ಹಸು ಹಾಲು ದೇವರು ಕೊಟ್ಟಿರುವ ನೈಸರ್ಗಿಕವಾದ ಒಂದು ವಸ್ತು. ಹಸುವನ್ನು ಕಾಮಧೇನು ಎಂದು ಕೂಡ ಕರೆಯುತ್ತಾರೆ ಹಾಗೇಯೇ ಹಬ್ಬ ಹರಿದಿನಗಳಲ್ಲಿ ಪೂಜೆ ಸಹ ಸಲ್ಲಿಸುತ್ತೇವೆ ಈ ಹಸುವಿನ ಹಾಲಿನಲ್ಲಿ ದೇಹಕ್ಕೆ ಬೇಕಾಗುವ ಹಲವಾರು ಪೋಷಕಾಂಶಗಳು ಇವೆ ಆದರೆ ಈಗ ಈ ಹಸುವಿನ ಹಾಲಿನಲ್ಲಿ ಸಹ ಕಲಬೆರಕೆ ಆಗಿದೆ ಈ ಪ್ಯಾಕೆಟ್ ಹಾಲನ್ನು ಯಾವ ರೀತಿ ತಯಾರು ಮಾಡುತ್ತಾರೆ ಗೊತ್ತಾ? ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ. ಈ ಕಂಪನಿಯವರು ಹಾಲು ತುಂಬಾ ದಿನ ಕೆಡಬಾರದು ಎಂದು ಪ್ರಿಸರ್ವೇಟಿವ್ ಎನ್ನುವ ವಿಷಕಾರಿ ಅಂಶವನ್ನು ಮಿಕ್ಸ್ ಮಾಡುತ್ತಾರೆ. ಈ ಪ್ರಿಸರ್ವೇಟಿವ್ ಎನ್ನುವುದು ತುಂಬಾ ಹಾನಿಕಾರಕ ವಸ್ತು. ಸರ್ಕಾರಿ ಏಜೆನ್ಸಿಗಳು ಮತ್ತು ಎಫ್ ಎಸ್ ಎಸ್ ಎ ಐ ಇದು ಹಲವು ಸಮೀಕ್ಷೆಗಳನ್ನು ನಡೆಸಿ ಹಾಲಿನಲ್ಲಿ ಟೆಸ್ಟ್ ಮಾಡಿದೆ. ಈ ಟೆಸ್ಟ್ ನಲ್ಲಿ ದೊಡ್ಡ ದೊಡ್ಡ ಬ್ರಾಂಡೆಡ್ ಕಂಪನಿಗಳು ವಿಫಲ ಹೊಂದಿವೆ
ಕೆಲವರು ದೊಡ್ಡ ಬ್ರಾಂಡೆಡ್ ಕಂಪನಿಗಳ ದುಬಾರಿ ಪ್ರಾಡ್ಯಾಕ್ಟ್ ಚೆನ್ನಾಗಿ ಇರುತ್ತದೆ ಎಂದು ಅಂದುಕೊಳ್ಳುತ್ತಾರೆ ಆದರೆ ಹಾಲಿನ ವಿಷಯದಲ್ಲಿ ಮಾತ್ರ ಇದು ಸರಿಯಲ್ಲ. ಬ್ರಾಂಡ್ ನೀಡುವ ಮೊದಲು ಹಾಲಿನ ಗುಣ ಮಟ್ಟವನ್ನು ನೋಡಿದರೆ ತುಂಬಾ ಒಳ್ಳೆಯದು. ಕೆಮಿಕಲ್ ಮಿಶ್ರಿತ ಹಾಲು ನಮ್ಮ ಆರೋಗ್ಯಕ್ಕೆ ವಿಷ. ಇದು ನಿಜವಾಗಿ ಅಚ್ಚರಿ ಹಾಗೂ ಬೇಸರದ ಸಂಗತಿ ಎಂದೇ ಹೇಳಬಹುದು ತಾಯಿ ಮಗುವಿಗೆ ಎದೆ ಹಾಲನ್ನು ಕೊಡುತ್ತಾರೆ ಅದೇ ರೀತಿ ಹಸುವಿನ ಹಾಲನ್ನು ಸಹಾ ಚಿಕ್ಕ ಮಕ್ಕಳಿಗೆ ಕೊಡುತ್ತಾರೆ ಮಗುವಿಗೆ ಅಮ್ಮ ಮೊದಲನೇ ತಾಯಿ ಆದರೆ ಹಸುವಿಗೆ ಎರಡನೇ ತಾಯಿ ಎಂದೇ ಹೇಳುತ್ತಾರೆ. ಎಫ್ ಎಸ್ ಎಸ್ ಎ ಐ ಇದರ ವರದಿಯ ಪ್ರಕಾರ ಬ್ರಾಂಡೆಡ್ ಹಾಲುಗಳ ಪ್ಯಾಕೆಟ್ ಹಾಗೂ ಬಾಟಲ್ ನೋಡಲು ಮಾತ್ರ ಚೆಂದ ಆದರೆ ಈ ಹಾಲಿನಲ್ಲಿ ಸಿಕ್ಕಾಬಟ್ಟೆ ಕೆಮಿಕಲ್ ಇವೆ. ಇದರಲ್ಲಿ ಆಂಟಿ ಬಯೋಟಿಕ್ ಸೇರಿದಂತೆ ಹಲವಾರು ಆರೋಗ್ಯಕ್ಕೆ ಹಾನಿಕಾರಕ ಆದ ಅಂಶಗಳು ಇವೆ. ನಮ್ಮ ಹಿರಿಯರು ಹಿಂದಿನ ಕಾಲದಲ್ಲಿ ಹಸುಗಳಿಗೆ ನೈಸರ್ಗಿಕ ಸಿಗುವ ಆಹಾರ ನೀಡುತ್ತಾ ಇದ್ದರು.
ಹಾಗೆ ಕೆಚ್ಚಲಿನಿಂದ ಹಾಲು ಕರೆಯುತ್ತ ಇದ್ದರು ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಹಾಲು ಕರೆದು ಉಳಿದ ಹಾಲನ್ನು ಕರುವಿಗೆ ಕುಡಿಯಲು ಬಿಡುತ್ತಾ ಇದ್ದರು ಆದರೆ ನಮ್ಮ ಆಧುನಿಕತೆ ಎಲ್ಲವೂ ಬದಲಾಯಿಸಿದೆ. ಮುಂದುವರೆದ ಟೆಕ್ನಾಲಜಿಯಿಂದ ಹೊಸ ಹೊಸ ಉಪಕರಣಗಳು ಮಾರುಕಟ್ಟೆಗೆ ಬಂದಿದೆ ಹಸುವಿನ ಹಾಲನ್ನು ತೆಗೆಯಲು ಕೆಚ್ಚಲಿಗೆ ಮಿಷನ್ ಹಾಕಿ ಹಾಲನ್ನು ತೆಗೆಯಲಾಗುತ್ತದೆ ಹೀಗೆ ಮಾಡುವುದರಿಂದ ಹಸುವಿನ ಆರೋಗ್ಯಕ್ಕೂ ಒಳ್ಳೆಯದಲ್ಲ. ರೈತರು ಹಾಲು ಸಿಗಲಿ ಎಂದು ಪಶು ಅಧಿಕಾರಿಗಳ ಸಲಹೆ ಸೂಚನೆ ಅಂತೆ ಮಾರುಕಟ್ಟೆಯಲ್ಲಿ ಸಿಗುವ ಆಹಾರವನ್ನು ಹಸುಗಳಿಗೆ ನೀಡುತ್ತಾರೆ. ಸಾಧ್ಯ ಆದ್ರೆ ಆದಷ್ಟು ಹಸುವಿನ ಹಾಲು ಸೇವನೆ ಮಾಡಿರಿ ಆದ್ರೆ ಸಿಟಿ ನಲ್ಲಿ ಇರೋ ಜನಕ್ಕೆ ಶುದ್ದ ಹಸು ಹಾಲು ಸಿಗದೇ ಇರೋ ಕಾರಣ ನಮ್ಮ ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ತಮ ಗುಣಮಟ್ಟ ಹೊಂದಿದೆ ಸದ್ಯಕ್ಕೆ ಇದುವೇ ಕುಡಿಯಲು ಯೋಗ್ಯ.