ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಸುಲಭವಾದ ಮಾರ್ಗಗಳು

ಮನೆ ಮದ್ದು

ನಮಸ್ತೆ ಗೆಳೆಯರೇ, ಇಂದಿನ ಲೇಖನದಲ್ಲಿ ವೀರ್ಯಾಣುಗಳ ವೃದ್ಧಿಗೆ ಸಂಭಂದಪಟ್ಟ ಕೆಲವೊಂದಿಷ್ಟು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ. ನಿಮಗೆ ಯಾವುದು ಅನುಕೂಲವಾಗುತ್ತದೆಯೋ ಆ ಮನೆಮದ್ದು ನೀವು ಬಳಕೆ ಮಾಡಿಕೊಳ್ಳಬಹುದು. ಮದುವೆ ಬಳಿಕ ಎಲ್ಲ ದಂಪತಿಗಳಿಗೂ ಮಕ್ಕಳನ್ನು ಹೆತ್ತು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಇಚ್ಛೆ ಇರುತ್ತದೆ. ಇದಕ್ಕೆ ಗಂಡ ಮತ್ತು ಹೆಂಡತಿ ಇಬ್ಬರೂ ದೈಹಿಕವಾಗಿ ಸದೃಢವಾಗಿರಬೇಕು. ಕೆಲವು ದಂಪತಿಗಳು ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಾಗುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಇದರಿಂದ ಅವರು ತುಂಬಾ ನೊಂದು ಕೊಳ್ಳುತ್ತಾರೆ. ಮತ್ತು ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕೂಡ ಬರುವ ಸಾಧ್ಯತೆ ಇರುತ್ತದೆ. ಮಗುವನ್ನು ಒಂಬತ್ತು ತಿಂಗಳು ಹೆತ್ತುಹೊತ್ತು ಮಗುವಿಗಾಗಿ ಸಿದ್ಧತೆಯನ್ನು ಮಾಡಿಕೊಳ್ಳುವವರು ಹೆಂಗಸರೇ ಆಗಿರಬಹುದು. ಆದರೆ ತಂದೆ ಆಗಲು ಇಷ್ಟ ಪಡುವವರು ಕೂಡ ಮಗುವನ್ನು ಪಡೆಯಲು ಅಷ್ಟೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಅಂದರೆ ಅವರ ವೀರ್ಯಾಣುಗಳ ಗುಣ ಮಟ್ಟವನ್ನು ಅವರು ಕಾಪಾಡಿಕೊಳ್ಳಬೇಕು. ಹೀಗೆ ಮಾತ್ರ ಮಾಡಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಹಾಗಾದರೆ ಪುರುಷರು ವೀರ್ಯಾಣುಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಏನೆಲ್ಲಾ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದರೆ ಕೇವಲ ಮೂವತ್ತೈದು ದಿನಗಳಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಯಾವುದೇ ಹಣ ವ್ಯರ್ಥವಾಗದೆ ವೀರ್ಯಾಣುಗಳನ್ನು ಹೆಚ್ಚಿಸಿಕೊಳ್ಳಬಹುದು. ಒಂದು ಸಂಶೋಧನೆಯ ಪ್ರಕಾರ ವೀರ್ಯಾಣುಗಳ ವೃದ್ಧಿಗೆ ಯೋಗ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅಂತೆ. ಹೌದು ಈ ಸಂಶೋಧನೆಯಲ್ಲಿ

ಆರು ತಿಂಗಳು ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುತ್ತಿರುವವರನ್ನು 200 ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಯೋಗ ಅಭ್ಯಾಸ ಪ್ರಾರಂಭಿಸಿದ 21 ದಿನಗಳಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಿ ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಿರುವುದನ್ನು ಪರೀಕ್ಷೆಯಿಂದ ಸಾಬೀತು ಪಡಿಸಿದೆ. ಮಾನಸಿಕ ಒತ್ತಡದ ಕಾರಣದಿಂದಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತವೆ. ಇದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುವುದಿಲ್ಲ. ಇವೆಲ್ಲ ಕಾರಣಗಳಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಜೀವನ ಶೈಲಿಯಲ್ಲಿ ಉತ್ತಮವಾದ ಬದಲಾವಣೆ ಮಾಡಿಕೊಳ್ಳುವುದರಿಂದ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ ಪುರುಷರಲ್ಲಿ ಕಾಣಿಸಿಕೊಳ್ಳುವ ಬಂಜೆತನದ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ. ಮತ್ತು ಈ ಯೋಗ ಅಭ್ಯಾಸದಲ್ಲಿ ಕೆಂಗಲ್ ವ್ಯಾಯಾಮ ಎನ್ನುವುದು ಬರುತ್ತದೆ. ಇದು ವಿಶ್ವದಲ್ಲಿ ಪ್ರಸಿದ್ಧವಾದ ವ್ಯಾಯಾಮವಾಗಿದೆ. ಹೌದು ವಿಶ್ವದಲ್ಲಿ ಶೀಘ್ರ ಸ್ಪಲ್ಲನವನ್ನು ತಡೆಯಲು ಈ ವ್ಯಾಯಾಮ ಮಾಡುತ್ತಾರೆ. ಈ ಕೆಂಗಲ್ ವ್ಯಾಯಾಮ ಮಾಡುವ ಉದ್ದೇಶ ವೇನೆಂದರೆ ಲೈಂ ಗಿಕ ಕ್ರಿಯೆಗೆ ಸಹಾಯ ಆಗಲೆಂದು ಈ ವ್ಯಾಯಾಮವನ್ನು ಮಾಡುತ್ತಾರೆ. ಇದು ನಮ್ಮ ಕರುಳು ಬಳ್ಳಿ ಮೂತ್ರಕೋಶಗಳನ್ನು ಬಲಗೊಳಿಸುವುದರ ಜೊತೆಗೆ ಲೈಂ ಗಿಕ ಅಂಗಗಳನ್ನು ಬಲಗೊಳಿಸುತ್ತದೆ. ಈ ಯೋಗ ಅಭ್ಯಾಸ ಮತ್ತು ವ್ಯಾಯಾಮ ಮಾಡುವುದರ ಜೊತೆಗೆ ನೀವು ನಿಯಮಿತವಾಗಿ ಕೆಲವೊಂದಿಷ್ಟು ಆಹಾರವನ್ನು ಪ್ರತಿನಿತ್ಯ ಸೇವನೆ ಮಾಡಬೇಕು.

ಅವುಗಳೆಂದರೆ ಬಾಳೆಹಣ್ಣು ಪಾಲಕ್ ಸೊಪ್ಪು ಟೊಮೆಟೊ ಹಣ್ಣು ಬೆಣ್ಣೆ ಹಣ್ಣು ಮತ್ತು ಬೆಣ್ಣೆ ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ ಬಿ6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆ ಹಣ್ಣಿನ ಪೌಷ್ಟಿಕಾಂಶಗಳು ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿ ಮಾಡುತ್ತದೆ. ಹಾಗೂ ಲೈಂ ಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಈರುಳ್ಳಿಯನ್ನು ಕೂಡ ನಿಯಮಿತವಾಗಿ ಸೇವನೆ ಮಾಡಬೇಕು. ಈರುಳ್ಳಿ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿಗೆ ಸುಲಭವಾದ ಮನೆಮದ್ದುಗಳಲ್ಲಿ ಒಂದಾಗಿದೆ. ಮತ್ತು ಸಪೋಟಾ ಹಣ್ಣುಗಳನ್ನು ಸೇವಿಸುವುದರಿಂದ ವೀರ್ಯಾಣುಗಳು ಉತ್ಪತ್ತಿಯಾಗುತ್ತವೆ. ಹಾಗೂ ಮೊಸರಿಗೆ ಹಾಗೂ ಮಜ್ಜಿಗೆಗೆ ಉಪ್ಪು ಸೇರಿಸಿ ಕುಡಿದರೆ ಅಜೀರ್ಣ ಮಾತ್ರ ನಿವಾರಣೆಯಾಗುವುದಲ್ಲದೆ, ಇದರಿಂದ ಲೈಂ ಗಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಮತ್ತು ಏಲಕ್ಕಿ ಪುರುಷರಲ್ಲಿ ಲೈಂ ಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಸಿಲಿಯೋಲ್ ಎಂಬ ಪೌಷ್ಟಿಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಬಾದಾಮಿ ಲೈಂ ಗಿಕ ಆರೋಗ್ಯಕ್ಕೆ ಮತ್ತು ಸಂತಾನೋತ್ಪತ್ತಿಗೆ ಹೆಚ್ಚು ಸಹಾಯಕವಾಗಿದೆ. ಆಹಾರದ ಜೊತೆಗೆ ಧೂಮಪಾನ ಮತ್ತು ಮದ್ಯಪಾನ ತ್ಯಜಿಸಬೇಕು. ಒತ್ತಡದಿಂದ ಮುಕ್ತಿ ಪಡೆದಿರಬೇಕು. ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಚೆನ್ನಾಗಿ ತಿನ್ನುವುದು ಉಣ್ಣುವುದು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು.

Leave a Reply

Your email address will not be published.