉಪಯೋಗ ಆಗುವಂತಹ ಪರಿಸರವನ್ನು ನಾವು ನಿರ್ಮಾಣ ಮಾಡಿಕೊಡಬೇಕು ಆದ್ದರಿಂದ ಮನುಷ್ಯನಿಗೆ ಸಂಗಜೀವಿ ಎಂದು ಕರೆಯುತ್ತಾರೆ

ಕೇವಲ ಮನುಷ್ಯ ಮನುಷ್ಯನ ಜೊತೆ ಇರುವುದು ಸಂಗಜೀವಿ ಅಲ್ಲ ಗಿಡಮರಗಳು ಪ್ರಾಣಿ ಪಕ್ಷಿಗಳು ಕ್ರಿಮಿಕೀಟಗಳು ಎಲ್ಲವೂ ಕೂಡ ಈ ಸೌರವ್ಯೂಹದ ಅಂಗಗಳು ಮನುಷ್ಯನಿಗೆ ಭೂಮಿಯ ಮೇಲೆ ಎಷ್ಟು ಅಧಿಕಾರ ಇದೆಯೋ ಅವುಕ್ಕೂ ಕೂಡ ಅಷ್ಟೇ ಅಧಿಕಾರ ಇರುತ್ತದೆ ಅವುಗಳಿಗೆ ನಾವು ಬದುಕಲಿಕ್ಕೆ ಬಿಡಬೇಕು ಅವಾಗ ಮಾತ್ರ ಒಂದಕ್ಕೊಂದು ಪೂರಕವಾಗಿ ಎಲ್ಲರ ಆರೋಗ್ಯವನ್ನು ಎಲ್ಲರೂ ಕೂಡ ಸಂತೋಷವಾಗಿ ಹೊಂದಿಕೊಂಡು ನೂರುಕಾಲ ಸುಖವಾಗಿ ಬದುಕಲು ಸಾಧ್ಯ. ದಯವಿಟ್ಟು ಮಯೂರ ಪುಚ್ಛದ ಭಸ್ಮಕ್ಕೋಸ್ಕರ ನವಿಲುಗಳಿಗೆ ಹಾನಿ ಮಾಡಬೇಡಿ ಹಾಗೆ ಮಾಡಿದ ಭಸ್ಮದಿಂದ ಯಾವುದೇ ಉಪಯೋಗ ಇಲ್ಲ ಬದಲಾಗಿ ಪ್ರಕೃತಿ ದತ್ತವಾಗಿ ತಾನೇ ಉದುರಿ ಬಿದ್ದಂತಹ ನವಿಲು ಗರಿ ಮಾತ್ರ ಇಂತಹ ಒಂದು ಉಪಯೋಗಕ್ಕೆ ಬರುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಎಲ್ಲರಿಗೂ ಸಹ ಶೇರ್ ಮಾಡಿ.

Leave a Reply

Your email address will not be published.