ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರ ಜಾರಿಗೆ ತಂದಂತಹ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡ ತುಂಬಾ ಪ್ರಮುಖವಾದ ದಾಖಲೆಯಾಗಿದೆ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಇದು ಬಡತನ ರೇಖೆಗಿಂತ ಕೆಳಗಿರುವವರಿಗೆ ತುಂಬಾ ಅನುಕೂಲವನ್ನು ನೀಡುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿರುವವರು ಸರ್ಕಾರದ ಅನೇಕ ಯೋಜನೆಗಳ ಪಡೆದುಕೊಳ್ಳುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವಂಥ ಜನರಿಗೆ ಬಿಪಿಎಲ್ ಕಾರ್ಡ್ ಗಳನ್ನು ನೀಡಲಾಗಿದೆ.
ಅಧಿಕಾರಿಗಳು ಕಂಡುಹಿಡಿದ ಮಾಹಿತಿಗಳ ಪ್ರಕಾರ ಬಡತನದ ರೇಖೆಗಿಂತ ಕೆಳಗಿರುವವರಿಗೆ ಈ ಕಾರ್ಡ್ ಗಳನ್ನ ನೀಡಲಾಗಿದೆ ಆದರೆ ಬಡತನಕ್ಕಿಂತ ಮೇಲೆ ಇರುವವರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಇಟ್ಟುಕೊಂಡು ಅನೇಕ ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಗಳಿಗಾಗಿ ಪ್ರತೀ ತಿಂಗಳು ಕೂಡ ಸಾವಿರರು ಕೋಟಿ ರೂಪಾಯಿ ಹಣವನ್ನು ಕೂಡ ಖರ್ಚು ಮಾಡುತ್ತಾ ಇದೆ.
ಇವುಗಳನ್ನ ಜಾರಿಗೆ ತರುತ್ತಿರುವುದು ಸರ್ಕಾರ ಪ್ರಮುಖ ಉದ್ದೇಶವೇ ಬಡತನ ರೇಖೆಗಿಂತ ಕೆಳಗಿರುವವರು ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದೆ.
ಅನರ್ಹ ಬಿಪಿಎಲ್ ಕಾರ್ಡ್ ಗಳನ್ನ ಹೊಂದಿದ್ದರೆ ಅಂತಹ ಬಿಪಿಎಲ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎನ್ನುವುದಾಗಿ ಸರ್ಕಾರ ತೀರ್ಮಾನವನ್ನ ತೆಗೆದುಕೊಂಡಿದೆ.
ಅನಗತ್ಯ ದಾಖಲೆಗಳನ್ನು ನೀಡಿ ನೀವೇನಾದರೂ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಮಾಡಿಸಿಕೊಂಡಿದ್ದೆ ಆದರೆ ನಿಮಗೆ ಇದರಿಂದ ತೊಂದರೆಗಳು ಬರುವ ಸಾಧ್ಯತೆ ಇದೆ ಆದ್ದರಿಂದ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನೀವೇ ರದ್ದು ಪಡಿಸಿಕೊಳ್ಳುವುದು ತುಂಬಾ ಉತ್ತಮ, ಇಲ್ಲವಾದರೆ ನಿಮಗೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಯಾರೆಲ್ಲಾ ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ ಅಂತಹ ರೇಷನ್ ಕಾರ್ಡ್ಗಳನ್ನ ಅಧಿಕಾರಿಗಳೇ ಗುರುತಿಸಿ ಅಂತಹ ರೇಷನ್ ಕಾರ್ಡ್ಗಳನ್ನ ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತದೆ.
ಇದನ್ನು ಸಹ ಓದಿ:
ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್
ಇಸ್ರೇಲ್ ಕೃಷಿ ಪದ್ಧತಿ ಮಾಡಿ ಹೆಚ್ಚಿನ ಲಾಭ ಪಡೆಯಿರಿ
ಇಸ್ರೇಲ್ ಕೃಷಿ ಪದ್ಧತಿ ಮಾಡಿ ಹೆಚ್ಚಿನ ಲಾಭ ಪಡೆಯಿರಿ
ದರ್ಶನ್ ಬಗ್ಗೆ ಖ್ಯಾತ ಸ್ವಾಮೀಜಿ ಭವಿಷ್ಯ ನುಡಿದ್ದಿದ್ದಾರೆ
SCDCC ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಈ ಕ್ರಮವನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರವು ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸಲು ಮುಂದಾಗಿದೆ.
ಯಾವೆಲ್ಲ ಜಿಲ್ಲೆಗಳು ಎಂದರೆ ಬೆಂಗಳೂರು ನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೊಡಗು, ಕೋಲಾರ, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ ಈ ಭಾಗಗಳಲ್ಲಿ ಮೊದಲು ಯಾರು ಅರ್ಹರು ಅಲ್ಲದೆ ಇರುವವರು ಬಿಪಿ ಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೆ ಅಂತವರ ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂಬುದಾಗಿ ತಿಳಿಸಲಾಗಿದೆ.
ಆದರಿಂದ ಯಾರೆಲ್ಲಾ ಬಡತನ ರೇಖೆಗಿಂತ ಮೇಲೆ ಇದ್ದೀರಿ ಅಂತವರ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಕೂಡ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂಬುದಾಗಿ ತಿಳಿಸಲಾಗಿದೆ. ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ನಿರ್ಧಾರ.