ತಲೆನೋವಿಗೆ ಸೂಕ್ತ ಮನೆ ಮದ್ದು

ಮನೆ ಮದ್ದು

ಸಾಮಾನ್ಯವಾಗಿ ಮನುಷ್ಯನಿಗೆ ಏನಾದರೂ ಒಂದು ವಿಷಯ ತಲೆಯಲ್ಲಿ ಬಂದರೆ ಅದರ ಬಗ್ಗೆ ಯೋಚಿಸಿದರೆ ತಲೆನೋವು ಬರುತ್ತದೆ ಅದಕ್ಕೆ ನಾವು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ ಆದರೆ ಹೀಗೆ ಮಾತ್ರೆಗಳನ್ನು ಸೇವಿಸುವುದು ತುಂಬಾ ಅಪಾಯಕಾರಿಯಾಗಿದೆ ಆದ್ದರಿಂದ ತಲೆನೋವು ಬಂದಾಗ ಮಾತ್ರೆಗಳನ್ನು ಸೇವಿಸುವ ಬದಲು ಮನೇಮದ್ದುಗಳನ್ನು ಉಪಯೋಗಿಸುವುದು ತುಂಬಾ ಮುಖ್ಯ ಆದ್ದರಿಂದ ತಲೆನೋವಿಗೆ ಮನೆಮದ್ದುಗಳನ್ನು ಹೇಗೆ ಮಾಡುವುದು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ನಾವು ತಿಳಿಯೋಣ ಬನ್ನಿ. ಈ ಮನೆಮದ್ದುಗಳನ್ನು ಬಳಸಿದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಸಾಮಾನ್ಯ ತಲೆನೋವು ಮನೇಮದ್ದಿಗೆ ಗುಣವಾಗುವುದು ಯಾವ ಮನೆಮದ್ದಿಗೆ ತಲೆನೋವು ಕಡಿಮೆಯಾಗದಿದ್ದರೆ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯಿರಿ ಕೆಲವೊಮ್ಮೆ ಕಣ್ಣಿನ ಸಮಸ್ಯೆ ತಲೆ ಒಳಗೆ ಗಡ್ಡೆ ಬರುವುದು ಈರೀತಿಯ ಸಮಸ್ಯೆ ಇದ್ದರೆ ವಿಪರೀತ ತಲೆನೋವು ಕಂಡುಬರುತ್ತದೆ ಹಾಗೇನೇ ನಮ್ಮ ದೇಹದಲ್ಲಿ ಯಾವುದಾದರೂ ನರಗಳ ದೌರ್ಬಲ್ಯ ಇದ್ದರು ಕೂಡ ನಮಗೆ ತಲೆನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ

ಆದ್ದರಿಂದ ಈ ತಲೆನೋವನ್ನು ಹೋಗಲಾಡಿಸಲು ಮನೆಮದ್ದನ್ನು ಬಳಸಬಹುದು ಅದರಿಂದ ನಮಗೆ ಬೇಗನೆ ಉಪಶಮನ ಸಿಗುತ್ತದೆ ಹಾಗಾದರೆ ಮನೆಮದ್ದುಗಳು ಹೀಗಿವೆ ನೋಡಿ ಮೊದಲನೇ ಮನೆಮದ್ದು ಜಾಕಾಯಿ ಜಾಕಾಯಿಯ ಪುಡಿಯನ್ನು ಬಿಸಿನೀರಿನಲ್ಲಿ ಕಲಸಿ ಅದನ್ನು ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಎರಡನೆಯ ಮನೆಮದ್ದು ಎಣ್ಣೆ ಮಸಾಜ್ ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಶ್ರಣ ಮಾಡಿ ಹಣೆಗೆ ನಿಧಾನವಾಗಿ ಉಜ್ಜುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಮೂರನೆಯ ಮನೆಮದ್ದು ಬಸಳೆಸೋಪ್ಪು ವಿಪರೀತವಾಗಿ ತಲೆನೋವು ಬಂದಿದ್ದರೆ ಬಸಳೆಸೊಪ್ಪಿನ ರಸವನ್ನು ಹಣೆಗೆ ಲೇಪಿಸಬೇಕು ನಿದ್ದೆ ಮಾಡಬೇಕು ಹೀಗೆ ಮಾಡುವುದರಿಂದ ತಲೆನೋವು ಬೇಗನೆ ಮಾಯವಾಗುವುದು. ನಾಲ್ಕನೆಯ ಮನೆಮದ್ದು ಕ್ಯಾರೆಟ್ ಮತ್ತು ಪಾಲಕ್ ರಸ ಪಾಲಕ್ ಸೊಪ್ಪಿನ ರಸ ಮತ್ತು ಕ್ಯಾರೆಟ್ ರಸ ಬೆರೆಸಿ ಕುಡಿದರೆ ಮೈಗ್ರೇನ್ ತಲೆನೋವು ಎನ್ನುವುದು ಕಡಿಮೆಯಾಗುತ್ತದೆ. ಐದನೆಯ ಮನೆಮದ್ದು ಶುಂಠಿ ಮತ್ತು ನಿಂಬೆರಸ ತಲೆಯಲ್ಲಿನ ರಕ್ತನಾಳಗಳ ಉರಿಯುತವನ್ನು ತಗ್ಗಿಸಲು ಸಹಾಯ ಮಾಡಿ

ತಲೆನೋವನ್ನು ಶುಂಠಿ ನಿವಾರಿಸುತ್ತದೆ ದಿನವೂ ಎರಡರಿಂದ ಮೂರು ಬಾರಿ ಎರಡು ಚಮಚ ಶುಂಠಿ ರಸ ಮತ್ತು ಎರಡು ಚಮಚ ನಿಂಬೆರಸವನ್ನು ಮಿಶ್ರಣ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ. ಆರನೆಯ ಮನೆಮದ್ದು ಐಸ್ಕ್ಯಾಬ್ ಐಸ್ ನ ತಂಪು ಉರಿಯುತಗಳಿಂದ ಉಂಟಾಗುವ ತಲೆನೋವನ್ನು ಕಡಿಮೆ ಮಾಡುತ್ತದೆ. ಏಳನೆಯ ಮನೆಮದ್ದು ಒದ್ದೆಬಟ್ಟೆ ಹಾಕಿಕೊಳ್ಳಿ ಐಸ್ ನೀರಲ್ಲಿ ಎದ್ದಿದ ಟವೆಲ್ ನ್ನು ತಲೆಗೆ ಪದೇ ಪದೇ ನೀವು ಹಾಕಿಕೊಂಡರೆ ಆರಾಮ ಎನಿಸುವುದು ಇದರಿಂದ ನಿಮ್ಮ ತಲೆನೋವು ನಿವಾರಿಸುವುದೂ. ಕೊನೆಯದಾಗಿ ತುಳಸಿ ಎಲೆ ತುಳಸಿ ಎಲೆ ರಸವನ್ನು ಶ್ರೀಗಂಧದ ಪುಡಿ ಜೊತೆ ಕಲಸಿ ಹಣೆಗೆ ಲೇಪನ ಹಚ್ಚುವುದರಿಂದ ತಲೆನೋವು ಶಮನವಾಗುತ್ತದೆ ಮತ್ತು ಇದರಿಂದ ನೋವು ಬೇಗನೆ ಕಡಿಮೆಯಾಗುತ್ತದೆ ಆದ್ದರಿಂದ ಸ್ನೇಹಿತರೆ ಸಣ್ಣ ಪುಟ್ಟ ನೋವಿಗೆ ಮನೆಯಲ್ಲೇ ಮನೆಮದ್ದನ್ನು ಮಾಡಿಕೊಂಡು ಬಳಸಿ ನೋಡಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.