ಬಾಣಂತಿಯರು 40 ದಿನಗಳ ಒಳಗೆ ಹೀಗೆ ಮಾಡುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು. ಹೆರಿಗೆಯ ನಂತರ ಮಹಿಳೆಯರು ತುಂಬಾ ದಪ್ಪವಾಗುತ್ತಾರೆ ಹಾಗೇನೇ ಅವರ ಹೊಟ್ಟೆಯ ಭಾಗ ಕೂಡ ದಪ್ಪವಾಗುತ್ತ ಹೋಗುತ್ತದೆ ಅಂತವರು ಈಗ ಇಲ್ಲಿ ತಿಳಿಸುವ ಆಹಾರ ಕ್ರಮವನ್ನು ಅನುಸರಿಸಿದರೆ ಬೇಗನೆ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು ಬನ್ನಿ ಹಾಗಾದರೆ ಏನು ಅಂತ ತಿಳಿಯೋಣ. ಬಾಣಂತಿಯರು 40 ದಿನ ತಪ್ಪದೆ ವಿರಾಮವನ್ನು ಹೆರಿಗೆಯಾದ ನಂತರ ತೆಗೆದುಕೊಳ್ಳಬೇಕು ಏಕೆಂದರೆ ಹೆರಿಗೆಯಾದ ಮೇಲೆ ನಮ್ಮ ದೇಹ ತುಂಬಾ ಸೊರಗಿರುತ್ತದೆ ಹಾಗಾಗಿ ನಂತರ ನೀವು ದಪ್ಪ ಆಗಿದ್ದಿರ ಅಂತ ಒಮ್ಮೆಲೆ ಡಯಟ್ ಅಥವಾ ವ್ಯಾಯಾಮ ಮಾಡಲು ಪ್ರಾರಂಭಿಸಬೇಡಿ ಸ್ವಲ್ಪ ಸ್ವಲ್ಪವೇ ನಿಧಾನವಾಗಿ ವ್ಯಾಯಾಮ ಓಡಾಡುವುದು ಮಾಡಿ ನಂತರ ನಿಮ್ಮ ಆಹಾರ ಕ್ರಮದಲ್ಲಿ ನೀವು ಕರಬುಜ ಪಪ್ಪಾಯ ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆಯ ಬೊಜ್ಜು ಬೇಗನೆ ಕಡಿಮೆಯಾಗುತ್ತದೆ. ಹಾಗೇನೇ ಶುಂಠಿಯನ್ನು ಬಳಸಿ ಶುಂಠಿಯ ಕಷಾವನ್ನು ಕುಡಿಯಿರಿ.
ದಾಳಿಂಬೆ ಕೊಬ್ಬನ್ನು ಕರಗಿಸುವಲ್ಲಿ ತುಂಬಾ ಸಹಾಯಕವಾಗಿದೆ ದಾಳಿಂಬೆ ರಸವನ್ನು ನೀವು ದಿನಕ್ಕೆ ಎರಡು ಬಾರಿ ಕುಡಿಯಿರಿ ಜೊತೆಗೆ ದಾಳಿಂಬೆ ಹಣ್ಣನ್ನು ಹಾಗೆ ತಿನ್ನುವುದರಿಂದ ಕೂಡ ಕೊಬ್ಬು ಕಡಿಮೆಯಾಗಿ ದೇಹದ ಆಕಾರ ಚೆನ್ನಾಗಿ ಬರುತ್ತದೆ. ಬಾದಾಮಿಯು ಸಹ ಹೊಟ್ಟೆಯ ಕೊಬ್ಬನ್ನು ಕರಗಿಸಲು ಉಪಯುಕ್ತವಾಗಿದೆ ಒಂದು ಲೋಟ ಹಾಲಿನಲ್ಲಿ ಸ್ವಲ್ಪ ಅರಿಷಿಣ ಹಾಗೂ ಒಂದು ಚಮಚ ಬಾದಾಮಿ ಪುಡಿಯನ್ನು ಹಾಕಿಕೊಂಡು ಹಾಲನ್ನು ಕುಡಿಯುವುದರಿಂದ ದೇಹದಲ್ಲಿ ಇರುವ ಕೆಟ್ಟ ಬೊಜ್ಜು ಕರಗಿ ಒಳ್ಳೆಯ ಕೊಬ್ಬು ಶೇಕರಣೆಯಾಗುತ್ತದೆ. ಕಪ್ಪು ಎಳ್ಳು ಕಪ್ಪು ಎಳ್ಳಿನಲ್ಲಿ ಲೀಗ್ನನ್ ಇರುವುದರಿಂದ ಇದು ನಿಮ್ಮ ಬೊಜ್ಜನ್ನು ಕರಗಿಸಲು ತುಂಬಾ ಸಹಾಯ ಮಾಡುತ್ತದೆ ನೀವು ಕಪ್ಪು ಎಳ್ಳನ್ನು ಆಹಾರದಲ್ಲಿ ಬಳಸಿ. ಹಾಗೇನೇ ನೀವು ಚಹಾ ಕಾಫಿ ಕುಡಿಯುವ ಬದಲು ಹರ್ಬಲ್ ಚಹಾ ಗ್ರೀನ್ ಟೀ ಎನ್ನು ಕುಡಿಯಿರಿ ಇದರಿಂದ ಕೂಡ ಹೊಟ್ಟೆಯ ಬೊಜ್ಜು ಕರಗುತ್ತದೆ. ಹಾಗೇನೆ ಬಾಣಂತಿಯರು 40 ದಿನದ ಒಳಗಡೆ ಇರೀತಿ ಮಾಡುವುದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು
ನೀವು ನೀರು ಕುಡಿಯಬೇಕಾದರೆ ಬಿಸಿಯಾದ ನಿರನ್ನೇ ಸೇವಿಸಿ ಇದರಿಂದ ಆದಷ್ಟು ಮಟ್ಟಿಗೆ ನಿಮ್ಮ ಹೊಟ್ಟೆ ಬೊಜ್ಜು ಕಡಿಮೆ ಆಗುತ್ತದೆ ನಂತರ ನೀವು 6 ತಿಂಗಳಿಂದ 1 ವರ್ಷದ ವರೆಗೂ ಮಗುವಿಗೆ ಹಾಲು ಕುಡಿಸಲೇಬೇಕು ಇದರಿಂದ ನಿಮ್ಮ ದೇಹದ ತೂಕ ಖಂಡಿತವಾಗಿಯೂ ಕಡಿಮೆ ಆಗುತ್ತದೆ. 40 ದಿನಗಳ ವರೆಗೂ ಸ್ನಾನ ಮಾಡಿದ ನಂತರ ಹೊರಗಡೆ ಗಾಳಿಗೆ ಓಡಾಡಬೇಡಿ ಆದಷ್ಟು ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೋಳ್ಳಿ ಹಾಗೇನೇ ಚೆನ್ನಾಗಿ ಬೆವರು ಬರುತ್ತದೆ ಇದರಿಂದ ಕೂಡ ದೇಹದ ಬೊಜ್ಜು ಕರಗುತ್ತದೆ ಕೊನೆಯದಾಗಿ ನೀವು ಹೊಟ್ಟೆಯ ಬೊಜ್ಜನ್ನು ಕರಗಿಸಲು ಹೇರಿಗೆಯಾಗಿ 6 ತಿಂಗಳಿನ ಒಳಗಡೆ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲು ಪ್ರಯತ್ನಪಡಿ 6 ತಿಂಗಳ ನಂತರ ಸ್ವಲ್ಪ ಕಷ್ಟ ಆಗುತ್ತದೆ ಹೊಟ್ಟೆಯ ಬೊಜ್ಜನ್ನು ಕರಗಿಸಲು ಆದ್ದರಿಂದ ಸಾಧ್ಯವಾದಷ್ಟು ಹೀಗೆ ನಿಮ್ಮ ಆಹಾರ ಕ್ರಮದಲ್ಲಿ ಹೀಗೆ ಮಾಡಿ ನೀವು ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.