ಮಕ್ಕಳಲ್ಲಿ ಮೌಲ್ಯಗಳು ಬೆಳೆಯಬೇಕೆಂದರೆ ಅವರು ಅಜ್ಜ ಅಜ್ಜಿಯ ಜೊತೆ ಬೆಳೆಯಬೇಕು

ಉಪಯುಕ್ತ ಸಲಹೆ

ಮಕ್ಕಳಲ್ಲಿ ಮೌಲ್ಯಗಳು ಬೆಳೆಯಬೇಕೆಂದರೆ ಅವರು ಅಜ್ಜ ಅಜ್ಜಿಯ ಜೊತೆ ಬೆಳೆಯಬೇಕು. ಒಂದಾನೊಂದು ಕಾಲದಲ್ಲಿ ಕುಡು ಕುಟುಂಬ ಇರುತ್ತಿತ್ತು ಅಂದರೆ ಒಂದು ಕುಟುಂಬ ಎಂದರೆ ಬರೀ ಅಪ್ಪ ಅಮ್ಮ ಮಗ ಮಗಳು ಇಷ್ಟೇ ಅಲ್ಲ ಬದಲಾಗಿ ಅಪ್ಪ ಅಮ್ಮ ಅಜ್ಜಿ ಅಜ್ಜ ಮಕ್ಕಳು ಮೊಮ್ಮಕ್ಕಳು ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಪ್ರತಿಯೊಬ್ಬರು ಸೇರಿ ಇದ್ದಾಗಲೇ ಅದೊಂದು ಕುಡು ಕುಟುಂಬ ಎನಿಸಿಕೊಳ್ಳುತ್ತಿತ್ತು ಆದರೆ ಈಗ ಅಂತಹ ಕುಡು ಕುಟುಂಬಗಳನ್ನು ನಾವು ಬೆರಳೆಣಿಕೆಯಷ್ಟು ಸಹ ಕಾಣಲು ಸಾಧ್ಯವಿಲ್ಲ ಏಕೆಂದರೆ ಈಗ ಅಂದರೆ ಇಂದಿನ ಈ ಆಧುನಿಕ ಯುಗದಲ್ಲಿ ನಾವಿಬ್ಬರು ನಮಗಿಬ್ಬರು ಅನ್ನುವ ಒಂದು ಕುಟುಂಬ ಘೋಷಣೆ ಎಂದರೆ ತಪ್ಪಾಗಲಿಕ್ಕಿಲ್ಲ ಹೀಗೆ ನಾಲ್ಕು ಜನ ಇರುವುದು ಒಂದು ಕುಟುಂಬವಾಗಿ ಬಿಟ್ಟಿದೆ ಇಲ್ಲಿ ಅಜ್ಜ ಅಜ್ಜಿಗೆ ಜಾಗವೇ ಇರುವುದಿಲ್ಲ ಹೀಗಿರುವಾಗ ಯಾವ ಮಕ್ಕಳು ತಾನೇ ಅಜ್ಜ ಅಜ್ಜಿಯ ಜೊತೆ ಬೆಳೆಯಲು ಸಾಧ್ಯ ಅವರ ಅನುಭವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಯೋಚನೆ ಮಾಡಿ ಆದ್ದರಿಂದ ಮಕ್ಕಳು ಅಜ್ಜ ಅಜ್ಜಿಯ ಜೊತೆ ಇದ್ದರೆ ತಮ್ಮ ಜೀವನಲ್ಲಿ ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ.

ಮೊಮ್ಮಕ್ಕಳು ಎಂದರೆ ಅಜ್ಜ ಮತ್ತು ಅಜ್ಜಿಯರಿಗೆ ಎಲ್ಲಿದ ಪ್ರೀತಿ ಹಾಗೇನೇ ಮೊಮ್ಮಕ್ಕಳಿಗೂ ಕೂಡ ಅವರ ಅವಶ್ಯಕತೆ ಅಷ್ಟೇ ಮುಖ್ಯವಾಗಿರುತ್ತದೆ ನಮ್ಮ ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಅವರ ಸಾಮಿಪ್ಯ ತುಂಬಾ ಮುಖ್ಯ ಎಂಬುದು ಕೂಡ ಸಾಬೀತಾಗಿದೆ ಅಜ್ಜ ಮತ್ತು ಅಜ್ಜಿಯರಿಗೆ ಪ್ರೌಢಿಮೆ ಎಲ್ಲರಿಗಿಂತ ಹೆಚ್ಚಾಗಿನೆ ಇರುತ್ತದೆ ಇದು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಅವರ ಅತಿಯಾದ ಪ್ರೀತಿ ಮಕ್ಕಳ ತೀವ್ರತೆಯ ದೃಷ್ಟಿಯಿಂದ ತುಂಬಾ ಸಹಾಯಕವಾಗುತ್ತದೆ ಮಕ್ಕಳ ಮೇಲೆ ಅತಿಯಾದ ನಿಗಾ ವಹಿಸುವ ಇವರ ಮೇಲೆ ನಾವು ಸಹ ಅತಿಯಾದ ನಂಬಿಕೆಯನ್ನು ಇಡಬಹುದಾಗಿದೆ ಜೊತೆಗೆ ಕುಟುಂಬದ ಇತಿಹಾಸ ಮತ್ತು ನೆರೆ ಹೊರೆ ಎಲ್ಲವೂ ಮಕ್ಕಳಿಗೆ ತಿಳಿಯುತ್ತದೆ ಭಾವನಾತ್ಮಕ ವರ್ತನೆಗಳ ಸಮಸ್ಯೆಯನ್ನು ಹೊಂದಿದ್ದರೆ ಅದನ್ನು ಆರಾಮವಾಗಿ ಬಗೆಹರಿಸಿಕೊಳ್ಳುವ ಶಕ್ತಿ ಇವರಿಗೆ ಬರುತ್ತದೆ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದ ಅಧ್ಯಯನದಲ್ಲಿ ಈ ಅಂಶಗಳು ಬೆಳಕಿಗೆ ಬಂದೀವೆ ಇಲ್ಲಿ ಕಂಡು ಬಂದಿರುವ ಅಂಶವೆಂದರೆ ಅಜ್ಜ ಅಜ್ಜಿಯರ ಜೊತೆ ಬೆಳೆದವರು

ಎಲ್ಲ ವಯಸ್ಸಿನವರಿಗೂ ಗೌರವ ಕೊಡುವುದನ್ನು ಕಲಿತಿರುತ್ತಾರೆ ಇಂತಹ ಮಕ್ಕಳಿಗೆ ವಯಸ್ಸಾದವರನ್ನು ನೋಡಿ ಹೆದರುವ ಪರಿಸ್ಥಿತಿ ಇರುವುದಿಲ್ಲ ಇದು ಅಜ್ಜ ಮತ್ತು ಅಜ್ಜಿಯರ ದೃಷ್ಟಿಯಿಂದಲೂ ತುಂಬಾ ಅನುಕುಲಾಗಿದೆ ಅವರ ವಯಸ್ಸಿನಲ್ಲಿ 5 ವರ್ಷ ಚಿಕ್ಕವರಂತೆ ಬಾಸವಾಗುವುದಲ್ಲದೆ ಇದರಿಂದ ಒಂಟಿತನ ದೂರವಾಗುತ್ತದೆ ಅಲ್ಲದೆ ಮಕ್ಕಳು ಅಜಾಗರುಕತೆಗೆ ಒಳಗಾಗುವುದಿಲ್ಲ ಅಪ್ಪ ಮತ್ತು ಅಮ್ಮ ಇಬ್ಬರು ಕೆಲಸಕ್ಕೆಂದು ಹೊರ ಹೋಗುವವರಿದ್ದರೆ ಆಗ ಮಕ್ಕಳಿಗೆ ಅಪ್ಪ ಅಮ್ಮನ ಸ್ಥಾನವನ್ನು ಅಜ್ಜ ಅಜ್ಜಿ ಬಿಟ್ಟರೆ ಬೇರೆ ಯಾರು ತುಂಬಲು ಸಾಧ್ಯವಿಲ್ಲ ಇದರ ಜೊತೆಗೆ ನೈತಿಕ ಮೌಲ್ಯಗಳ ಬಲವರ್ಧನೆಗೆ ಇದು ಸಹಾಯಕವಾಗಲಿದೆ. ಆದ್ದರಿಂದ ಮಕ್ಕಳು ತಮ್ಮ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಕಲಿಯಬೇಕೆಂದರೆ ಅವರು ಅಜ್ಜ ಮತ್ತು ಅಜ್ಜಿಯರ ಜೊತೆ ಬೆಳೆಯಲೇಬೇಕು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ತಿಳಿಸಿ.

Leave a Reply

Your email address will not be published.