ಕೂದಲಿನ ಎಲ್ಲ ಸಮಸ್ಯೆಗಳು ಒಂದೇ ವಾರದಲ್ಲಿ ನಿವಾರಣೆ ಆಗಲಿದೆ

ಮನೆ ಮದ್ದು

ಕೂದಲಿನ ಸೌಂದರ್ಯಕ್ಕೆ ಮತ್ತು ಕೋಮಲತೆಗೆ ಅಂಟುವಾಳ ಕಾಯಿ ಮನೆಮದ್ದು. ಹಿಂದೆ ಈ ಕಾಯಿಯಿಂದ ಬೆಳ್ಳಿಯ ಆಭರಣಗಳನ್ನು ಬಟ್ಟೆಗಳನ್ನು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತಿತ್ತು. ಔಷಧೀಯ ಉತ್ಪನ್ನಗಳಲ್ಲಿ ಬಹಳ ಬೇಡಿಕೆಯೂ ಕೂಡ ಇತ್ತು. ವಿಶೇಷವಾಗಿ ಸೌಂದರ್ಯ ವರ್ಧಕಗಳಲ್ಲಿ ಮತ್ತು ಕೂದಲಿನ ಸಮಸ್ಯೆ ಇದ್ದವರು ಇದನ್ನು ಮುಖ್ಯವಾಗಿ ಬಳಸುತ್ತಿದ್ದರು. ಈ ಕಾಯಿ ಯಾವುದೆಂದರೆ ಅಂಟುವಾಳ ಕಾಯಿ ಅಥವಾ ಅಂಟಲ್ ಕಾಯಿ. ಅಂಟುವಾಳ ಕಾಯಿ ಮೂಲತಃ ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣದಲ್ಲಿ ಕಾಣಬಹುದಾದ ವೃಕ್ಷವಾಗಿದೆ. ಮತ್ತು ಇದು ಮಲೆನಾಡಿನಲ್ಲಿ ಹೆಚ್ಚಾಗಿ ಕಾಣಿಕೊಳ್ಳುವ ಮತ್ತು ಬಳಕೆ ಮಾಡುವ ಮರವಾಗಿದೆ. ಇದು ಸುಮಾರು ಹತ್ತರಿಂದ ಹನ್ನೆರಡು ಮೀಟರ್ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರವಾಗಿದೆ. ಇದು ಫೆಬ್ರುವರಿ ಹಾಗೂ ಮೇ ತಿಂಗಳಲ್ಲಿ ಅಂಟಲ್ ಕಾಯಿಯನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಈ ಕಾಯಿಗಳು ಒಣಗಿದ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹಾಗೂ ಗಟ್ಟಿಯಾಗಿರುತ್ತವೆ. ಈ ಅಂಟುವಾಳದ ಕಾಯಿಗಳು ನೋಡಲು ದ್ರಾಕ್ಷಿ ಹಣ್ಣಿನ ರೂಪದಲ್ಲಿ ಇರುತ್ತದೆ. ಈ ಹಣ್ಣುಗಳಲ್ಲಿ ನೊರೆಯಂತಹ ಅಂಶ ಇರುತ್ತದೆ. ಆದ್ದರಿಂದ ಇದನ್ನು ಮೊದಲಿನ ಕಾಲದ  ಜನರು ಆದಿಮಾನವರು ಚಿನ್ನ, ಬೆಳ್ಳಿ ಮುಂತಾದ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು ಈ ಅಂಟುವಾಳವನ್ನು ಬಳಕೆ ಮಾಡುತ್ತಿದ್ದರು. ಆಧುನಿಕತೆ ತಿರುವು ಕೊಟ್ಟಾಗ ಅಂಟುವಾಳ ಜಾಗಕ್ಕೆ ಡಿಟರ್ಜೆಂಟ್

ಗಳು ಬಂದು ನಿಂತವು. ಇವು ಎಲ್ಲವೂ ರಾಸಾಯನಿಕವಾಗಿ ತಯಾರು ಮಾಡಿರುವ ವಸ್ತುಗಳಾಗಿರುತ್ತವೆ. ಆದ್ದರಿಂದ ಅಂಟುವಾಳ ಬಳಕೆ ತುಂಬಾ ಉತ್ತಮ. ಇನ್ನು ಈ ಮರದ ಉಪಯೋಗಗಳು ನೋಡುವುದಾದರೆ, ಈ ಗಿಡದ ಕಾಯಿಗಳು ಒಣಗಿದ ಮೇಲೆ, ಅದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಂಡು ಶಾಂಪೂವಿನಂತೆ ತಲೆ ಕೂದಲಿಗೆ ಹಚ್ಚಿ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಹಾಗೂ ಕೂದಲು ಕೋಮಲವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇನ್ನು ತಲೆಯಲ್ಲಿ ಹೇನು ಸೀರು ಹೊಟ್ಟು ಇದ್ದರೆ ಈ ಕಾಯಿಯನ್ನು ತೇದು ವಿನೆಗರ್ ನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಯಲ್ಲಿ ಇರುವ ಹೇನು ಸೀರೂ ನಾಶವಾಗುತ್ತದೆ. ಅಂಟುವಾಳ ಪುಡಿಯನ್ನು ಮುಖ ತೊಳೆಯುವ ಮತ್ತು ಕೈ ತೊಳೆಯುವ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇನ್ನು ಚೇಳು ಜರಿ ಯಾವುದೇ ಇನ್ನಿತರ ವಿಷಕಾರಿ ಕೀಟಗಳು ಕಡಿದಾಗ ಅಂಟುವಾಳ ಕಾಯಿಯನ್ನು ಅರೆದು ಅದರ ಗಂಧವನ್ನು ಗಾಯದ ಮೇಲೆ ಲೇಪಿಸಿದರೆ ನೋವು ಬೇಗನೆ ಶಮನವಾಗುತ್ತದೆ. ಹಾಗೂ ವಿಷದ ಪ್ರಭಾವ ಮತ್ತು ಉರಿಊತ ಇಳಿಮುಖವಾಗುತ್ತದೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಶಾಂಪೂಗಳು ಲಭ್ಯವಿದೆ. ಆದರೆ ರಾಸಾಯನಿಕ

ಭರಿತವಾದ ವಸ್ತುಗಳನ್ನು ಬಳಸುವುದರಿಂದ ನಿಮ್ಮ ಕೂದಲಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ವಿಷಯ ನಿಮಗೂ ಗೊತ್ತಿರುವ ಸಂಗತಿ ಆಗಿದೆ. ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವವಂತಹ ವಸ್ತುಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಮತ್ತು ಪ್ರಕೃತಿಯಲ್ಲಿ ದೊರೆಯುವಂತಹ ವಸ್ತುಗಳನ್ನು ಬಳಸುವುದರಿಂದ ಕೊಂಚ ನಿಧಾನವಾದರು ಕೂಡಾ ಉತ್ತಮ ಹಾಗೂ ಸುರಕ್ಷಿತ ಆರೈಕೆಯನ್ನು ಪಡೆಯಬಹುದು. ಈ ವೃಕ್ಷದಿಂದ ಗಂಭೀರವಾದ ಅಡ್ಡ ಪರಿಣಾಮಗಳು ಇಲ್ಲದೆ ಇದ್ದರೂ ಕೂಡ ಈ ಕಾಯಿಗಳ ನೊರೆ ಅಥವಾ ರಸ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸಬೇಕು. ಮತ್ತು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಇದನ್ನು ಬಳಸಲೇಬಾರದು. ಈ ಅಂಟುವಾಳಕಾಯಿ ಕರ್ನಾಟಕದ ಎಲ್ಲಾ ಆಯುರ್ವೇದ ಔಷಧಿಯ ಅಂಗಡಿಗಳಲ್ಲಿ ಹಾಗೂ ಗ್ರಂಥಿ ಅಂಗಡಿಗಳಲ್ಲಿ ಸಿಗುತ್ತದೆ. ಅಥವಾ ನೀವು ಅಮೆಜಾನ್ ನಲ್ಲಿಯೂ ಕೂಡ ನೀವು ಪಡೆಯಬಹುದು. ಕೂದಲಿನ ಅಂದವನ್ನು ಹೆಚ್ಚಿಸಲು ಇಷ್ಟ ಪಡುವವರು ಇದನ್ನು ಒಂದು ಬಾರಿ ಪ್ರಯತ್ನಿಸಿ. ಕೊಳ್ಳೆಗಾಲದ ಮಹಾ ಮಾಂತ್ರಿಕರು ಮತ್ತು ಪಂಡಿತರು ಆಗಿರುವ ರಾಘವನ್ ಶಾಸ್ತ್ರಿಗಳು ನಿಮ್ಮ ಎಲ್ಲ ರೀತಿಯ ಸಂಕಷ್ಟಗಳಿಗೆ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಹಾಗೆಯೇ ನಿರುದ್ಯೋಗ ಸಮಸ್ಯೆಗಳು ಅಥವ ವಿವಾಹ ದೋಷಗಳು ಅಥವ ಅತ್ತೆ ಸೊಸೆ ಜಗಳ ಅಥವ ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published.