ನಮ್ಮಲ್ಲಿ ಸಹಾಯ ಮಾಡುವ ಗುಣ ಇದ್ದರೆ ದೇವರು ನಮಗೆ ಸಹಾಯ ಮಾಡುತ್ತಾನೆ

ಇತರೆ ಸುದ್ದಿ

ನಮ್ಮಲ್ಲಿ ಸಹಾಯ ಮಾಡುವ ಗುಣ ಇದ್ದರೆ ದೇವರು ನಮಗೆ ಸಹಾಯ ಮಾಡುತ್ತಾನೆ. ಭಗವತ್ ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವುದು ಏನೆಂದರೆ ಉಪಕಾರಕ್ಕೆ ಪ್ರತ್ಯುಪಕಾರವನ್ನು ಬಯಸಬೇಡಿ ಬದಲಾಗಿ ನೀವು ಕಷ್ಟದಲ್ಲಿ ಇದ್ದಾಗ ದೇವರೇ ಯಾವುದಾದರೂ ಒಂದು ರೂಪದಲ್ಲಿ ಬಂದು ಫಲ ನೀಡುತ್ತಾನೆ ಎಂದು ಹೇಳಿದ್ದಾರೆ ಬಡತನ ಎನ್ನುವುದು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ ಬಡತನ ಇದ್ದರು ಸಹ ಅವರಿಗೆ ಒಳ್ಳೆಯ ಮನಸ್ಸು ಇರುವುದನ್ನು ನಾವು ತುಂಬಾ ಕೇಳಿರುತ್ತೇವೆ ಮಂಗೇಶ್ವರ ಎನ್ನುವ ವ್ಯಕ್ತಿ ಅಸಾಮಾನ್ಯರಲ್ಲಿ ಒಬ್ಬ ಕುರಿಗಾಹಿ ಆಗಿರುತ್ತಾನೆ ಪ್ರತಿದಿನದಂತೆ ಇತ ಕುರಿ ಕಾಯಲು ಹೋದಾಗ ಈತನ ಒಂದು ಕುರಿ ಕಾಡಿನ ಕಡೆ ಓಡಿ ಹೋಗುತ್ತದೆ ಈ ಕುರಿಗಾಹಿ ಓಡಿ ಹೋದ ಕುರಿಯನ್ನು ಹಿಂಬಾಲಿಸಿಕೊಂಡು ಕಾಡಿನ ಕಡೆ ಹೋಗುತ್ತಾನೆ ಆಗ ಅಲ್ಲಿ ಆತನಿಗೆ ಒಂದು ಆಶ್ಚರ್ಯವೇ ಕಾದಿತ್ತು ಅದೇನೆಂದರೆ ಓರ್ವ ಹುಡುಗಿಯನ್ನು ಅಪಹರಿಸಿ ಒಂದು ಮರಕ್ಕೆ ಬಿಗಿಯಾಗಿ ಕಟ್ಟಿ ಹಾಕಿದ್ದರು ಅಲ್ಲಿಂದ ಆಕೆಯನ್ನು ಕಾಪಾಡಿ ಮನೆಗೆ ಕರೆದುಕೊಂಡು ಬಂದು ಆಕೆಗೆ ಊಟ ಉಪಚಾರಗಳನ್ನು ಮಾಡಿದನು ನಂತರ ಆತನಿಗೆ ಆ ಹುಡುಗಿ ನಡೆದ ಎಲ್ಲ ವಿಚಾರಗಳನ್ನು ತಿಳಿಸಿದಳು ಆ ಹುಡುಗಿಯ ಹೆಸರು ನಿತು ಸಿಂಗ್ ಮತ್ತು ಆಕೆ ಕಾಲೇಜಿಗೆ ಹೋದಾಗ

ಆಕೆಯ ನಾಲ್ಕು ಜನ ಸ್ನೇಹಿತರೆ ನಂಬಿಸಿ ಈ ರೀತಿ ಅಪಹರಿಸಿದರು ಎಂದು ಹೇಳಿದಳು ನಂತರ ಈ ಹುಡುಗಿಯನ್ನು ಅವರ ಮನೆಗೆ ಒಪ್ಪಿಸಿದರು ಈ ಒಂದು ಘಟನೆ ನಡೆದಿದ್ದು ಆ ಹುಡುಗಿ ಪಿಯುಸಿ ಓದುತ್ತಿದ್ದಾಗ ಅದು ಒಂಬತ್ತು ವರ್ಷಗಳ ಹಿಂದೆ ಮತ್ತೆ ಎಂದಿನಂತೆ ಮಂಗೇಶ್ವರ ಕುರಿ ಮೆಯಿಸಿಕೊಂಡು ಮನೆಗೆ ಬರುತ್ತಾನೆ ಬಂದಾಗ ಮನೆಯ ಹತ್ತಿರ ನಾಲ್ಕು ದೊಡ್ಡ ಸರ್ಕಾರಿ ಕಾರುಗಳು ನಿಂತಿರುತ್ತವೆ ಏನು ಎಂತ ಆತ ವಿಚಾರಿಸಿ ನೋಡಿದಾಗ ಆ ಹುಡುಗಿ ಕಾರಿನಿಂದ ಇಳಿದು ಬಂದು ಆತನ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆಯುತ್ತಾಳೆ. ಆಗ ಹುಡುಗಿ ಆತನಿಗೆ ಕೇಳುತ್ತಾಳೆ ಅಪ್ಪಾಜಿ ನಿಮಗೆ ನಾನು ನೆನಪಿದಿನ 9 ವರ್ಷಗಳ ಹಿಂದೆ ನೀವು ಮಾಡಿದ ಒಂದು ಸಣ್ಣ ಸಹಾಯ ನನ್ನ ಬಾಳನ್ನು ಬೆಳಗಿಸಿತು ಇಂದು ನಾನು ದೊಡ್ಡ ಸರ್ಕಾರಿ ಅಧಿಕಾರಿ ಆಗಿದ್ದೇನೆ ಎಂದು ಹೇಳಿ ಇನ್ನು ಮುಂದೆ ನಿಮ್ಮನ್ನು ಹೀಗೆ ಬಡತನದಲ್ಲಿಯೇ ಬಿಡಲು ನನ್ನಿಂದ ಆಗದು ಎಂದು ಹೇಳಿ ಅವರನ್ನು ಕೂಡಲೇ ತಾನು ಕೆಲಸ ಮಾಡುತ್ತಿದ್ದ ಗುಹಾಟಿಗೆ ಕರೆದುಕೊಂಡು ಹೋಗಿ ಅವರಿಗೆ ಒಂದು ಮನೆ ಕೊಡೋಸಿ ಅವರ ಇಬ್ಬರು ಮಕ್ಕಳನ್ನು ಸಹ ದೊಡ್ಡ ಖಾಸಗಿ ಶಾಲೆಗೆ ಸೇರಿಸಿದಳು ಈಗ ಅವರ ಮಕ್ಕಳಲ್ಲಿ ಒಬ್ಬನು 6 ನೆ ತರಗತಿ ಓದುತ್ತಿದ್ದಾನೆ ಇನ್ನೊಬ್ಬ 8 ನೆ ತರಗತಿ ಓದುತ್ತಿದ್ದಾನೆ

ಅವರಿಗೆ ಜೀವನ ಮಾಡಲು ಒಂದು ಬಟ್ಟೆ ಅಂಗಡಿಯನ್ನು ಕೂಡ ಹಾಕಿ ಕೊಟ್ಟಳು ಮತ್ತು ಇವತ್ತಿಗೂ ಕೂಡ ಆ ಹುಡುಗಿ ವಾರದಲ್ಲಿ ಒಂದು ದಿನ ಮಂಗೇಶ್ವರ ಅವರ ಕುಟುಂಬದ ಜೊತೆ ಕಾಲ ಕಳೆಯುತ್ತಾಳೆ ಆದ್ದರಿಂದ ಸ್ನೇಹಿತರೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದರೆ ದೇವರು ನಮಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂದು ನಾವು ಒಬ್ಬರಿಗೆ ಸಹಾಯ ಮಾಡಿದರೆ ಇವತ್ತಿನ ಕಾಲದಲ್ಲಿ ಅದನ್ನು ಮರೆತು ಜೀವನ ಮಾಡುವವರು ತುಂಬಾ ಜನ ಇದ್ದಾರೆ ಆದರೆ ಇಂತಹ ನಿತು ಸಿಂಗ ನಂತರ ಹೆಣ್ಣು ಮಕ್ಕಳು ಸಹಾಯವನ್ನು ಮರೆಯದೆ ಅದಕ್ಕೆ ಪ್ರತಿಯಾಗಿ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಹೀಗೆ ಅವರಿಗೆ ಸಹಾಯ ಮಾಡಿ ತನ್ನ ಮೇಲಿರುವ ಅವರ ಋಣ ತೀರಿಸುವ ಒಂದು ಪ್ರಯತ್ನವನ್ನು ಮಾಡಿದಳು ಹೀಗೆ ನಾವು ಒಬ್ಬರಿಗೆ ಸಹಾಯ ಮಾಡಿದರೆ ನಮಗೆ ಸಹಾಯ ಮಾಡಲು ದೇವರು ಇನ್ನೊಬ್ಬರನ್ನು ಸೃಷ್ಟಿಸಿರುತ್ತಾನೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಸಹ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಉಪಯುಕ್ತ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published.