ಕೇವಲ ಒಂದು ಬೆಳ್ಳುಳ್ಳಿ ಬಳಸಿ ಕಫ ನಿವಾರಿಸಿ

ಮನೆ ಮದ್ದು

ಚಳಿಗಾಲದಲ್ಲಿ ಮಕ್ಕಳಲ್ಲಿ ಹಾಗೇನೇ ದೊಡ್ಡವರಿಗೆ ಎಲ್ಲರಿಗೂ ಕೂಡ ನೆಗಡಿ ಕಫ ಕೆಮ್ಮು ಹೀಗೆ ಹಲವಾರು ಸಣ್ಣ ಪುಟ್ಟ ಕಾಯಿಲೆಗಳು ಬರುತ್ತವೆ ಆಗ ದೊಡ್ಡವರಿಗೆ ಮಾತ್ರೆ ಕೊಡಬಹುದು ಆದರೆ ಸಣ್ಣವರಿಗೆ ಅಂದರೆ ಸಣ್ಣ ಮಕ್ಕಳಿಗೆ ಮಾತ್ರೆ ಕೊಡಲು ಆಗುವುದಿಲ್ಲ ಮಾತ್ರೆ ಕೊಟ್ಟರು ಸಹ ಬೇಗನೆ ವಾಸಿಯಾಗುವುದಿಲ್ಲ ಆದ್ದರಿಂದ ಮಕ್ಕಳು ತುಂಬಾ ಕಫ ಕಟ್ಟಿ ಬಳಲುತ್ತಿರುತ್ತಾರೆ ಆಗ ಏನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ ಆದ್ದರಿಂದ ಪ್ರಿಯ ವೀಕ್ಷಕರೆ ಇವತ್ತಿನ ಈ ಒಂದು ಲೇಖನದಲ್ಲಿ ಚಳಿಗಾಲದಲ್ಲಿ ಮಕ್ಕಳಿಗೆ ಕಫ ಆದಾಗ ಅದನ್ನು ಹೇಗೆ ನಿವಾರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಒಂದು ಮನೆಮದ್ದು ಅದೇನು ಅಂತ ತಿಳಿಯೋಣ ಬನ್ನಿ. ಮನೆಯಲ್ಲಿ ನಾವು ಅಡುಗೆಗೆ ಬಳಸುವ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಬೇಕು ನಂತರ ಒಂದು ಕೈವಸ್ತ್ರವನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಇರಬೇಕಾದರೆ ಅದನ್ನು ಸುತ್ತಿ ಮಕ್ಕಳ ಎದೆ ಭಾಗದಲ್ಲಿ ಅಂದರೆ

ಕಫ ಕಟ್ಟಿ ಮಕ್ಕಳಿಗೆ ಉಸಿರಾಟದ ತೊಂದರೆ ಆಗಿರುತ್ತದೆಯಲ್ಲ ಅಲ್ಲಿ ಇಡುವುದರಿಂದ ಕಫ ಕರಗುತ್ತದೆ ಅಂದರೆ ಈ ಬಿಸಿ ಮಾಡಿದ ಬೆಳ್ಳುಳ್ಳಿ ಸ್ವಲ್ಪ ಬಿಸಿ ಇರುವಾಗಲೇ ಎದೆಯ ಭಾಗದಲ್ಲಿ ಬಟ್ಟೆಯಲ್ಲಿ ಹಾಕಿ ಇಡಬೇಕು. ಎರಡನೆಯದು ಮನೆಮದ್ದು ಬೆಳ್ಳುಳ್ಳಿ ಎಸಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ ನಂತರ ಸಾಸುವೆ ಎಣ್ಣೆ ತೆಗೆದುಕೊಳ್ಳಿ ಸ್ವಲ್ಪ ಸಾಸುವೆ ಎಣ್ಣೆಯನ್ನು ಪಾತ್ರೆಯಲ್ಲಿ ಬಿಸಿ ಮಾಡಲು ಇಡೀ ಈ ಸಾಸುವೆ ಎಣ್ಣೆಗೆ ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಈ ಸಾಸುವೆ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಬೇಕು ಸಣ್ಣ ಉರಿಯಲ್ಲಿ ಚೆನ್ನಾಗಿ ಬೆಳ್ಳುಳ್ಳಿ ಕಂದು ಬಣ್ಣ ಬರುವವರೆಗೂ ಕುದಿಸಬೇಕು ಹೀಗೆ ಎಣ್ಣೆ ಕುದಿಸಿದ ನಂತರ ಈ ಎಣ್ಣೆಯು ಸಹ ಬಿಸಿ ಇರುವಾಗಲೇ ಎದೆ ಭಾಗಕ್ಕೆ ಹಚ್ಚುವುದರಿಂದಲು ಕೂಡ ನೆಗಡಿ ಅಥವಾ ಕಫ ಕಟ್ಟಿರುವುದು ಕಡಿಮೇ ಆಗುತ್ತದೆ ಜೊತೆಗೆ ಇದನ್ನು ನೀವು ರಾತ್ರಿ ಮಲಗುವ ಸಮಯದಲ್ಲಿ ಹಚ್ಚಬೇಕು

ಇದನ್ನು ಹಚ್ಚಿದಾಗ ಪ್ಯಾನ್ ಎಸಿ ಬಳಸುವುದನ್ನು ಕಡಿಮೆ ಮಾಡಬೇಕು ಇದರಿಂದಲೂ ಕೂಡ ಕಫ ಕಡಿಮೆ ಆಗುತ್ತದೆ. ಮೂರನೇ ಸಲಹೆ ಬೆಳ್ಳುಳ್ಳಿಯನ್ನು ಒಂದು ಎಸಳನ್ನು ತೆಗೆದುಕೊಂಡು ಸರದ ಹಾಗೆ ಅಂದರೆ ದಾರ ತೆಗೆದುಕೊಂಡು ಸೂಜಿಯಲ್ಲಿ ಚುಚ್ಚಿ ದಾರದ ಒಳಗೆ ಹಾಕಬೇಕು ಹೀಗೆ ಬೆಳ್ಳುಳ್ಳಿಯ ಎಸಳನ್ನು ದಾರದಲ್ಲಿ ಸೇರಿಸಿ ಕೊರಳಿಗೆ ಕಟ್ಟುವುದರಿಂದಲು ಕೂಡ ಅಂದರೆ ಬೆಳ್ಳುಳ್ಳಿ ಎದೆ ಭಾಗಕ್ಕೆ ಬರಬೇಕು ಹಾಗೆ ಕಟ್ಟಬೇಕು ಹೀಗೆ ಕಟ್ಟುವುದರಿಂದ ಕೂಡ ಶೀತ ಕಫ ಕಡಿಮೆಯಾಗುತ್ತದೆ. ಆದ್ದರಿಂದ ಸ್ನೇಹಿತರೆ ನಿಮ್ಮ ಮಕ್ಕಳಿಗೆ ಶೀತ ಅಥವಾ ಕಫ ಆದರೆ ಬೆಳ್ಳುಳ್ಳಿಯನ್ನು ಬಳಸಿ ಹೀಗೆ ಮದ್ದುಗಳನ್ನು ಮಾಡಿ ಉಪಯೋಗಿಸಿ ನೋಡಿ. ಈ ಒಂದು ಆರೋಗ್ಯ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ

Leave a Reply

Your email address will not be published.