ಈ ಮನೆಮದ್ದುಗಳಿಂದ ಚರ್ಮ ಒಣಗದಂತೆ ಕಾಪಾಡಿಕೊಳ್ಳಿ

ಮನೆ ಮದ್ದು

ನಮ್ಮ ದೇಹದ ರಕ್ಷಣೆಗೆ ಇರುವುದು ನಮ್ಮ ಚರ್ಮ ಈ ಚರ್ಮ ಕೆಲವರಲ್ಲಿ ಯಾವಾಗಲೂ ತಾಜಾತನದಿಂದ ಕೂಡಿರುತ್ತದೆ ಹಾಗೇನೇ ಕೆಲವರಲ್ಲಿ ಒಣಗಿದ ಹಾಗೆ ಇರುತ್ತದೆ ಇನ್ನು ಚಳಿಗಾಲ ಬಂತು ಅಂದರೆ ಸಾಕು ಪ್ರತಿಯೊಬ್ಬರ ಚರ್ಮವು ಕೂಡ ಒಣಗಿ ನೋವು ಸಹ ಉಂಟಾಗುತ್ತದೆ ಆದರೆ ನಾವು ನಮ್ಮ ಚರ್ಮದ ಆರೈಕೆಯನ್ನು ಹೇಗೆ ಮಾಡಬೇಕು ಅದಕ್ಕೆ ಅನುಸರಿಸುವ ಸುಲಭ ಮಾರ್ಗಗಳು ಯಾವುವು ಎನ್ನುವುದನ್ನು ನಾವು ಅರಿಯುವುದೂ ತುಂಬಾ ಮುಖ್ಯ ಆದ್ದರಿಂದ ಅಂತಹ ಒಣ ಚರ್ಮವನ್ನು ಹೋಗಲಾಡಿಸಲು ಮನೆಮದ್ದುಗಳು ಯಾವುವು ಎನ್ನುವುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ. ಕೆಲವರಿಗೆ ಒಣ ಚರ್ಮದ ಸಮಸ್ಯೆ ಸದಾಕಾಲ ಕಾಡುತ್ತಿರುವ ಒಂದು ಸಮಸ್ಯೆಯಾಗಿರುತ್ತದೆ ಚರ್ಮ ಒಣಗಿದರೆ ತುರಿಕೆ ಕಡಿತ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ ಇದನ್ನು ನಿವಾರಿಸಲು ಜನರು ಹಲವಾರು ವಿಧಾನಗಳನ್ನು ಅನುಸರಿಸಬಹುದು ಹಾಗಾದರೆ ಯಾವ ವಿಧಾನಗಳು ನೋಡೋಣ ಮೊದಲನೆಯದು ಲೋಳೆಸರ ಎಳೆಯ ಚಿಗುರಿನ ಲೋಳೆಸರದ ಅಂಟನ್ನು ಚರ್ಮಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಅದು ಒಣಗಿದ ನಂತರ ತೊಳೆಯಬೇಕು ಹೀಗೆ ಮಾಡುವುದರಿಂದ ಒಣ ಚರ್ಮದ ಸಮಸ್ಯೆಗೆ ವಿರಾಮ ಸಿಗುವುದು.

ಎರಡನೆಯದು ಟೊಮೊಟೊ ಪೇಸ್ಟ ಇದನ್ನು ರೋಸ್ ವಾಟರ್ ನೋಂದಿಗೆ ಬೆರಸಿ ಕೈ ಕಾಲು ಕುತ್ತಿಗೆ ಮುಖಕ್ಕೆ ಹಚ್ಚುವುದರಿಂದ ಚರ್ಮ ಒಡೆಯುವುದನ್ನು ತಡೆಯಬಹುದು. ಮೂರನೆಯದು ದೇಹದ ಭಾಗಕ್ಕೆ ಆಗಾಗ ತೆಂಗಿನ ಎಣ್ಣೆಯನ್ನು ಹಚ್ಚುತ್ತಿದ್ದರೆ ಯಾವುದೇ ಚರ್ಮದ ಸಮಸ್ಯೆ ಇದ್ದರು ನಿವಾರಣೆಯಾಗುತ್ತದೆ. ನಾಲ್ಕನೆಯದು ರಾತ್ರಿ ಮಲಗುವ ಮುನ್ನ ದೇಹಕ್ಕೆ ಅಂದರೆ ದೇಹದ ಎಲ್ಲ ಭಾಗಗಳಿಗೆ ಮೊಸರು ಹಚ್ಚಿ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಸಿಗುವುದು. ಐದನೆಯದು ಹಾಲಿನ ಕೆನೆ ಒಣಗಿರುವ ಚರ್ಮದ ಮೇಲೆ ಹಾಲಿನ ಕೆನೆಯನ್ನು ಹಚ್ಚುವುದರಿಂದ ಒಣ ಚರ್ಮದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಆರನೆಯದಾಗಿ ಜೇನುತುಪ್ಪ ಗುಲಾಬಿ ನೀರಿನಲ್ಲಿ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಹಚ್ಚಿದರೆ ಚರ್ಮವು ಒಣಗುವುದಿಲ್ಲ ಇದರಿಂದ

ಚರ್ಮವು ತುಂಬಾ ಮೃದುವಾಗುವುದು. ಎಳನೆಯದು ಎಳ್ಳೆಣ್ಣೆ ಸ್ನಾನ ಮಾಡುವಾಗ ಅರ್ಧಗಂಟೆ ಮೊದಲು ಎಳ್ಳೆಣ್ಣೆಯನ್ನು ಹಚ್ಚುವುದರಿಂದ ಚರ್ಮಕ್ಕೆ ಸಂಬಂದಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಎಂಟನೆಯದು ಆಲಿವ್ ಎಣ್ಣೆ ಆಲಿವ್ ಎಣ್ಣೆಯಿಂದ ಒಣ ಚರ್ಮದ ಮೇಲ್ಭಾಗಕ್ಕೆ ಮಸಾಜ್ ಮಾಡುವುದರಿಂದ ಚರ್ಮವು ಬೇಗನೆ ಒಣಗುವುದಿಲ್ಲ ಚರ್ಮವು ಮೃದುವಾಗುತ್ತದೆ. ಒಂಬತ್ತನೆಯದು ಕಿತ್ತಲೆ ಹಣ್ಣಿನ ಸಿಪ್ಪೆ ಒಣಗಿದ ಕಿತ್ತಲೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಕೊನೆಯದಾಗಿ ಕ್ಯಾರೆಟ್ ಮತ್ತು ಬಿಟ್ರುಟ್ ಕ್ಯಾರೇಟ್ ಮತ್ತು ಬಿಟ್ರುಟ್ ರಸವನ್ನು ಜೇನುತುಪ್ಪದೊಂದಿಗೆ ದೇಹದ ಭಾಗಗಳಿಗೆ ಹಚ್ಚುವುದರಿಂದ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಇದರಿಂದ ಚರ್ಮವು ಬೇಗನೆ ಒಣಗುವುದಿಲ್ಲ. ಆದ್ದರಿಂದ ಹೀಗೆ ನಿಮ್ಮ ಚರ್ಮವನ್ನು ಒಣಗದಂತೆ ಕಾಪಾಡಿಕೊಳ್ಳಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ಎಲ್ಲರಿಗೂ ಸಹ ಶೇರ್ ಮಾಡಿ.

Leave a Reply

Your email address will not be published.