ಜೀರಿಗೆಯಲ್ಲಿದೆ ನಮ್ಮ ಆರೋಗ್ಯಕ್ಕೆ ಬೇಕಾದ ಅದ್ಭುತ ಶಕ್ತಿ. ಭಾರತೀಯ ಪದ್ಧತಿಯ ಅಡುಗೆ ಮನೆಯಲ್ಲಿ ಮಸಾಲ ಪಧಾರ್ಥಗಳಿಗೆ ತುಂಬಾ ಪ್ರಾಮುಖ್ಯತೆ ಇದೆ ಏಲಕ್ಕಿ ಲವಂಗ ಚೆಕ್ಕೆ ಅಥವಾ ದಾಲ್ಚಿನ್ನಿ ಮೆಣಸು ಜೀರಿಗೆ ಹೀಗೆ ಪ್ರತಿಯೊಂದು ಸಾಂಬಾರ ಪಧಾರ್ಥ ಗಳಿಗೂ ಕೂಡ ಒಂದೊಂದು ಆಹಾರ ಲಕ್ಷಣಗಳಿವೆ ಇವೆಲ್ಲವೂ ನಮಗೆ ಊಟದಲ್ಲಿ ರುಚಿಯನ್ನು ಕೊಡುವುದರ ಜೊತೆಗೆ ನಮ್ಮ ದೇಹದಲ್ಲಿ ಅನಾರೋಗ್ಯ ಸ್ಥಿತಿ ಉಲ್ಬಣಿಸಿದಾಗಲು ಸಹ ತುಂಬಾ ಪ್ರಯೋಜನಕಾರಿ ಆಗಿವೆ ಆದ್ದರಿಂದ ಈ ಮಸಾಲಾ ಪಧಾರ್ಥಗಳಿಗೆ ನಮ್ಮ ಭಾರತೀಯ ಸಂಸ್ಕ್ರುತಿಯಲ್ಲಿ ತುಂಬಾ ಪ್ರಾಮುಖ್ಯತೆ ಇದೆ ಇವುಗಳನ್ನು ನಾವು ಕೆಲವೊಂದು ಸಣ್ಣ ಪುಟ್ಟ ನೋವುಗಳಿಗೆ ಕಾಯಿಲೆಗಳಿಗೆ ಮನೆ ಮದ್ದಾಗಿಯೂ ಸಹ ಬಳಸಬಹುದು. ಮಸಾಲ ಪಧಾರ್ಥಗಳೂ ಇಲ್ಲದೆ ಯಾವ ಅಡುಗೆಯು ಸಹ ರುಚಿಸುವುದಿಲ್ಲ ಹಾಗೇನೇ ಇದರಲ್ಲಿ ಜೀರಿಗೆಯು ಸಹ ಒಂದು ಈ ಜೀರಿಗೆ ನಮಗೆ ಅಡುಗೆಯಲ್ಲಿ ರುಚಿ ಕೊಡುವುದಲ್ಲದೆ ಇನ್ನು ಅನೇಕ ಲಾಭಗಳನ್ನು ಕೂಡ ನೀಡುತ್ತದೆ ಬನ್ನಿ ಸ್ನೇಹಿತರೆ ಹಾಗಾದರೆ ಜೀರಿಗೆಯ ವೈಶಿಷ್ಟತೆ ಏನು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ
ಜೀರಿಗೆಯು ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಸಾಂಬಾರ ಪಧಾರ್ಥವಾಗಿ ಬಳಕೆ ಆಗುತ್ತಿದೆ ಈ ಜೀರಿಗೆಯು ತನ್ನಲ್ಲಿ ಹಲವಾರು ಆರೋಗ್ಯಕ್ಕೆ ಸಂಬಂದಿಸಿದ ಅಂಶಗಳನ್ನು ಒಳಗೊಂಡಿದೆ ಅದರಲ್ಲೂ ಜೀರಿಗೆ ನೀರು ನಮ್ಮ ಆರೋಗ್ಯಕ್ಕೆ ಅತ್ತುತ್ತಮ ಬಿಸಿನೀರಿಗೆ ಸ್ವಲ್ಪ ಜೀರಿಗೆ ಹಾಕಿಕೊಂಡು ಕುದಿಸಿ ಸೋಸಿಕೊಂಡ ನೀರನ್ನು ದಿನಕ್ಕೆ ಒಂದು ಅಥವಾ ಎರಡು ಸಾರಿ ಕುಡಿಯಬೇಕು. ಈ ಜೀರಿಗೆ ನೀರು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಜೀರಿಗೆ ನೀರು ಕೊಬ್ಬು ಮತ್ತು ಕಾರ್ಬೋ ಹೈಡ್ರೇಟ್ಸ್ ಬಿಗಡಿಸುವ ಕಿಣ್ವಗಳಿಂದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ ಜೀರಿಗೆ ನೀರು ಹೊಟ್ಟೆ ಹಾಗೂ ಯಕೃತ್ ಗೆ ಹಲವಾರು ರೀತಿಯ ಲಾಭಗಳನ್ನು ಉಂಟು ಮಾಡುತ್ತದೆ. ಜೀರಿಗೆ ನೀರಿನಲ್ಲಿ ಇರುವಂತಹ ಆಹಾರದ ನಾರಿನಂಶವು ದೇಹದಲ್ಲಿ ಇರುವ ಹಾನಿಕಾರಕ ಕಲ್ಮಶವನ್ನು ಹೊರಹಾಕಿ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುತ್ತದೆ. ಈ ಅಡುಗೆಗೆ ಬಳಸುವ ಜೀರಿಗೆಯಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿ ಇದೆ
ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರಿಗೆಯಲ್ಲಿ ಇರುವ ಕಬ್ಬಿಣಾಂಶವು ರಕ್ತ ಹೀನತೆಯನ್ನು ನಿವಾರಣೆ ಮಾಡುತ್ತದೆ ಕಬ್ಬಿಣಾಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸವನ್ನು ನಿರ್ವಹಿಸುವುದು ಇದು ಕೆಂಪು ರಕ್ತ ಕಣಗಳನ್ನು ನಿರ್ಮಿಸುವುದು ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೇನೇ ಹೊಟ್ಟೆಯಲ್ಲಿ ಜಂತು ಹುಳುಗಳು ಚುಚ್ಚುತ್ತಿದ್ದರೆ ಈ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ಆ ನೋವು ನಿವಾರಣೆ ಯಾಗುತ್ತದೆ ಹಾಗೇನೇ ಬಾಯಲ್ಲಿ ಉಷ್ಣತೆಯಿಂದ ಗುಳ್ಳೆಗಳು ಆಗಿದ್ದರೆ ಅದಕ್ಕೂ ಕೂಡ ಹಸಿ ಜೀರಿಗೆಯನ್ನು ಸಣ್ಣಗೆ ಅಗೆದು ಬಾಯಿ ತುಂಬ ಹಾಗೆ ಇಟ್ಟು ಕೊಳ್ಳುವುದರಿಂದ ಬಾಯಿ ನೋವು ಕಡಿಮೆ ಆಗುವುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ