ಡಿಸೆಂಬರ್ ತಿಂಗಳ ಒಳಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ.
ನಮಸ್ಕಾರ ಪ್ರಿಯ ಸ್ನೇಹಿತರೇ,ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಹುದ್ದೆಗಳು ಖಾಲಿ ಇವೆ. ಅಂಗನವಾಡಿ ಕಾರ್ಯಕರ್ತರು 4,180 ಹುದ್ದೆಗಳು ಖಾಲಿ ಇವೆ, ಸಹಾಯಕ ಹುದ್ದೆಗಳು ಒಂಬತ್ತು ಸಾವಿರದ 411 ಹುದ್ದೆಗಳು ಖಾಲಿ ಇವೆ.
ಡಿಸೆಂಬರ್ ತಿಂಗಳು ಮುಗಿಯುವುದರ ಒಳಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಸೂಚನೆ ಹೊರಡಿಸಿದ್ದಾರೆ.
ನಗರ ಪ್ರದೇಶದಲ್ಲಿ ಸಹಾಯಕಿಯರ ಹುದ್ದೆಗೆ ಗೌರವ ಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯನವರು ಸೂಚನೆ ಹೊರಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಂಪೂರ್ಣವಾಗಿ ಚರ್ಚೆ ಕೂಡ ನಡೆಸಲಾಗಿದೆ. ಬಾಲ ತಾಯಂದಿರ ಪ್ರಕರಣದಲ್ಲಿ ದೂರುಗಳು ಬಂದಾಗ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಿಎಂ ಅವರು ಕೆಲವೊಂದು ಪ್ರಸ್ತಾವನೆಯನ್ನು ಇಟ್ಟಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 500 ಸ್ಥಳಗಳನ್ನ ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎರಡು ಸಾವಿರ ಶಾಲೆಗಳನ್ನ ನಿರ್ಮಿಸಲು ಯೋಜನೆಯ ರೂಪಿಸಲಾಗಿದೆ. ಪ್ರಮುಖ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆಯಲು ಸೂಚನೆ ನೀಡಿದ್ದೇವೆ ಎಂದರು.
ಶಾಲೆಯಿಂದ ಯಾವ ಮಕ್ಕಳು ಹೊರಗೆ ಉಳಿಯಬಾರದು. ಪ್ರತಿವರ್ಷ ಆರರಿಂದ 12 ವರ್ಷದೊಳಗಿನ ಮಕ್ಕಳ ಸಮೀಕ್ಷೆಯನ್ನು ನಡೆಸಿ ಶಾಲೆಯಿಂದ ಹೊರಗೂಳಿದ ಮಕ್ಕಳನ್ನ ಶಾಲೆಗೆ ಮತ್ತೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟನ್ನು ಈ ಸರ್ಕಾರ ಕ್ರಮ ಒಳಗೊಂಡಿದೆ.
ಈಗಾಗಲೇ ಅನೇಕ ರೀತಿಯ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಹುದ್ದೆಗಳು ಖಾಲಿ ಇದೆ. ಎಲ್ಲಾ ಜಿಲ್ಲೆಗಳಲ್ಲೂ ಕೂಡ ಖಾಲಿ ಇರುವುದರಿಂದ ಗಮನದಲ್ಲಿ ಇಟ್ಟುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಬೇಕು ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ಸೂಚನೆಯನ್ನು ಹೊರಡಿಸಿದ್ದಾರೆ.
ಇದನ್ನು ಸಹ ಓದಿ:
ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್
ಇಸ್ರೇಲ್ ಕೃಷಿ ಪದ್ಧತಿ ಮಾಡಿ ಹೆಚ್ಚಿನ ಲಾಭ ಪಡೆಯಿರಿ
ಇಸ್ರೇಲ್ ಕೃಷಿ ಪದ್ಧತಿ ಮಾಡಿ ಹೆಚ್ಚಿನ ಲಾಭ ಪಡೆಯಿರಿ
ದರ್ಶನ್ ಬಗ್ಗೆ ಖ್ಯಾತ ಸ್ವಾಮೀಜಿ ಭವಿಷ್ಯ ನುಡಿದ್ದಿದ್ದಾರೆ
SCDCC ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಯಾವ ಯಾವ ಜಿಲ್ಲೆಗಳಲ್ಲಿ ಖಾಲಿ ಇದೆ ಎಲ್ಲವನ್ನ ಕೂಡ ಗಮನಿಸಿ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ. ಯಾವುದೇ ಶಾಲೆಗಳನ್ನು ನಿರ್ಮಾಣ ಮಾಡಬೇಕು ಎಂದರೆ ಸಿ ಎಸ್ ಆರ್ ನೆರವನ್ನ ಪಡೆದುಕೊಳ್ಳಲೇಬೇಕು ಎಂಬುದನ್ನ ಮಹತ್ವವಾಗಿ ಜಾರಿಗೆ ತರಲಾಗಿದೆ.
ಮುಂದಿನ ದಿನಗಳಲ್ಲಿ ಅಂಗನವಾಡಿಯಲ್ಲಿ ಎಲ್‌ಕೆಜಿ ಯುಕೆಜಿಯನ್ನ ಕೂಡ ಆರಂಭ ಮಾಡುವುದಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಅದರ ಆಧಾರದ ಮೇಲೆ ಎಲ್ಲರಿಗೂ ಕೂಡ ಅನುಕೂಲ ಎಂಬುದು ಉಂಟಾಗುತ್ತದೆ.
ಆದರಿಂದ ಸರ್ಕಾರ ಅಂಗನವಾಡಿ ಸಹಾಯಕರು ಮತ್ತು ಕಾರ್ಯಕರ್ತರ ಹುದ್ದೆಗಳಿಗೆ ನೇಮಕಾತಿಯನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಭರ್ತಿ ಮಾಡಲಾಗುತ್ತದೆ ಎಂಬುದಾಗಿ ಸಿಎಂ ಸಿದ್ದರಾಮಯ್ಯನವರು ಸಂಪೂರ್ಣವಾಗಿ ತಿಳಿಸಿದ್ದಾರೆ.