ಈ ಹೂವಿನ ಕಷಾಯದಿಂದ ಹೊಟ್ಟೆ ನೋವು ಮತ್ತು ಚರ್ಮ ರೋಗಗಳಿಗೆ ಸಾಕಷ್ಟು ಒಳ್ಳೆಯದು ಆಗಲಿದೆ

ಮನೆ ಮದ್ದು

ಈ ಗಿಡದಿಂದ ಕ್ರೀಕೆಟ್ ಉಪಕರಣಗಳನ್ನು ಸೌಂದರ್ಯ ವರ್ಧಕಗಳನ್ನು ತಯಾರಿಸಲಾಗುತ್ತದೆ. ನಾಗಲಿಂಗ ಋಕ್ಷ ಭಾರತೀಯ ಪರಂಪರೆಯಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನ ಹೊಂದಿರುವ ವೃಕ್ಷ ತನ್ನ ಸುಂದರವಾದ ಹಾಗೂ ಸುಗಂಧ ಭರಿತವಾದ ಹೂವುಗಳಿಂದ ಎಂಥವರನ್ನು ಸಹ ಮಂತ್ರ ಮುಗ್ಧಗೊಳಿಸುವ ಅಂತಹ ವೃಕ್ಷ ಲೆತಿ ಸಿಡೆಸಿಯೆ ಕುಟುಂಬಕ್ಕೆ ಸೇರಿದ ನಾಗಲಿಂಗ ವೃಕ್ಷದ ವೈಜ್ಞಾನಿಕ ಹೆಸರು ಕೋರುಪಿಟ ಸಂಸ್ಕೃತದಲ್ಲಿ ನಾಗಲಿಂಗ ತರು ಎನ್ನುವ ವೃಕ್ಷವನ್ನು ಕನ್ನಡದಲ್ಲಿ ನಾಗಲಿಂಗ ವೃಕ್ಷ ಹಾಗೂ ಲಿಂಗದ ಮರ ಎಂದರೆ ಆಂಗ್ಲ ಭಾಷೆಯಲ್ಲಿ ಜನಾನ್ ವಾಲ್ ಟ್ರಿ ಎನ್ನಲಾಗುತ್ತದೆ ವೃಕ್ಷದ ಮೂಲ ದಕ್ಷಿಣ ಅಮೇರಿಕಾದ ಉಷ್ಣ ವಲಯದ ಕಾಡುಗಳಾಗಿದ್ದು ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ರಾಷ್ಟ್ರಗಳು ಬ್ರೆಜಿಲ್ ಪೆರು ಕೊಲಂಬಿಯಾ ಗಯಾನ ಮುಂತಾದ ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಉಷ್ಣ ವಾಸಿ ವೃಕ್ಷವಾಗಿರುವ ನಾಗಲಿಂಗ ವೃಕ್ಷ ಸುಮಾರು 120 ಅಡಿ ಎತ್ತರಕ್ಕೆ ಬೆಳೆಯಬಲ್ಲ ನಿತ್ಯ ಹರಿದ್ವರ್ಣ ವೃಕ್ಷವಾಗಿದ್ದು ಮಾಸಲು ಬಿಳಿ ಹಾಗೂ ಕಂದು ಬಣ್ಣದ ಕಾಂಡವಿದ್ದು ಕಾಂಡದ ಸುತ್ತಳತೆ ಸುಮಾರು 14 ಅಡಿಗಳಷ್ಟು ಇರುತ್ತದೆ ಸುಮಾರು ಎಂಟು ಸೆಂಟಿಮೀಟರ್ ಅಗಲ ಹಾಗೂ 1 ಅಡಿ ಉದ್ದವಾದ ಶಂಕಾಕಾರದ ಹಸಿರು ಎಲೆಗಳು ಸಂಯುಕ್ತ ಮಾದರಿಯಲ್ಲಿ ಜೋಡಣೆ ಕೊಂಡಿರುತ್ತವೆ ನಾಗಲಿಂಗ ವೃಕ್ಷದ

ವಿಶೇಷತೆಯೆ ಮರದ ಹೂವುಗಳು ಹಲವಾರು ಋಕ್ಷ ಹಾಗೂ ಸಸ್ಯಗಳಲ್ಲಿ ಹೂವಾದರೆ ಈ ವೃಕ್ಷದಲ್ಲಿ ಕಾಂಡದಲ್ಲಿ ಹೂವುಗಳ ಆಗುತ್ತದೆ ಕಾಂಡದಿಂದ ಹೊರಹೊಮ್ಮಿದ ಗೋಧಿ ಬಣ್ಣದ ಬಳ್ಳಿಯಂತಹ ನೀಳವಾದ ತೋಟ್ಟುಗಳಲ್ಲಿ ಹಸಿರು ಬಣ್ಣದ ಗೋಲಿ ಅಂತಹ ಮೊಗ್ಗುಗಳಾಗಿ ಮಾಸಲು ಹಳದಿ ಬಣ್ಣಕ್ಕೆ ತಿರುಗಿ ಅರಳಿದ ಬಳಿಕ ಕೆಂಪುಬಣ್ಣದ 6 ದಳಗಳಿಂದ ಕೂಡಿದ ನಾಗರ ಹೆಡೆಯಂತೆ ಬಾಗಿದ ಹಲವಾರು ಕೇಸರಕುಗಳ ಕೂಡಿದ ಸುವಾಸನೆ ಭರಿತವಾದ ಹೂಗಳಿರುತ್ತವೆ ಸಹಜವಾಗಿ ಈ ಹೂಗಳು ಮುಂಜಾವಿನಲ್ಲಿ ಅರಳಿ ಸಂಜೆಯೊಳಗೆ ಬಿದ್ದು ಹೋಗುತ್ತವೆ ಈ ಹೂಗಳು ನೋಡಲು ಶಿವಲಿಂಗದ ಮೇಲೆ ನಾಗರ ಹಾವಿನ ಹೆಡೆ ಇರುವಂತೆ ಕಾಣುತ್ತದೆ ಆದ್ದರಿಂದ ಈ ಹೂವನ್ನು ನಾಗಲಿಂಗಪುಷ್ಪ ಎನ್ನಲಾಗಿದೆ. ಆಕರ್ಷಕವಾದ ಬಣ್ಣ ಹಾಗೂ ಅದ್ಭುತವಾದ ಸುವಾಸನೆಯಿಂದ ಕೂಡಿದ ಈ ಪುಷ್ಪಗಳ ಸುತ್ತ ದುಂಬಿಗಳ ಝೇಂಕಾರ ಇರುತ್ತದೆ ಸುಮಾರು 30 ರಿಂದ 50 ಸೆಂಟಿಮೀಟರ್ ವ್ಯಾಸದ ದುಂಡಾದ ಗೋಧಿ ಬಣ್ಣ ಹಾಗೂ ಮಾಸಲು ಕಂದು ಬಣ್ಣದ ಚುಕ್ಕೆಗಳಿಂದ ಕೂಡಿದ ಕಾಯಿಗಳು ಕಾಂಡಗಳಲ್ಲಿ ಕಂಡುಬರುತ್ತವೆ ಗ್ಲೈಕೋ ಸೈಡ್ಸ್ ಸಿಗ್ಮಾ ಸ್ಟಿರಾಯ್ಡ್ ಅಮಿನೋ ಆಸಿಡ್ ಫ್ಲೇವನಾಯ್ಡ್ ಕಾರ್ಬೋ ಹೈಡ್ರೇಟ್ ಪ್ರೊಟೀನ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ನಾಗಲಿಂಗ ವೃಕ್ಷದಲ್ಲಿ

ಆಂಟಿ ಬ್ಯಾಕ್ಟೀರಿಯಲ್ ಆಂಟಿ ಫಂಗಲ್ ಎಂಟಿ ಆಕ್ಸಿಡೆಂಟ್ ಆಂಟಿ ಕ್ಯಾನ್ಸರ್ ಮುಂತಾದ ಗುಣಗಳಿದ್ದು ವೃಕ್ಷದ ಉತ್ಪನ್ನಗಳನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲಾಗುತ್ತದೆ ಸಾಮಾನ್ಯವಾಗಿ ಶಿವ ದೇವಾಲಯಗಳು ಕೆಲವೊಂದು ಬೌದ್ಧ ದೇವಾಲಯಗಳ ಬಳಿಯು ಸಹ ಕಂಡುಬರುವ ನಾಗಲಿಂಗ ವೃಕ್ಷದ ಇವುಗಳಿಗೆ ಬೇಡಿಕೆ ಹಾಗೂ ಪೂಜನೀಯ ಭಾವನೆಗಳಿದ್ದವು ವೃಕ್ಷ ವನ್ನು ತೋಟ ಹೊಲ ಹಾಗೂ ಮನೆಗಳ ಪಕ್ಕದಲ್ಲಿ ಬೆಳೆಯಬಾರದು ಎಂಬ ನಂಬಿಕೆಯಿಂದ ವೃಕ್ಷ ಅವನತಿಯ ಹಾದಿಯಲ್ಲಿದೆ ಪೂಜಿಸಲು ನಾಗಲಿಂಗ ವೃಕ್ಷದ ಹೂವುಗಳು ಶ್ರೇಷ್ಠ ಎನ್ನುವ ಜನರು ವೃಕ್ಷವನ್ನು ಬೆಳೆಸಿದರೆ ಒಳಿತಾಗುವುದಿಲ್ಲ ಎನ್ನುವುದು ಮೂರ್ಖತನವಾಗಿದೆ ಇದರ ಉತ್ಪನ್ನಗಳಿಂದ ಅಧಿಕ ರಕ್ತದೊತ್ತಡ ಹೊಟ್ಟೆನೋವು ಚರ್ಮರೋಗ ಹಲ್ಲು ನೋವು ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಇದರ ಹೂವಿನ ಕಷಾಯ ಹಾಗೂ ಎಲೆಗಳ ಚಹಾವನ್ನು ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ ಈ ಮರದಿಂದ ಆಟಿಕೆಗಳು ಕ್ರಿಕೆಟ್ ಉಪಕರಣಗಳು ಬ್ಲಾಕ್ಬೋರ್ಡ್ ಹಾಗೂ ಫೈಬರ್ ರ್ಬೋರ್ಡ್ ಗಳ ತಯಾರಿಕೆಗೆ ಬಳಸಲಾಗುತ್ತದೆ ವೃಕ್ಷದ ಹಣ್ಣುಗಳನ್ನು ತಿನ್ನಬಹುದಾಗಿದ್ದರೆ ಈ ಹಣ್ಣುಗಳು ಅಹಿತಕರವಾದ ವಾಸನೆಯಿಂದ ಕೂಡಿರುವುದರಿಂದ ಸಹಜವಾಗಿ ತಿನ್ನುವುದಿಲ್ಲ ನಾಗಲಿಂಗ ಪುಷ್ಪಗಳನ್ನು ಸುಗಂಧದ್ರವ್ಯ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

Leave a Reply

Your email address will not be published.