ಈ ಮನೆಮದ್ದುಗಳನ್ನು ಬಳಸಿ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಿ

ಮನೆ ಮದ್ದು

ಈ ಮನೆಮದ್ದುಗಳನ್ನು ಬಳಸಿ ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಿ. ಯೂರಿಕ್ ಆಸಿಡ್ ಕಾಯಿಲೆ ಕೂಡ ಇಂದು ಹೆಚ್ಚಾಗುತ್ತಿದೆ ಈ ಸಮಸ್ಯೆ ಬಂದ್ರೆ ಮೂಳೆಗಳಲ್ಲಿ ನೋವು ಹೇಚ್ಚು ಕಾಣಿಸುತ್ತದೆ ಹಾಗೆ ಮೂಳೆಸಂದಿಗಳಲ್ಲಿ ನೋವು ಹೇಚ್ಚಾಗುತ್ತದೆ ಹಾಗೇನೇ ಯಾವ ಭಾಗದಲ್ಲಿ ಮೂಳೆಗಳು ಹೆಚ್ಚು ಇರುತ್ತವೆಯೋ ಆ ಭಾಗದಲ್ಲಿ ನೋವು ಹೆಚ್ಚಾಗಿ ಕಾಣುತ್ತದೆ ಈ ಒಂದು ಗೌಟ್ ಸಮಸ್ಯೆ ಏಕೆ ಬರುತ್ತದೆ ಎಂದರೆ ಈ ಗೌಟ್ ಸಮಸ್ಯೆ ಬಂದಿರುವ ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ ಇದು ಹೆಚ್ಚಾದರೆ ಅದರ ಪರಿಣಾಮ ಬೀಳುವುದು ಮೂಳೆಗಳ ಮೇಲೆ ನಮ್ಮ ದೇಹಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚು ಪ್ರೋಟಿನ್ಸ್ ನಮ್ಮ ರಕ್ತದಲ್ಲಿ ಇರುವುದರಿಂದ ಈ ಯೂರಿಕ್ ಆಸಿಡ್ ದೇಹದಲ್ಲಿ ಹೆಚ್ಚಾಗುತ್ತದೆ ಮೊಟ್ಟೆ ಮಾಂಸ ಪನ್ನೀರು ಇವುಗಳಲ್ಲಿ ಪ್ರೋಟಿನ್ಸ್ ಹೆಚ್ಚಿರುತ್ತದೆ ಇದನ್ನು ತಿನ್ನುವುದರಿಂದ ಅದು ಜೀರ್ಣ ಆಗದೇ ಈ ಯೂರಿಕ್ ಆಸಿಡ್ ಆಗುತ್ತದೆ. ಹಾಗಾದರೆ ಈ ಯೂರಿಕ್ ಆಸಿಡನ್ನು ಕಡಿಮೆ ಮಾಡಿಕೊಳ್ಳುವುದು

ಹಿಗೆ ಮೊದಲನೆಯದು ನೀರು ತುಂಬಾ ಕುಡಿಯುವುದರಿಂದ ಅದು ನಮ್ಮ ದೇಹದಲ್ಲಿ ಇರುವ ಕೆಟ್ಟ ಪಧಾರ್ಥಗಳನ್ನು ಹೊರಹಾಕುತ್ತದೆ ಆದ್ದರಿಂದ ನಾವು ದಿನಕ್ಕೆ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು. ಎರಡನೆಯದು ಪ್ರತಿದಿನ ಎರಡು ರೀತಿಯ ತಾಜಾ ಇರುವ ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು ಹಾಗೇನೇ ಫೈಬರ್ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು. ಅದರಲ್ಲಿ ನೀರು ಮತ್ತು ಫೈಬರ್ ಅಂಶ ಹೆಚ್ಚಾಗಿರುವ ಹಣ್ಣುಗಳ ರಸವನ್ನು ಕುಡಿಯಬೇಕು ಇವೆಲ್ಲವು ಯೂರಿಕ್ ಆಸಿಡ್ ನ್ನು ಕಡಿಮೆಗೊಳಿಸಲು ತುಂಬಾ ಸಹಾಯ ಮಾಡುತ್ತವೆ. ಮೂರನೇ ಮನೆಮದ್ದು ಪುದಿನ ಕೊತ್ತಂಬರಿ ಸೊಪ್ಪು ಹಾಗೆ ತುಳಸಿ ದಳ ಈ ಮೂರನ್ನು ಸೇರಿಸಿ ರಸವನ್ನು ತೆಗೆದುಕೊಂಡು ಇದನ್ನು ವಾರದಲ್ಲಿ ಒಂದರಿಂದ ಎರಡು ಬಾರಿ ಕುಡಿದರೆ ತುಂಬಾ ಒಳ್ಳೆಯದು ಹಾಗೇನೇ ಕರಿಬೇವು ನುಗ್ಗೆಸೊಪ್ಪಿನ ನೀರನ್ನು ಸಹ ವಾರದಲ್ಲಿ ಒಂದರಿಂದ ಎರಡು ಬಾರಿ ಕುಡಿಯಿರಿ. ನಾಲ್ಕನೆಯದು ದೇಹಕ್ಕೆ ಹೆಚ್ಚಾಗಿ ಬೆವರು ಬರಬೇಕು ದೇಹ ಹೆಚ್ಚಾಗಿ ಬೆವರುವಂತೆ ಮಾಡಬೇಕು ಹೀಗೆ ಮಾಡುವುದರಿಂದ

ನಮ್ಮ ದೇಹದಲ್ಲಿ ಇರುವ ಅನುಪಯುಕ್ತ ಪಧಾರ್ಥ್ ಹಾಗೂ ರಾಸಾಯನಿಕಗಳನ್ನು ನಮ್ಮ ದೇಹ ಸಹಜವಾಗಿಯೇ ಹೊರ ಹಾಕುತ್ತದೆ ಅಂದರೆ ನೀವು ಹೆಚ್ಚಾಗಿ ಶ್ರಮ ವಹಿಸಿ ದೇಹಕ್ಕೆ ಶ್ರಮ ಕೊಡುವಂತಹ ಕೆಲಸವನ್ನು ಮಾಡಿಸ್ಬೇಕು ಆಗ ನಿಮ್ಮ ದೇಹದಿಂದ ಕೆಟ್ಟ ಕೊಬ್ಬು ನೀರಾಗಿ ಬೆವರಿನ ರೂಪದಲ್ಲಿ ಹೊರ ಬರುತ್ತದೆ ಈಮನೆಮದ್ದುಗಳನ್ನು ಬಳಸಿ ನೀವು ಯೂರಿಕ್ ಆಸಿಡ್ ಸಮಸ್ಯೆಯಿಂದ ಮುಕ್ತರಾಗಬಹುದು ಇದು ನಿಧಾನಕ್ಕೆ ಪರಿಣಾಮ ನೀಡಿದರು ಕೂಡ ಖಂಡಿತ ಒಳ್ಳೆಯ ಪಾಲಿತಾಂಶವೇ ಸಿಗುತ್ತದೆ ಒಂದುವೇಳೆ ಈ ತೊಂದರೆ ಹೆಚ್ಚಾದರೆ ನೀವು ವೈದ್ಯರನ್ನು ಸಂಪರ್ಕಿಸಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೋತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಸಹ ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.