ಐಸ್ ಕ್ಯೂಬ್ ಬಳಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಿ

ಮನೆ ಮದ್ದು

ಹೆಣ್ಣು ಮಕ್ಕಳು ತಮ್ಮ ತ್ವಚೆಯೆ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಅದ್ಕಕಾಗಿ ಹಲವಾರು ವಿವಿಧ ಬಗೆಯ ಉತ್ಪನ್ನಗಳನ್ನು ಬಳಸುತ್ತಾರೆ ಹಾಗೇನೇ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಕ್ರೀಮ್ ಗಳನ್ನು ಬಳಸುತ್ತಾರೆ ಆದರೆ ಇವುಗಳಿಂದ ಯಾವುದೇ ರೀತಿಯಾದ ಪ್ರಯೋಜನ ಸಿಗುವುದಿಲ್ಲ ಆದ್ದರಿಂದ ಮನೆಯಲ್ಲೇ ಸಿಗುವ ಪಧಾರ್ಥಗಳನ್ನು ಬಳಸಿಕೊಂಡು ಯಾವ ರೀತಿ ನಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು ಅದಕ್ಕೆ ಈ ಐಸ್ ಕ್ಯೂಬ್ ತುಂಬಾ ಉಪಯುಕ್ತವಾಗಿದೆ. ನಮಗೆ ಉರಿ ಅಥವಾ ನೋವು ಉಂಟಾದಾಗ ಅದರ ಉಪಶಮನಕ್ಕಾಗಿ ನಾವು ಐಸ್ ಕ್ಯೂಬ್ ಗಳನ್ನು ಬಳಸುತ್ತೇವೆ ಆದರೆ ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ ಹಾಗೇನೆ ಐಸ್ ಕ್ಯೂಬ್ ಬಳಸುವುದರಿಂದ ನಮ್ಮ ತ್ವಚೆ ಯಾವಾಗಲೂ ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ ಹಾಗೇನೇ ಮುಖದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಚರ್ಮ ಹೊಳೆಯಲು ಈ ಐಸ್ ಕ್ಯೂಬ್ ಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ.

ಈ ಐಸ್ ಕ್ಯೂಬ್ ಗಳನ್ನು ನೆರವಾಗಿ ನಮ್ಮ ಮುಖಕ್ಕೆ ಹಚ್ಚಬಾರದು ಬದಲಾಗಿ ಬಿಳಿಯ ಬಟ್ಟೆಯಲ್ಲಿ ಹಾಕಿಕೊಂಡು ನಯವಾಗಿ ಮುಖಕ್ಕೆ ಉಜ್ಜಬೇಕು. ಹಾಗೇನೇ ಬೇಸಿಗೆ ಕಾಲದಲ್ಲಿ ಮುಖಕ್ಕೆ ಪೌಂಡೇಶನ್ ಹಚ್ಚುವ ಮೊದಲು ಶುದ್ಧ ಕಾಟನ್ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಅದರಿಂದ ಮುಖವನ್ನು ನಿಧಾನವಾಗಿ ಉಜ್ಜಿಕೊಂಡು ನಂತರ ಪೌಂಡೇಶನ್ ಬಳಸಬೇಕು ಹೀಗೆ ಮಾಡುವುದರಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಿಕೊಳ್ಳಲು ಸಹಾಯವಾಗುತ್ತದೆ. ಮೊಡವೆಗಳ ಸಮಸ್ಯೆ ಇರುವವರು ಕೂಡ ಈ ಐಸ್ ಕ್ಯೂಬ್ ಗಳನ್ನು ಬಳಸುವುದರಿಂದ ಮೊಡವೆ ನಿವಾರಣೆಯಾಗುತ್ತವೆ ಗುಳ್ಳೆಗಳು ಒಡೆದು ಕೆಂಪಾದಾಗ ಅವುಗಳು ಸಹ ಈ ಐಸ್ ಕ್ಯೂಬ್ ಬಳಕೆಯಿಂದ ಮಾಯವಾಗುತ್ತವೆ. ಐಸ್ ಕ್ಯೂಬ್ ನ್ನು ನಮ್ಮ ತ್ವಚೆಗೆ ಹಚ್ಚುವುದರಿಂದ ಅದರಲ್ಲಿರುವ ತಂಪಾದ ನೀರಿನ ಅಂಶ ಒಣಗಿದ ನಮ್ಮ ಚರ್ಮಕ್ಕೆ ಹೊಸ ಮೆರುಗನ್ನು ಕೊಡುವುದರ ಜೊತೆಗೆ ನೋಡಲು ತುಂಬಾ ಆಕರ್ಷಿಕವಾಗಿ ಇರುತ್ತದೆ ಆದ್ದರಿಂದ ದಿನನಿತ್ಯ

ಎರಡು ಬಾರಿ 20 ನಿಮಿಷಗಳ ಕಾಲ ಐಸ್ ಕ್ಯೂಬ್ ಗಳಿಂದ ಮುಖವನ್ನು ನಿಧಾನವಾಗಿ ಉಜ್ಜಿ ತೊಳೆದುಕೊಂಡರೆ ಮುಖ ಹೊಳೆಯುತ್ತದೆ. ಎಣ್ಣೆಯ ತ್ವಚೆ ಇರುವವರು ಐಸ್ ಕ್ಯೂಬ್ ಬಳಸುವಾಗ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಉಜ್ಜಬೇಕು. ಚರ್ಮ ಸೂರ್ಯನ ಕಾಂತಿಗೆ ಸುಟ್ಟು ಹೋಗಿದ್ದರೆ ಅಥವಾ ಒಡೆದಿದ್ದರೆ ಅಲೋವೆರ ರಸವನ್ನು ಐಸ್ ಕ್ಯೂಬ್ ಗಳಾಗಿ ಮಾಡಿಕೊಂಡು ಚರ್ಮಕ್ಕೆ ಉಜ್ಜಬಹುದು. ಅಲೋವೆರ ರಸದ ಐಸ್ ಕ್ಯೂಬ್ ತೆಗೆದುಕೊಂಡು ಮೊಣಕೈ ಕುತ್ತಿಗೆ ಭಾಗದಲ್ಲಿ 15 ರಿಂದ 20 ನಿಮಿಷ ನಿಧಾನವಾಗಿ ಉಜ್ಜುವುದರಿಂದ ಕಪ್ಪು ಚರ್ಮ ಸಮಸ್ಯೆ ನಿವಾರಣೆಯಾಗಿ ಅಲ್ಲಿಯೂ ಕೂಡ ನಿಮ್ಮ ಚರ್ಮ ಹೊಳೆಯುವುದರ ಜೊತೆಗೆ ಕಾಂತಿಯನ್ನು ಹೊಂದುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಹಾಗೇನೇ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ

Leave a Reply

Your email address will not be published.