ಅಗರಬತ್ತಿ ವಾಸನೆಯಿಂದ ಶ್ವಾಶಕೋಶ ಕ್ಯಾನ್ಸರ್ ಉಂಟು ಆಗಲಿದೆ

ಉಪಯುಕ್ತ ಸಲಹೆ

ಅಗರಬತ್ತಿ ಅಥವಾ ಉದುಬತ್ತಿ ಹೊಗೆ ಒಂದು ಸಿಗರೆಟ್ ಗಿಂತ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ನಮಸ್ತೆ ಗೆಳೆಯರೆ ಪ್ರತಿಯೊಂದು ಮನೆಯಲ್ಲೂ ಒಂದಲ್ಲ ಒಂದು ಸಂಧರ್ಭದಲ್ಲೂ ಊದುಬತ್ತಿ ಅಂದರೆ ಅಗರಬತ್ತಿಯನ್ನು ಹಚ್ಚುತ್ತೇವೆ ಪೂಜೆ ಆಗಲಿ ಅಥವಾ ಇನ್ನಿತರ ಶುಭಕಾರ್ಯದಲ್ಲಿ ಗಂಧದ ಕಡ್ಡಿ ಇದ್ದೇ ಇರುತ್ತದೆ ಅದರ ಪರಿಮಳ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುವುದರಿಂದ ಯಾರು ಕೂಡ ಅದರ ಹೊಗೆಯ ಬಗ್ಗೆ ತಲೆ ಕೆಡಸಿಕೊಳ್ಳುವುದಿಲ್ಲ ಆದರೆ ಅದೇ ಅಗಬತ್ತಿ ಹೊಗೆಯಿಂದ ನಮ್ಮ ಆರೋಗ್ಯಕ್ಕೆ ತೊಂದರೆ ಆಗುತ್ತದೆ ಅಂದರೆ ನಂಬಲೇಬೇಕು ಅಗರಬತ್ತಿ ಹೊಗೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಗರಬತ್ತಿಯಲ್ಲಿ ಇರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್ ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡಬಲ್ಲದು ಅಗರಬತ್ತಿ ಹೊಗೆಯಿಂದ ಏನೆಲ್ಲಾ ತೊಂದರೆ ಉಂಟಾಗುತ್ತದೆ ಎಂದು ಈ ಲೇಖನದಲ್ಲಿ ನೋಡೋಣ. ಹೃದಯಘಾತದ ಅಪಾಯ ಉದುಬತ್ತಿ ಹೊಗೆಯು ನಿರಂತರ ಉಸಿರಾಟ ಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ ಅಲ್ಲದೆ ಹೃದಯ ಜೀವಕೋಶದ ಮೇಲೆ ವ್ಯತಿರಿಕ್ತವಾದ

ಪರಿಣಾಮವನ್ನು ಬೀರುತ್ತದೆ ಇದರಿಂದ ಜೀವಕೋಶದ ಶಕ್ತಿ ಕುಗ್ಗುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣುಗಳಿಗೆ ಹಾನಿಕಾರಕ ಇದರ ಹೊಗೆಯಲ್ಲಿ ಕಂಡುಬರುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು ಅಗರಬತ್ತಿ ಹೊಗೆಯಿಂದ ಶ್ವಾಸಕೋಶದ ತೊಂದರೆ ಮತ್ತು ಕ್ಯಾನ್ಸರ್ ಆಗುತ್ತದೆ ಇದರ ಹೊಗೆ ಕಾರ್ಬನ್ ಮೊನಾಕ್ಸೆಡ್ ಆನು ಬಿಡುಗಡೆ ಮಾಡುತ್ತದೆ ಇದು ಶ್ವಾಸಕೋಶದ ಮೇಲೆ ಹಾನಿಯನ್ನು ಉಂಟು ಮಾಡುತ್ತದೆ ಇದರಿಂದ ಶೀತ ಕೆಮ್ಮಿನ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ ಊದುಬತ್ತಿಯ ಹೊಗೆಯನ್ನು ಉಸಿರಾಡುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಸಂಭವಿಸುವ ಸಾಧ್ಯತೆ ಇದೆ ಅದರಲ್ಲೂ ದೂಮಪಾನಿಯಗಳಿಗೆ ಊದುಬತ್ತಿ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಸ್ತಮಾದ ತೊಂದರೆ ಅಗರಬತ್ತಿಯಲ್ಲಿ ನೈಟ್ರೋಜನ್ ಮತ್ತು ಸಲ್ಪರ ಡೈಆಕ್ಸೈಡ್ ಕಂಡುಬರುತ್ತದೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಹೊಗೆಯಿಂದ ಅಸ್ತಮಾದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ ಅಗರಬತ್ತಿಯನ್ನು ನಾವು ಪ್ರತಿದಿನ

ಬಳಸುತ್ತೇವೆ ಅದಕ್ಕೆ ಬಳಸುವ ಮುನ್ನ ಈ ಮುನ್ನೆಚ್ಚರಿಕೆಯನ್ನು ಬಳಸಿದರೆ ಸಾಕು ಹೆಚ್ಚಿನ ಸಂಖ್ಯೆಯಲ್ಲಿ ಗಂಧದ ಕಡ್ಡಿಯನ್ನು ಹಚ್ಚಬೇಡಿ ಊದುಬತ್ತಿಯನ್ನು ಹಚ್ಚುವಾಗ ಮನೆಯಬಾಗಿಲು ಹಾಗೂ ಕಿಡಕಿಯನ್ನು ತೆರೆಯಿರಿ ಕೆಲವು ಯಾವುದೇ ರೀತಿಯ ಕೆಮಿಕಲ್ ಇಲ್ಲದ ಅಗರಬತ್ತಿ ಆನ್ ಲೈನ್ ನಲ್ಲಿ ದೊರೆಯುತ್ತವೆ ಅದನ್ನು ಬೇಕಿದ್ರು ಬಳಸಿ ಊದುಬತ್ತಿಯನ್ನು ಬಳಸುವಾಗ ಈ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಾಗೆಯೇ ಸಿಕ್ಕ ಸಿಕ್ಕ ಉದು ಕಡ್ಡಿ ಬಳಕೆ ಮಾಡಲು ಹೋಗಬೇಡಿ ಉತ್ತಮ ಬೆಲೆಯ ಒಳ್ಳೆಯ ಐ ಎಸ್ ಓ ಮುದ್ರತೆ ಹೊಂದಿರೋ ಉದುಬತ್ತಿ ಬಳಕೆ ಮಾಡುವುದು ತುಂಬಾ ಒಳ್ಳೆಯದು. ಮಕ್ಕಳು ಮತ್ತು ಹಿರಿಯ ಜನರು ವಾಸ ಇರೋ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಸಹ ಉದು ಬತ್ತಿ ಹಚ್ಚದೇ ಇರುವುದು ತುಂಬಾ ಒಳ್ಳೆಯದು. ಈ ಒಂದು ಉಪಯುಕ್ತ ಮಾಹಿತಿ ಮರೆಯದೆ ಶೇರ್ ಮಾಡಿರಿ ಖಂಡಿತ ನಿಮ್ಮ ಎಲ್ಲ ಸ್ನೇಹಿತರಿಗೂ ಸಹ ಒಳ್ಳೆಯದು ಆಗಲಿದೆ.

Leave a Reply

Your email address will not be published.