ಕೊನೆಗೂ ಗೃಹಲಕ್ಷ್ಮಿ ಯೋಜನೆ ಅರ್ಜಿ ಬಿಡುಗಡೆ ಮಹಿಳೆಯರಿಗೆ ಎರಡು ಸಾವಿರ.

66

ನಮಸ್ಕಾರ ಪ್ರಿಯ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಗೆ 2,000 ವನ್ನು ಕಾಂಗ್ರೆಸ್ ಸರ್ಕಾರ ನೀಡಲು ಮುಂದಾಗಿದೆ. ಜುಲೈ 14ನೇ ತಾರೀಖಿಯಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಅನೇಕ ರೀತಿಯ ನಿಯಮಗಳನ್ನ ಜಾರಿಗೆ ತಂದಿದೆ.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹತ್ತರಿಂದ ಹದಿನೈದು ಜನ ಮಹಿಳೆಯರನ್ನ ಗುರುತಿಸಿ ಅವರಿಗೆ ಸಾಂಕೇತಿಕವಾಗಿ ಹಣವನ್ನ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಈ ರೀತಿಯ ಕ್ರಮವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯು ಕೈಗೊಂಡಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಒಂದು ಆಪ್ ಅನ್ನ ಕೈಗೊಂಡಿದೆ ಅದನ್ನ ಜಾರಿಗೆ ತರುವ ಮೂಲಕ ಈ ಸೌಲಭ್ಯವನ್ನು ಎಲ್ಲಾ ಮಹಿಳೆಯರು ಪಡೆಯಲು ಮುಂದಾಗುತ್ತಾರೆ. ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿಂತೆ ಪ್ರತ್ಯೇಕವಾಗಿ ಒಂದು ಆಪ್ ಬಿಡುಗಡೆಯಾಗುತ್ತದೆ.

ಸ್ವತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಸರ್ವರ್ ಗಳ ಸಮಸ್ಯೆಗಳ ಸಂಪೂರ್ಣವಾಗಿ ಕಡಿತಗೊಳಿಸುವ ಸಲುವಾಗಿ ಈ ರೀತಿಯ ಕ್ರಮವನ್ನು ಸರ್ಕಾರವು ಜಾರಿಗೆ ತಂದಿದೆ.

ಈ ಆಪ್ ಯನ ಜಾರಿಗೆ ತಂದಿದ್ದಾರೆ ಆದರೆ ಅಧಿಕೃತವಾಗಿ ಘೋಷಣೆ ನಡೆಸಿಲ್ಲ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಗಳನ್ನು ಮಾಡಲಾಗುತ್ತದೆ. ಗೂಗಲ್ ಪ್ಲೇ ಸ್ಟೋರ್ ಗಳಲ್ಲಿ ಈ ಆಪ್ ಅನ್ನು ನೀವು ಬಳಕೆ ಮಾಡಬಹುದು. ಸೇನಾ ಸಿಂಧುವಿನ ಮೂಲಕವೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದು.

ಬಿಪಿಎಲ್ ಕಾರ್ಡ್ ಅಥವಾ ನೀವು ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಅದರಲ್ಲಿ ಮನೆ ಒಡತಿಯ ಹೆಸರು ಮತ್ತು ಫೋಟೋಗಳು ಇರಲೇಬೇಕು. ಮನೆಯಲ್ಲಿ ಒಬ್ಬರಿಗೆ ಮಾತ್ರ ಈ ಅನ್ವಯ. ಯಜಮನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಇಲ್ಲಿ ಬಳಸಲಾಗುತ್ತದೆ.

ಒಡತಿಯ ಆಧಾರ್ ಕಾರ್ಡ್ ಗಳಲ್ಲಿ ಫೋನ್ ನಂಬರ್ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಪಾಸ್ ಬುಕ್ ಗಳಿಗೂ ಕೂಡ ಮೊಬೈಲ್ ನಂಬರ್ ಲಿಂಕ್ ಆಗಿರುವಂತೆ ನೋಡಿಕೊಳ್ಳಬೇಕು. ಇವರ ಗಂಡ ಯಾವುದೇ ರೀತಿಯ ಜಿ ಎಸ್ ಟಿ ಅಥವಾ ತೆರಿಗೆ ಪಾವತಿ ಮಾಡಿದ್ದರೆ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಗೃಹಜ್ಯೋತಿಗೆ ಸಂಬಂಧಿಸಿದಂತೆ ಜನರು ಏಕಕಾಲದಲ್ಲಿ ಅರ್ಜಿಯನ್ನು ಸಲ್ಲಿಸಲು ಮುಂದಾಗಿದ್ದಾರೆ. ಗೃಹ ಲಕ್ಷ್ಮಿಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾದರೆ ಆಪ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಕೂಡಲೇ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here