ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಆದ್ರೆ ಈ ರೀತಿಯ ಸಮಸ್ಯೆಗಳು ಶುರು ಆಗಲಿದೆ

ಇತರೆ ಸುದ್ದಿ

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಆಗುವ ತೊಂದರೆಗಳು ಮತ್ತು ಅದರ ನಿವಾರಣೆಗೆ ಪರಿಹಾರ. ನಮಸ್ತೆ ಗೆಳೆಯರೆ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ತುಂಬಾ ಅತ್ಯವಶ್ಯಕ ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದದ್ದು ಕ್ಯಾಲ್ಸಿಯಂ ಹಾಗೆ ಮಾಂಸ ಖಂಡಗಳು ನರಗಳ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಹ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ ಕ್ಯಾಲ್ಸಿಯಂ ದೇಹದಲ್ಲಿ 99ರಷ್ಟು ಅಷ್ಟು ಮೂಳೆಗಳಲ್ಲಿ ಮತ್ತು ದಂತಗಳಲ್ಲಿ ಶೇಕರಣೆ ಆಗಿರುತ್ತದೆ ಕ್ಯಾಲ್ಸಿಯಂ ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇದ್ದರೇನೇ ನಮ್ಮ ದೇಹ ನಿರ್ಮಾಣ ಸರಿಯಾಗಿ ಇರುತ್ತದೆ ಕ್ಯಾಲ್ಸಿಯಂ ಇತರೆ ಪೋಷಕಾಂಶಗಳ ಜೊತೆ ಸೇರಿ ನಮ್ಮ ದೇಹದಲ್ಲಿ ಇರುವ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ವಿಸ್ತಾರ ಆಗದಂತೆ ನೋಡಿಕೊಳ್ಳುತ್ತದೆ ಇದರಿಂದ ತೊಂದರೆ ಆಗದಂತೆ ಇರುತ್ತದೆ ಇಂತ ಕ್ಯಾಲ್ಸಿಯಂ ನಮ್ಮ ದೇಹದಲ್ಲಿ ಕಡಿಮೆ ಆಗುವುದರಿಂದ ಕೇವಲ ಮೂಳೆಗಳ ದುರ್ಬಲತೆ ಮಾತ್ರವಲ್ಲದೆ ಸಂಧಿವಾದ ನರಗಳ ನೋವು ಮತ್ತೆ ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹಲ್ಲಿನ ಸಮಸ್ಯೆಗಳು ಇಂತ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರೆತೆ ಆದಾಗ ನಮ್ಮಮೂಳೆಯಲ್ಲಿರುವ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಹೀರಿಕೊಳ್ಳುತ್ತದೆ ಹೀಗೆ ಹಿರಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ಇತರೆ ಬಾಗಗಳಿಗೆ ಬೇಕಾದ ಕ್ಯಾಲ್ಸಿಯಂ ಕೊರತೆ ಉಂಟಾಗುತ್ತದೆ. ಕ್ಯಾಲ್ಸಿಯಂ ಕೊರತೆ 30 ವರ್ಷ ಮೇಲ್ಪಟ್ಟವರಲ್ಲಿ ಬರುತ್ತದೆ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾದಾಗ ಋತುಚಕ್ರದಲ್ಲಿ ಏರುಪೇರು ಆಗುತ್ತದೆ ಹಾಗೆಯೇ ಹಾರ್ಮೋನಗಳಲ್ಲಿ ಸಮಸ್ಯೆಗಳು ಸಹ ಉಂಟಾಗುತ್ತದೆ ದೇಹಕ್ಕೆ ವಿಶ್ರಾಂತಿ ನೀಡುವ ಮೇಲಾಟೋನಿನ್ ಕೊರತೆಯಿಂದ ನಿದ್ರಾಹೀನತೆ ಸಮಸ್ಯೆಗಳು ಕೂಡ ಬರುತ್ತದೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ 9 ರಿಂದ 11 ಎಂ.ಜಿ ಡಿಯಲ್ ನಷ್ಟು ಇರಬೇಕು ಇದಕ್ಕಿಂತ ಕಡಿಮೆ ಆದರೂ ಅಥವಾ ಹೆಚ್ಚಾದರೂ ಅನಾರೋಗ್ಯ ಸಮಸ್ಯೆಗಳು ಬರುತ್ತದೆ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಆದರೆ ಜೋಮು ಹೆಚ್ಚಾಗಿ ಬರುವುದು ಹಸಿವು ಕಡಿಮೆ ಆಗುವು ಒಂದು ವೇಳೆ ಆಹಾರವನ್ನು ಸೇವಿಸಿದರೂ ಅದು ವಾಂತಿ ಆಗುವುದು ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು ಸುಸ್ತಾಗುವುದು ಪದೇ ಪದೇ ಉಗುರು ತುಂಡ ಆಗುತ್ತಿರುವುದು ಸೊಂಟ ನೋವು ಬರುವುದು ಕೀಲು ನೋವು ಮೊಣಕಾಲು ನೋವು ಅನುಭವಿಸಬೇಕಾಗುತ್ತೆ

ಹಾಗೆಯೇ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಇವೆಲ್ಲ ಕ್ಯಾಲ್ಸಿಯಂ ಕೊರತೆ ಲಕ್ಷಣ ವಾಗಿರುತ್ತದೆ. ಕ್ಯಾಲ್ಸಿಯಂ ಕೊರತೆ ನಿವಾರಣೆ ಮಾಡಲು ಏನು ಮಾಡಬೇಕು ಎಂದು ತಿಳಿಯೋಣ ಪ್ರತಿದಿನ ಆಹಾರದಲ್ಲಿ ಹಾಲು ಮೊಸರು ಎಳ್ಳು ಬಾದಾಮಿ ಸೊಪ್ಪು ತರಕಾರಿಗಳನ್ನು ಬೆಂಡೆಕಾಯಿ ಬಿನ್ಸ್ ಖರ್ಜೂರ ಕಿವಿಹಣ್ಣು ರಾಗಿ ಮೀನು ಇವುಗಳನ್ನು ನಾವು ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಇರುವಂತೆ ನೋಡಿಕೊಳ್ಳುವುದರಿಂದ ಕ್ಯಾಲ್ಸಿಯಂ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು.ಕಾಫಿ ಟೀ ಸೇವನೆ ಕಡಿಮೆ ಮಾಡಿಕೊಳ್ಳಬೇಕು ಊಟಮಾಡುವಾಗ ಯಾವ ಆಲೋಚನೆಗಳನ್ನು ಮಾಡದೆ ಪ್ರತಿ ತುತ್ತನ್ನು ಆನಂದಿಸುತ್ತಾ ತಿಂದರೆ ಒಳ್ಳೆಯದು ಏಕೆಂದರೆ ನಾವು ಆಹಾರವನ್ನು ನೋಡುತ್ತಾ ತಿನ್ನುವುದರಿಂದ ಆಹಾರಕ್ಕೆ ತಕ್ಕಂತ ಖುಷಿ ನಮ್ಮ ಮೆದುಳಿಗೆ ಸಿಗುತ್ತದೆ ನಾವು ತಿಂದ ಆಹಾರದಲ್ಲಿನ ಪೋಷಕಾಂಶಗಳು ನಮ್ಮ ದೇಹಕ್ಕೆ ಸರಿಯಾಗಿ ಸೇರಿ ಆರೋಗ್ಯಕರವಾಗಿ ಇರುವಂತೆ ಸಹಾಯ ಮಾಡುತ್ತದೆ.ಈ ಲೇಖನ ನಿಮಗೆ ಇಷ್ಟ ಆದ್ರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

Leave a Reply

Your email address will not be published.