ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ ಪೌತಿ ಖಾತೆ ಮಾಡಿಕೊಳ್ಳುವುದು ಹೇಗೆ.

102

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನನ್ನ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಲೇಬೇಕು. ಪೌತಿ ಖಾತೆಯನ್ನು ನೀವು ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ಆಸ್ತಿ ಇದ್ದರೂ ಇಲ್ಲದಿದ್ದರೂ ಕೂಡ ಅದನ್ನ ಏನು ಮಾಡಲು ಸಾಧ್ಯವಿಲ್ಲ.

ಪೌತಿ ಖಾತೆ ಎಂದರೇನು? ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನ ತಿಳಿಯೋಣ. ಪೌತಿ ಖಾತೆ ಬದಲಾವಣೆ ಮಾಡದೆ ಇದ್ದರೆ ಆಸ್ತಿ ಇರುವವರಿಗೆ ಯಾವ ರೀತಿ ತೊಂದರೆ ಆಗುತ್ತದೆ ಎಂಬುದನ್ನ ತಿಳಿಯೋಣ.

ಪೌತಿ ಖಾತೆ ಎಂದರೇನು ಆಸ್ತಿಯ ಮಾಲಿಕ ಏನಾದರೂ ಮರಣ ಹೊಂದಿದರೆ, ಅವನ ಎಲ್ಲಾ ಆಸ್ತಿಯೂ ಅವನ ವಾರಸದಾರರಿಗೆ ಬದಲಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ. ವಾರಸುದಾರ ಎಂದರೆ ಅವರ ಮಗಳು ಮಗ ಅಥವಾ ಹೆಂಡತಿ ಆಗಿರುತ್ತಾರೆ.

ಪೌತಿ ಖಾತೆ ಮಾಡಿಸಬೇಕಾದರೆ ಯಾವೆಲ್ಲ ದಾಖಲೆಗಳು ಬೇಕು ಎಂದರೆ, ಆಧಾರ್ ಕಾರ್ಡ್ ಅಥವಾ ಮತದಾನದ ಗುರುತಿನ ಚೀಟಿ. ಪಾನ್ ಕಾರ್ಡ್ ಅಥವಾ ರೇಷನ್ ಕಾರ್ಡ್, ಮರಣ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ.

ವಂಶಾವಳಿಯ ಪ್ರಮಾಣ ಪತ್ರ ಘೋಷಣೆಯ ಪತ್ರ ಒಪ್ಪಿಗೆ ಪತ್ರ, ಪೌತಿ ಖಾತೆ ಅರ್ಜಿ ಹಾಗೂ ಜಮೀನಿನ ಪಹಣಿ. ಪೌತಿ ಖಾತೆ ತಾಲೂಕು ಕಚೇರಿಯಲ್ಲಿ ಈ ಜಮೀನಿಗೆ ಸಂಬಂಧಪಟ್ಟ ಖಾತೆಯನ್ನು ನೀವು ಮಾಡಿಸಿಕೊಳ್ಳಬೇಕು.

ಕಚೇರಿಯಲ್ಲಿ ಹಂತ ಹಂತವಾಗಿ ಮಾಹಿತಿ ಹೇಗೆ ರವಾನೆ ಆಗುತ್ತದೆ ಎಂಬುದನ್ನು ತಿಳಿಯೋಣ. ನೀವು ಸಲ್ಲಿಸಿರುವ ಅಂತ ಅರ್ಜಿಯು ಭೂಮಿ ಕೇಂದ್ರದಲ್ಲಿ ಮೊದಲು ಪರಿಶೀಲನೆ ಆಗುತ್ತದೆ.

ಬಂದಿರುವ ಅರ್ಜಿಯು ಮತ್ತು ಜಮೀನಿಗೆ ಸಂಬಂಧಪಟ್ಟಂತ ದಾಖಲೆಗಳು ಒಂದಕ್ಕೊಂದು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡುತ್ತಾರೆ.

ನಮೋನೆ ಯಲ್ಲಿ 12 ಮತ್ತು 21ರ ಪ್ರಕಾರ ಸರಿಯಾಗಿದ್ದರೆ ಗ್ರಾಮ ಲೆಕ್ಕಾಧಿಕಾರಿ ಅಥವಾ ವಿಲೇಜ್ ಅಕೌಂಟೆಂಟ್ ಗಳಿಗೆ ಇದನ್ನ ಜಾರಿಗೆ ಉಳಿಸಲು ಹೇಳುತ್ತಾರೆ.

30 ದಿನದ ಒಳಗೆ ಯಾವುದೇ ರೀತಿ ತಕರಾರು ಬಾರದೆ ಇದ್ದರೆ, ಕಂದಾಯ ಅಧಿಕಾರಿಗಳು ಅವರು ಜಾರಿಗೆ ತರುತ್ತಾರೆ. ಕಂದಾಯ ಅಧಿಕಾರಿಗಳು ಜಾರಿಗೆ ತಂದ ನಂತರ ನಿಮ್ಮ ಜಮೀನಿನ ಪೌತಿ ಖಾತೆ ಬದಲಾವಣೆಯಾಗುತ್ತದೆ

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here