ಈ ಸಮಸ್ಯೆಗಳು ಇದ್ದವರು ಶುಂಠಿ ಎಂದಿಗೂ ಸಹ ಸೇವನೆ ಮಾಡಬೇಡಿ

ಮನೆ ಮದ್ದು

ಶೀತ ಕೆಮ್ಮು ನೆಗಡಿ ಮತ್ತು ಕಫ ಮುಂತಾದ ಸಮಸ್ಯೆಗಳಿಗೆ ಅದ್ಭುತವಾದ ಮನೆಮದ್ದು ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮನೆಯಲ್ಲಿ ಅಗ್ಗವಾಗಿ ಲಭ್ಯವಿರುವ ಸುಲಭವಾದ ಮನೆಮದ್ದುಗಳಲ್ಲಿ ಶೀತ ಕೆಮ್ಮು ನೆಗಡಿ ಮತ್ತು ಕಫ ನಿವಾರಣೆ ಮಾಡುವಲ್ಲಿ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಲೇಖನದಲ್ಲಿ ಶುಂಠಿಯನ್ನು ಯಾಕೆ ಸೇವಿಸಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಶುಂಠಿ ಆರೋಗ್ಯಕ್ಕೆ ಎಷ್ಟು ಉತ್ತಮ ಅಷ್ಟೇ ಹೆಚ್ಚಾಗಿ ಬಳಸಿದರೆ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಏಕೆಂದರೆ ಶುಂಠಿ ಎಲ್ಲರಿಗೂ ಆಗಿ ಬರುವುದಿಲ್ಲ. ಕೆಲವರು ಕೆಲವೊಂದು ಸಾರೀ ತಮ್ಮ ದೇಹಕ್ಕೆ ಅನುಗುಣವಾಗಿ ಆಹಾರವನ್ನು ಸೇವನೆ ಮಾಡ ಬೇಕಾಗುತ್ತದೆ. ಹಾಗೆಯೇ ಶುಂಠಿ ಯಾರಿಗೆ ಒಳ್ಳೆಯದು ಮತ್ತು ಯಾರಿಗೆ ಹಾನಿ ಎಂಬುದರ ಬಗ್ಗೆ ಈ ಲೇಖನದಲ್ಲಿ ಪೂರ್ತಿಯಾಗಿ ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ಕೊನೆವರೆಗೂ ಓದಿ. ಮೊದಲನೆಯದಾಗಿ ವ್ಯಕ್ತಿಯ ದೇಹವು ಉಷ್ಣತೆಯಿಂದ ಕೂಡಿದ್ದರೆ ಮತ್ತು ಆ ವ್ಯಕ್ತಿ ಬೆವರುತ್ತಿದ್ದರೇ ಶುಂಠಿಯನ್ನು

ಸೇವಿಸಬಾರದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಶುಂಠಿಯನ್ನು ಸೇವಿಸಿದರೆ ದೇಹದಲ್ಲಿ ಮತ್ತಷ್ಟು ಉಷ್ಣತೆಯ ಪ್ರಮಾಣ ಹೆಚ್ಚಾಗುತ್ತದೆ. ದೇಹದಲ್ಲಿ ಉಷ್ಣತೆ ಪ್ರಮಾಣ ಹೆಚ್ಚಾಗುವುದರಿಂದ ಹಲವಾರು ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ಅದರಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣ ಹೆಚ್ಚಾದರೆ ಮೂಗಿನಲ್ಲಿ ರಕ್ತಸ್ರಾವ ಆಗುತ್ತದೆ. ಹಾಗಾಗಿ ಶುಂಠಿಯನ್ನು ದೂರ ಮಾಡುವುದು ಒಳ್ಳೆಯದು. ಮತ್ತು ಶುಂಠಿ ಚಹಾವನ್ನು ಸೇವನೆ ಮಾಡುತ್ತಿದ್ದರೆ ಅದನ್ನು ಮಿತವಾಗಿ ಬಳಸಬೇಕು. ಅಗತ್ಯವಾಗಿ ಬಳಸಬೇಕು ಮಿತಿ ಮೀರಿ ಬಳಸಬಾರದು. ಶುಂಠಿ ಟೀ ಅನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ದೇಹದ ಜೀರ್ಣಾಂಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜಠರದಲ್ಲಿ ಸಮಸ್ಯೆಗಳು ಕಾಣುತ್ತವೆ. ಹಾಗೂ ಎದೆ ಉರಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಬಾಯಿ ತುರಿಕೆ ಕೂಡ ಕಂಡು ಬರುತ್ತದೆ. ಶುಂಠಿಯನ್ನು ಅಧಿಕವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಅಸಿಡಿಟಿ ಹೆಚ್ಚಾಗುತ್ತದೆ. ಅಸಿಡಿಟಿ ಸಮಸ್ಯೆ ಇದ್ದವರು ಶುಂಠಿಯನ್ನು ಕಡ್ಡಾಯವಾಗಿ ತ್ಯಜಿಸಬೇಕು. ಮತ್ತು ಹೊಟ್ಟೆಗೆ ಸಂಭಂದಿಸಿದ

ಕಾಯಿಲೆಗಳು ಕಾಣಿಸಿಕೊಂಡರೆ ಶುಂಠಿ ಚಹಾವನ್ನೂ ಸೇವನೆ ಮಾಡಬಾರದು. ಮತ್ತು ಶುಂಠಿಯು ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಮಧುಮೇಹ ರೋಗಿಗಳು ಇದನ್ನು ಸೇವನೆ ಮಾಡಬಾರದು. ಶುಂಠಿಯನ್ನು ಅಧಿಕವಾಗಿ ಸೇವನೆ ಮಾಡುವುದರಿಂದ ಎದೆಯುರಿ, ಅತಿಸಾರ, ಉರಿಯೂತವನ್ನು ಉಂಟು ಮಾಡುತ್ತದೆ. ಇಂತಹ ಉತ್ಪನ್ನವು ದೇಹದಲ್ಲಿ ಕಲ್ಲುಗಳನ್ನು ಸೃಷ್ಟಿಸುತ್ತದೆ. ಮತ್ತು ಇದರ ಬಳಕೆಯಿಂದ ಕಣ್ಣಿನ ದೃಷ್ಟಿ ಕ್ಷೀಣಿಸುತ್ತದೆ. ಹೃದಯ ಲಯ ಸಮಸ್ಯೆ, ಒತ್ತಡದ ಸಮಸ್ಯೆಗಳು, ಲಹರಿಯ ಬದಲಾವಣೆಗಳು ಮತ್ತು ನಿದ್ರೆಯ ಸಮಸ್ಯೆಗಳು ಮತ್ತು ಚರ್ಮಕ್ಕೆ ಸಂಭಂದಿಸಿದ ಕಾಯಿಲೆಗಳು ಬರಲು ಪ್ರಾರಂಭವಾಗುತ್ತದೆ. ಮತ್ತು ಶುಂಠಿ ಒಂದು ದೇಹದಲ್ಲಿ ಉಷ್ಣ ಉತ್ಪಾದನೆ ಮಾಡುವ ಒಂದು ಮಸಾಲೆ ಪದಾರ್ಥ ಆಗಿದೆ. ಇದು ಆರೋಗ್ಯಕ್ಕೆ ಒಳ್ಳೆಯದು ಆದರೆ ಅದನ್ನು ನಿಯಮಿತವಾಗಿ ಬಳಸಬೇಕು. ಇದರಲ್ಲಿ ಔಷಧಿಗಳ ಗುಣಗಳು ಕೂಡ ಅಡಗಿದೆ. ಆದರೆ ಇದನ್ನು ಅಗತ್ಯಗಿಂತ ಹೆಚ್ಚಾಗಿ ಬಳಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶುಂಠಿಯನ್ನು ನಿಯಮಿತವಾಗಿ ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ.

Leave a Reply

Your email address will not be published.