ಕುತ್ತಿಗೆ ನೋವಿಗೆ ಇಲ್ಲಿದೆ ಸುಲಭ ಮನೆಮದ್ದು

ಮನೆ ಮದ್ದು

ಕುತ್ತಿಗೆ ಎನ್ನುವುದು ಒಂದು ನಮ್ಮ ದೇಹದ ಅತ್ಯಗತ್ಯ ಚಲನ ಶೀಲಾ ಭಾಗವಾಗಿದೆ ಇದು ನಮ್ಮ ದೇಹ ಆರೋಗ್ಯವಾಗಿ ಕಾರ್ಯನಿರ್ವಹಿಸಲು ಮತ್ತು ಚಲನೆಯನ್ನು ಮಾಡಲು ಉತ್ತಮ ಸ್ಥಿತಿಯಲ್ಲಿ ಇರಬೇಕು ಕುತ್ತಿಗೆ ನೋವು ಉಂಟಾದಾಗ ನಾವು ತಲೆಯನ್ನು ಅಲುಗಾಡಿಸಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಕುತ್ತಿಗೆ ನೋವು ಕುತ್ತಿಗೆ ಹತ್ತಿರದ ಸ್ನಾಯು ಪ್ರದೇಶಗಳ ವಿಶೇಷವಾಗಿ ಭುಜಗಳಲ್ಲಿ ತೀಕ್ಷ್ಣವಾದ ಅಥವಾ ಮಂದವಾದ ನೋವು ಉಂಟಾಗುತ್ತದೆ ಈ ಕುತ್ತಿಗೆ ನೋವಿನಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಜುಮ್ ಎನಿಸುವಿಕೆ ಸಂವೇಧನೆ ಬಿಗಿತ ಕುತ್ತಿಗೆಯಲ್ಲಿ ಏನನ್ನು ನುಂಗಲು ಮತ್ತು ಊಟ ಮಾಡಲು ಆಗುವುದಿಲ್ಲ. ಹಾಗೇನೇ ಕುತ್ತಿಗೆ ನೋವಿನ ಪ್ರಮುಖ ಕಾರಣಗಳು ಹೀಗಿವೆ ಕಳಪೆ ನಿಲುವು ಸ್ನಾಯು ಸೆಳೆತ ದಣಿವು ಧೀರ್ಘ ಗಂಟೆಗಳ ಕಾಲದವರೆಗೆ ಕೆಲಸ ಮಾಡುವುದು ಕುತ್ತಿಗೆ ಮೇಲೆ ನೋವು ಉಂಟಾಗುವಂತೆ ಮಲಗುವುದು ಮತ್ತು ಅನುಚಿತ ವ್ಯಾಯಾಮ ಮಾಡುವುದು ಹಾಗೇನೇ ಇತರ ಕಾರಣಗಳನ್ನು ನೋಡುವುದಾದರೆ ಪೌಷ್ಟಿಕಾಂಶದ ಕೊರತೆಯಿಂದ ಆಗಿರಬಹುದು

ನರ ಸಂಕೋಚನ ಗರ್ಭ ಕಂಠದ ಸ್ಪೋಂಡಿಲೋಸಿಸ್ ಇತ್ಯಾದಿ ಕಾರಣಗಳು ಇರಬಹುದು. ಈ ಎಲ್ಲ ಕಾರಣಗಳಿಂದ ಕುತ್ತಿಗೆ ನೋವು ಪದೇ ಪದೇ ಕಾಣಿಸಿಕೊಂಡರೆ ಅದಕ್ಕೆ ಮನೆಮದ್ದು ಹೇಗೆ ಮಾಡುವುದು ಎನ್ನುವುದನ್ನು ಈ ಲೇಖನದಲ್ಲಿ ಈಗ ನೋಡೋಣ. ಐಸ್ ಪ್ಯಾಕ್ ಕುತ್ತಿಗೆ ನೋವು ಇರುವವರು ಐಸ್ಪ್ಯಾಕ್ ಇಟ್ಟುಕೊಳ್ಳಬಹುದು ಇದು ಉರಿಯೂತ ತಗ್ಗಿಸಲು ಮತ್ತು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಪ್ಸ್ ಮುಪ್ಪು ಇದರ ಸ್ನಾನ ಮಾಡಿದರೆ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಬಹುದು. ಇದು ತ್ವರಿತವಾದ ನೋವು ನಿವಾರಣೆಗಳಿಗೆ ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಶಕ್ತಿಯುತ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ ಇದು ಕುತ್ತಿಗೆ ನೋವನ್ನು ತ್ವರಿತವಾಗಿ ನಿವಾರಿಸುತ್ತದೆ ಈ ವಿನೆಗರನ್ನು ಟವಲ್ಲಿಗೆ ನೆನಸಿ ಕುತ್ತಿಗೆಯ ನೋವಿನ ಭಾಗದಲ್ಲಿ 2 ಗಂಟೆಗಳ ಕಾಲ ಅದನ್ನು ಹಾಗೆ ಬಿಡಿ ಮತ್ತು ದಿನಕ್ಕೆ ಎರಡು ಬಾರಿ ಪುನರ್ ಹಾಕಿದರೆ ಈ ನೋವಿನಿಂದ ಸುಧಾರಿಸ ಬಹುದು ನಾಲ್ಕನೆಯದಾಗಿ ಕುತ್ತಿಗೆ ವ್ಯಾಯಾಮಗಳು.

ಐದನೆಯದು ಅರಿಷಿಣ ಇದು ಉರಿಯೂತದ ಗುಣ ಲಕ್ಷಣಗಳನ್ನು ಹೊಂದಿದೆ ಅದು ನಿಮ್ಮ ಕುತ್ತಿಗೆ ನೋವನ್ನು ಶಮನ ಗೊಳಿಸಲು ಸಹಾಯ ಮಾಡುತ್ತದೆ ಅರಿಷಿಣ ರಕ್ತ ಪರಿಚಲನೆ ಸುಧಾರಿಸಲು ಮತ್ತು ಚೇತರಿಕೆ ಪ್ರಕ್ರಿಯೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಷಿಣ ಪುಡಿ ಸೇರಿಸಿ ಅದನ್ನು ಬಿಸಿಮಾಡಿ ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಸಾರಿ ಈ ಮಿಶ್ರಣವನ್ನು ನೀವು ಕುಡಿದರೆ ಕುತ್ತಿಗೆ ನೋವು ಬೇಗನೆ ಮಾಯವಾಗುತ್ತದೆ. ಆರನೆಯದು ಲ್ಯಾವೆಂಡರ್ ಎಣ್ಣೆಯು ಕುತ್ತಿಗೆ ನೋವನ್ನು ವೇಗವಾಗಿ ನಿವಾರಿಸುತ್ತದೆ ಕುತ್ತಿಗೆ ಮತ್ತು ಭುಜದ ಮೇಲೆ ಲ್ಯಾವೆಂಡರ್ ಎಣ್ಣೆಯನ್ನು ಸ್ವಲ್ಪ ಹಾಕಿ 10 ನಿಮಿಷ ಮಸಾಜ್ ಮಾಡಿದರೆ ನೋವು ಮಾಯವಾಗುತ್ತದೆ. ಶುಂಠಿ ಚಹಾ ನೈಸರ್ಗಿಕ ಉರಿಯೂತದ ಮಸಾಲೆಯಾಗಿದ್ದು ಇದು ರಕ್ತದ ಹರಿವು ಮತ್ತು ಕುತ್ತಿಗೆ ನೋವಿನ ಭಾಗಕ್ಕೆ ಹಿತವನ್ನು ನೀಡುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.