ರಾಣಿಜೇನು ತನ್ನ ಕುಟುಂಬಕ್ಕೆ ಏನು ಮಾಡುತ್ತೆ ತಿಳಿಯಬೇಕು

ಇತರೆ ಸುದ್ದಿ

ಜೇನು ನೊಣಗಳಲ್ಲಿದೆ ಮನುಷ್ಯನ ಜೀವನವನ್ನು ಊಹಿಸುವುದು ಕಷ್ಟ. ಏಕೆಂದರೆ ಬರಿ ಜೇನನ್ನು ಕೊಡುವ ಕೆಲಸ ಮಾತ್ರ ಜೇನು ನೊಣಗಳು ಮಾಡುತ್ತಿಲ್ಲ. ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲೂ ಇವುಗಳದ್ದು ದೊಡ್ಡಪಾತ್ರ. ಮನುಷ್ಯ ತಿನ್ನುವ ಹಣ್ಣು ಹಂಪಲು ತರಕಾರಿ ಸೇರಿದಂತೆ ಎಲ್ಲಾ ಆಹಾರದ ಹಿಂದೆ ಇರುವುದು ಇದೇ ಜೇನುನೊಣಗಳ ಪರಾಗಸ್ಪರ್ಶದ ಪ್ರಯತ್ನ. ಮನುಷ್ಯ ತಿನ್ನುವ ಮೂರನೇ ಒಂದರಷ್ಟು ಅಂದರೆ ಶೇ 70ರಷ್ಟು ಆಹಾರ ಜೇನು ನೊಣಗಳನ್ನು ಅವಲಂಭಿಸಿದೆ. ಬಾಕಿ ಉಳಿದ ಶೇ 30 ರಷ್ಟು ಚಿಟ್ಟೆ ದುಂಬಿ ಸೇರಿದಂತೆ ಇತರ ಕೀಟ ಸಂತತಿಯನ್ನು ಅವಲಂಭಿಸಿದೆ. ಹೀಗಾಗಿ ಜೇನುನೊಣಗಳು ಇಲ್ಲದಿದ್ದರೆ ಯಾವ ವಸ್ತುವೂ ನಮ್ಮ ಕೈಸೇರಲು ಸಾಧ್ಯವಿಲ್ಲ. ಇವುಗಳು ಸಮೂಹಜೀವಿಗಳು. ಇವುಗಳಲ್ಲಿ ಮೂರು ಸ್ತರಗಳಿವೆ. ಒಂದು ಜೇನುಗೂಡಿನಲ್ಲಿ ರಾಣಿ ಜೇನಿರುತ್ತದೆ. ಅದರಲ್ಲಿ ನೂರಾರು ಡ್ರೋಣ್ ಜೇನುಗಳಿರುತ್ತವೆ. ಡ್ರೊಣ್ ಜೇನು ಎಂದರೆ ಗಂಡು ಮತ್ತು ಸಾವಿರಾರು ಕೆಲಸಗಾರ ನೊಣಗಳಿರುತ್ತವೆ. ಇವುಗಳ ಸಮನ್ವಯದ ಕೆಲಸದ ಫಲವೇ ನಮ್ಮ ಬಾಯಿತಣಿಸುವ ಮಧು. ಇದು ನಾಲಿಗೆಗೂ ಸಿಹಿ ಆರೋಗ್ಯಕ್ಕೂ ಒಳ್ಳೆಯ ಮತ್ತೆ ರಾಣಿ ಜೇನಿನ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ.

ತುಂಬಾ ಜನ ರಾಣಿಜೇನು ಎಂಬ ಹೆಸರು ಕೇಳಿರುತ್ತಾರೆ. ಆದರೆಅದರ ವಿಶೇಷತೆ ಏನು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಒಂದು ಜೇನುಗೂಡಿನಲ್ಲಿ ಶೇ99 ರಷ್ಟು ಕೆಲಸಗಾರ ನೊಣಗಳಿರುತ್ತವೆ. ಇವೆಲ್ಲಾ ಮೊಟ್ಟೆಯನ್ನು ಇಡಲಾರದ ಹೆಣ್ಣು ನೊಣಗಳು ಇವುಗಳು ಬದುಕಿನ ವಿವಿಧ ಸ್ತರಗಳಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಲಾರ್ವಾಗೆ ಆಹಾರ ಕೊಡುವುದು ರಾಣಿಯ ಆರೈಕೆ ಮಾಡಿ ಓಲೆಸುವುದು ಜೇನುಗೂಡನ್ನು ಸ್ವಚ್ಚವಾಗಿಡುವುದು. ಆಹಾರವನ್ನು ಸಂಗ್ರಹಿಸುವುದು ಜೇನು ತಟ್ಟಿಗಳನ್ನು ನಿರ್ವಹಿಸುವುದು ಸೇರಿದಂತೆ ಹಲವು ಜವಾಬ್ದಾರಿ ಈ ಹೆಣ್ಣು ಜೇನುನೊಣಗಳ ಗಳದ್ದು. ಇನ್ನು ಗಂಡು ಹುಳುಗಳನ್ನು ಡ್ರೊಣ್ ಎಂದು ಕರೆಯುತ್ತಾರೆ. ಇವುಗಳ ದೇಹ ದೊಡ್ಡದಾಗಿದ್ದು ದೊಡ್ಡ ಕಣ್ಣುಗಳನ್ನು ಹೊಂದಿರುತ್ತವೆ. ರಾಣಿಜೊತೆಗೆ ಸಂಗಾತಿಯಾಗಿ ಇರುವುದು ಈ ಡ್ರೋಣ್ ಗಳ ಕೆಲಸ ಆದರೆ ರಾಣಿ ಜೊತೆಗಿನ ಸಾಂಗತ್ಯದ ಅವಕಾಶ ಸಿಗುವುದು ಒಂದೇ ಒಂದು ಡ್ರೋಣ್ ಗೆ ಮಾತ್ರ. ಆದರೆ ಹೀಗೆ ರಾಣಿ ಹಾಗೂ ಡ್ರೋಣ್ ಒಂದು ಗೂಡಿದ ತಕ್ಷಣ ಗಂಡುನೊಣ ಸತ್ತುಹೋಗುತ್ತದೆ. ಇನ್ನು ರಾಣಿಯೇ ಇಡೀ ಗೂಡಿಗೆ ನಾಯಕಿ ಮತ್ತು ಮೊಟ್ಟೆ ಇಡುವ ಸದಸ್ಯೆ ಈಕೆ ಮಾತ್ರ ವಸಂತಕಾಲದಲ್ಲಿ ಮತ್ತೆ ಬೇಸಿಗೆಯಲ್ಲಿ ರಾಣಿ ಜೇನು ದಿನಕ್ಕೆ ಒಂದೂವರೆ ಸಾವಿರದಷ್ಟು ಮೊಟ್ಟೆ ಇಡುತ್ತದೆ.

ಒಂದು ಪಕ್ಷ ರಾಣಿನೊಣ ಸತ್ತರೆ ಕೆಲಸಗಾರ ನೊಣಗಳು ಹೊಸ ಲಾರ್ವಾದ ಮೂಲಕ ಹೊಸ ರಾಣಿಯನ್ನು ಸೃಷ್ಟಿಸುತ್ತವೆ. ಅಂದರೆ ಸತ್ತನೊಣ ಮೊಟ್ಟೆಯಿಟ್ಟಿದ್ದರೆ ಮಾತ್ರ ಹೊಸ ರಾಣಿಯನ್ನು ಸೃಷ್ಟಿ ಮಾಡಲು ಸಾಧ್ಯ ಇಲ್ಲದಿದ್ದರೆ ಇಡೀ ಸಂಸಾರವೇ ಕೊನೆಯಾಗಿ ಹೊಗುತ್ತದೆ. ಇನ್ನು ಕೆಲಸಗಾರ ನೊಣಗಳು ಐದರಿಂದ ಆರುವಾರಗಳಷ್ಟು ಮಾತ್ರ ಬದುಕುತ್ತವೆ ಆದರೆ ರಾಣಿಜೇನು ಸುಮಾರು ಆರರಿಂದ ಏಳು ವರ್ಷಗಳ ಕಾಲ ಬದುಕುತ್ತವೆ ಮತ್ತು ಇದು ಕೇವಲ ಶಬ್ದಾರ್ಥ ದಲ್ಲಿ ಮಾತ್ರ ರಾಣಿಯಲ್ಲ. ರಾಜರಾಣಿಯರಿಲ್ಲದೇ ಮಾನವರಿರಬಹುದು ಆದರೆ ಕಾಡುಪ್ರಾಣಿಗಳು ರಾಜ ರಾಣಿ ಯರಿಲ್ಲದೇ ಬದುಕಬಹುದು ಆದರೆ ಜೇನಿಗೆ ಮಾತ್ರ ರಾಣಿಯಿಲ್ಲದೇ ಬದುಕೇ ಇಲ್ಲ. ಇದ್ಯಾಕೆ ಹೀಗೆ ಅನಿಸಬಹುದು ಇದಕ್ಕೂ ಒಂದು ಕಾರಣವಿದೆ. ರಾಣಿಜೇನು ಎಂದರೆ ಜೇನು ಕುಟುಂಬದಲ್ಲಿರುವ ಏಕೈಕ ಹೆಣ್ಣು. ಹೆಣ್ಣಿಲ್ಲದೆ ಬಾಳಿಲ್ಲ. ಅದಕ್ಕೆ ಈ ರಾಣಿಜೇನಿಗೆ ಅಷ್ಟೊಂದು ಮಹತ್ವ. ಆದರೆ ಆ ಕುಟುಂಬದಲ್ಲಿ ಸಾವಿರಾರು ಹೆಣ್ಣು ಜೇನುಗಳು ಕೂಡ ಇರುತ್ತವೆ. ಮೊಟ್ಟೆ ಗಳನ್ನು ಇಡುವ ಏಕೈಕ ಜೀವಿ ಎಂದರೆ ಅದು ರಾಣಿಜೇನು ಮಾತ್ರ.

ಹಾಗಾಗಿ ಅದಕ್ಕೆ ಹೆಚ್ವಿನ ಮಹತ್ವ. ಮತ್ತೆ ಈ ರಾಣಿಜೇನು ಒಂದು ಗಂಡಿನೊಂದಿಗೆ ಕೂಡುವುದು ಗೂಡಿನಲ್ಲಿ ಅಲ್ಲ ಆಕಾಶದಲ್ಲಿ ಕೂಡಿದ ನಂತರ ಆ ರಾಣಿಜೇನು ಆ ಗಂಡಿನ ವೀ ರ್ಯವನ್ನು ತನ್ನ ವೀ ರ್ಯಚೀಲದಲ್ಲಿ ಸಂಗ್ರಹಿಸಿಡುತ್ತದೆ. ಈ ವೀ ರ್ಯವನ್ನು ಮುಂದೆ ಅದು ಜೀವಮಾನವೀಡಿ ಕಾಪಾಡಿಕೊಳ್ಳುತ್ತದೆ. ಮತ್ತೆ ಈ ರೀತಿ ಒಂದು ಬಾರಿ ಕೂಡಿದ ರಾಣಿಜೇನು ಮತ್ತೆ ಯಾವತ್ತೂ ಕೂಡ ಗಂಡು ಜೇನಿನೊಂದಿಗೆ ಕೂಡುವುದಿಲ್ಲ. ಮತ್ತೆ ಅದಷ್ಟೇ ಅಲ್ಲ ಹೀಗೆ ಸಂಗ್ರಹಿಸಿದ ವೀ ರ್ಯವನ್ನು ತನಗೆ ಬೇಕಾದಾಗ ಸ್ರವಿಸಿ ನಂತರ ಮೊಟ್ಟೆಯನ್ನು ಇಡುವ ಶಕ್ತಿ ರಾಣಿಜೇನಿನಲ್ಲಿದೆ. ಈ ರೀತಿ ಮೊಟ್ಟೆಯಿಡುವ ಮುನ್ನವೇನಾದರೂ ಅಂತ್ಯವಾದರೆ ಆ ಇಡೀ ಜೇನು ಕುಟುಂಬವೇ ಸರ್ವನಾಶವಾಗುತ್ತದೆ. ಹಾಗಾಗಿ ಡ್ರೋಣ್ ಗಂಡು ನೊಣಗಳು ಹಾಗೂ ಹೆಣ್ಣು ನೊಣಗಳು ರಾಣಿಜೇನನ್ನು ತುಂಬಾ ಹುಷಾರಾಗಿ ನೊಡಿಕೊಳ್ಳುತ್ತವೆ. ತಂದೆ ತಾಯಿ ಇಲ್ಲದೇ ಮಕ್ಕಳು ಬದುಕಬಹುದು. ರಾಜರಾಣಿ ಇಲ್ಲದೇನೇ ಪ್ರಜೆಗಳೂ ಕೂಡ ಬದುಕಬಹುದು ಕಾಡಿನ ರಾಜ ಇಲ್ಲದೇನೆ ಪ್ರಾಣಿಗಳೂ ಸಹ ಬದುಕಬಹುದು ಆದರೆ ರಾಣಿಜೇನು ಇಲ್ಲದೇ ಇತರ ಜೇನುಗಳು ಬದುಕಲು ಸಾಧ್ಯವಿಲ್ಲ

Leave a Reply

Your email address will not be published.