ತಿಂಗಳ ಋತು ಸ್ರಾವದ ನೋವನ್ನು ಈ ಮನೆಮದ್ದಿನಿಂದ ಗುಣಪಡಿಸಿಕೊಳ್ಳಿ

ಮನೆ ಮದ್ದು

ಪ್ರತಿಯೊಬ್ಬ ಹೆಣ್ಣಿಗೂ ಕೂಡ ತಿಂಗಳ ನೋವು ಸಹಜ ಇದು ಸರಿಸುಮಾರು 50 ರಿಂದ 85% ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ ಮಾಸಿಕ ಋತು ಚಕ್ರದಲ್ಲಿ ಕಾಣಿಸುವ ಈ ನೋವು ಋತುಚಕ್ರ ಶುರುವಾಗುವ ಒಂದೆರಡು ದಿನದ ಮುಂಚೆ ಶುರುವಾಗುತ್ತದೆ ಮೂರು ದಿನದವರೆಗೂ ಈ ನೋವು ಇರುತ್ತದೆ ಋತುಸ್ರಾವದ ಸಮಯದಲ್ಲಿ ಕಾಣಿಸುವ ಈ ನೋವು ದೇಹದ ಬೇರೆ ಬೇರೆ ಭಾಗಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ ಹೊಟ್ಟೆಯಲ್ಲಿ ಕಾಲಲ್ಲಿ ಹಾಗೂ ಸೊಂಟದಲ್ಲಿಯೂ ಕೂಡ ಕಾಣಿಸುತ್ತದೆ ಹೆಚ್ಚಿನ ಮಹಿಳೆಯರಲ್ಲಿ ಸೊಂಟದಲ್ಲಿ ತುಂಬಾ ನೋವು ಕಾಣಿಸುತ್ತದೆ ಆದ್ದರಿಂದ ಸ್ನೇಹಿತರೆ ಈ ಋತು ಸ್ರಾವದ ನೋವನ್ನು ಕೆಲವು ಮನೆಮದ್ದುಗಳಿಂದ ಕಡಿಮೆಗೊಳಿಸೋಣ ಬನ್ನಿ. ಮೊದಲನೇ ಮನೆಮದ್ದು ಕೆಲವಬ್ಬರಿಗೆ ಈ ನೋವು ಕ್ರಮೇಣ ಕಡಿಮೆಯಾಗುತ್ತದೆ ಹಾಗೇನೇ ಕೆಲವಬ್ಬರಿಗೆ ಹೆರಿಗೆಯ ನಂತರ ಸರಿಹೋಗುತ್ತದೆ ಈ ನೋವು ಮಾನಸಿಕ ಒತ್ತಡದಲ್ಲಿ ಇದ್ದವರಿಗೆ ಹಾಗೂ ಚಿಕ್ಕ ಪುಟ್ಟ ವಿಷಯಗಳಿಗೆ ತುಂಬಾ ಯೋಚನೆ ಮಾಡುವವರಲ್ಲಿ ಕಾಣಿಸುತ್ತದೆ ಆದ್ದರಿಂದ ಹೀಗೆ ಒತ್ತಡ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ

ಇದಕ್ಕೆ ಮನೆಮದ್ದು ಕರಿಎಳ್ಳು ಈ ಕರಿಎಳ್ಳನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಹಾಕಿ ನೀವು ಕುಡಿಯಬಹುದು ಅಥವಾ ಕರಿಎಳ್ಳನ್ನು ಹುರಿದುಕೊಂಡು ನಂತರ ಕುಟ್ಟಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಕಾಲು ಚಮಚ ಕರಿಎಳ್ಳಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ದಿನಕ್ಕೆ ಎರಡು ಬಾರಿ ಅಥವಾ ಒಂದು ಬಾರಿ ಸೇವಿಸಿದರೆ ಮುಟ್ಟಿನ ದಿನಗಳಲ್ಲಿ ಬರುವ ನೋವುಗಳನ್ನು ನಿವಾರಿಸಬಹುದು. ಕರಿಎಳ್ಳನ್ನು ನಿಮ್ಮ ಆಹಾರ ಕ್ರಮದಲ್ಲಿಯೂ ಕೂಡ ಸೇರಿಸುವುದರಿಂದಲು ಸಹ ಈ ನೋವನ್ನು ಕಡಿಮೆ ಮಾಡಬಹುದು. ಎರಡನೇ ಮನೆಮದ್ದು ಬೆಳ್ಳುಳ್ಳಿ ಮೂರ್ನಾಲ್ಕು ಎಸಳುಗಳಷ್ಟು ಬೆಳ್ಳುಳ್ಳಿಯನ್ನು ಕತ್ತರಿಸಿ ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ಶೋಧಿಸಿ ಕಾಲು ಲೋಟದಷ್ಟು ನೀರನ್ನು ಸೇವಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ಆಗುವ ನೋವನ್ನು ಗುಣ ಪಡಿಸಬಹುದು. ಹಾಗೇನೇ ಈ ಮನೆಮದ್ದುಗಳ ಜೊತೆಗೆ ಹೆಚ್ಚಾಗಿ ಹಸಿರು ತರಕಾರಿಗಳನ್ನು ತಿನ್ನಬೇಕು

ಹಣ್ಣುಗಳನ್ನು ತಿನ್ನಬೇಕು ಹಾಲು ಬಾದಾಮಿಗಳನ್ನು ತಿನ್ನಬಹುದು ಚಹಾ ಮತ್ತು ಕಾಫಿಯನ್ನು ಆದಷ್ಟು ಕಡಿಮೆ ಮಾಡಿ ಜೊತೆಗೆ ಪುದಿನ ಸೊಪ್ಪು ನಿಂಬೆಹಣ್ಣು ಶುಂಠಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿ ಹಾಗೇನೇ ಹೆಚ್ಚು ಮಸಾಲೆಯುಕ್ತ ಎಣ್ಣೆಯುಕ್ತ ಪಧಾರ್ಥಗಳನ್ನು ತಿನ್ನಬೇಡಿ ಈ ಮನೆಮದ್ದುಗಳು ಅಷ್ಟೇ ಅಲ್ಲದೆ ನೀವು ಬಿಸಿನೀರಿನ ಉಷ್ಣತೆಯನ್ನು ಸಹ ತೆಗೆದುಕೊಳ್ಳಬಹುದು ಈದೆಲ್ಲದರ ಜೊತೆಗೆ ಹೀಗೆ ತಿಂಗಳ ಹೊಟ್ಟೆ ನೋವು ಬಂದಾಗ ಕಾಯಿಸದೆ ಇರುವಂತಹದ ಒಂದು ಲೋಟ ಹಸಿ ಹಾಲಿನಲ್ಲಿ ಒಂದು ಚಿಟಿಕೆ ಅರಿಷಿಣ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ಕುಡಿಯಿರಿ ಹೀಗೆ ಮಾಡುವುದರಿಂದಲೂ ಕೂಡ ಹೊಟ್ಟೆ ನೋವು ಕಡಿಮೆಯಾಗುತ್ತದೆ.ಆದ್ದರಿಂದ ನಿಮಗೆ ಇರೀತಿ ಮುಟ್ಟಿನ ನೋವು ಕಂಡಾಗ ಈ ಮನೆಮದ್ದುಗಳನ್ನು ಬಳಸಿ ಜೋತೆಗೆ ನೋವಿನಿಂದ ಮುಕ್ತಿ ಪಡೆಯಿರಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ

Leave a Reply

Your email address will not be published.