ಒಂದು ದೇಶ ಒಂದು ಚುನಾವಣೆ ಯೋಜನೆ ಇದನ್ನ ವಿರೋಧ ಮಾಡ್ತಾ ಇರೋ ಕಾಂಗ್ರೆಸ್

70

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ದೇಶದಲ್ಲಿ ವರ್ಷಪೂರ್ತಿ ಚುನಾವಣೆಗಳು ನಡೆಯುತ್ತವೆ ಎನ್ನುವ ಆಪೇಕ್ಷಗಳು ಕೇಳುತ್ತಾ ಬರುತ್ತದೆ. ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆ ಏಕಕಾಲಕ್ಕೆ ನಡೆಸಬೇಕೆಂದು ಕೇಂದ್ರ ಸರ್ಕಾರದವರು ತೀರ್ಮಾನ ತಗೆದುಕೊಂಡಿದೆ.

ಒಂದು ರಾಷ್ಟ್ರ ಒಂದು ಚುನಾವಣೆ ಪರಿಕಲ್ಪನೆಯನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಮಾಜಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ವಿಶೇಷವಾದ ಸಮಿತಿಯನ್ನ ರಚನೆ ಮಾಡಿದ್ದಾರೆ. ವಿಶೇಷವಾಗಿ ಸಮಿತಿಯ ಸದಸ್ಯರ ಬಗ್ಗೆ ಶೀಘ್ರವಾಗಿ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸುತ್ತದೆ.

ಈ ಚುನಾವಣೆ ಕಲ್ಪನೆಯ ಬಗ್ಗೆ ಜನರ ಅಭಿಪ್ರಾಯ ಏನು ಪಕ್ಷಗಳ ನಿಲುವು ಏನು ಎಲ್ಲದರ ಬಗ್ಗೆ ಸಮಿತಿಯು ಚರ್ಚೆಯನ್ನ ನಡೆಸುತ್ತದೆ. ಒಂದು ರಾಷ್ಟ್ರ ಒಂದು ಚುನಾವಣೆ ಎನ್ನುವುದು ಭಾರತಕ್ಕೆ ಇದೇನು ಹೊಸತಲ್ಲ 1952-1967 ವರೆಗೆ ಭಾರತದಲ್ಲಿ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಮತದಾನಗಳು ನಡೆದವು.

ನಾಲ್ಕು ರೀತಿಯ ಚುನಾವಣೆಗಳು ಇದೇ ರೀತಿ ನಡೆದಿದ್ದವು. 1968-69 ರಲ್ಲಿ ಕೆಲವು ರಾಜ್ಯಗಳ ವಿಧಾನಸಭೆ ಅಕಾಲಿಕವಾಗಿ ವಿಸರ್ಜಿಸಲ್ಪಟ್ಟ ನಂತರ ಈ ಪದ್ಧತಿ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮಧ್ಯಪ್ರದೇಶ ರಾಜಸ್ಥಾನ, ಛತ್ತೀಸ್ಗಡ್, ತೆಲಂಗಾಣ ಮತ್ತು ಬಿಹಾರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು.

ಮುಂದಿನ ವರ್ಷ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ. ಕೇಂದ್ರ ಸರ್ಕಾರ ಇಂತಹ ನಿಲುವನ್ನ ಕೈಗೊಂಡಿದೆ. ಒಂದು ದೇಶ ಒಂದು ಚುನಾವಣೆ ಎರಡು ಬಾರಿ ಚುನಾವಣೆ ಮಾಡಿದ್ರೆ ಸಮಯ ಮತ್ತು ಹಣ ವ್ಯರ್ಥವಾಗುತ್ತದೆ, 2019ರ ಲೋಕಸಭೆ ಚುನಾವಣೆಗೆ 60 ಕೋಟಿ ರೂಪಾಯಿ ಖರ್ಚಾಗಿದೆ,

ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ವೆಚ್ಚವನ್ನ ಒಳಗೊಂಡಿದೆ, ರಾಜ್ಯಗಳ ಚುನಾವಣೆಗೆ ಸರ್ಕಾರಕ್ಕೆ 250 ರಿಂದ 500 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆಗಾಗ ನಡೆಯುವ ಮತದಾನದಿಂದ ನೀತಿ ಸಂಹಿತೆ ಜಾರಿ ಪರಿಣಾಮ ತಟ್ಟುತ್ತದೆ.

ಅಭಿವೃದ್ಧಿ ಕಾರ್ಯಗಳ ಮೇಲೆ ಹೇರುವ ನೀತಿ ಸಮಿತಿಯಲ್ಲಿ ಹಿನ್ನಡೆಯಾಗುತ್ತದೆ. ಆಡಳಿತಾತ್ಮಕ ಕರ್ತವ್ಯಗಳಿಗೂ ಇದರಿಂದ ತೊಂದರೆ ಉಂಟಾಗುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಮತದಾನದ ಪ್ರಮಾಣ ಹೆಚ್ಚಾಗುತ್ತದೆ. ಒಂದೇ ಬಾರಿ ಮತ ಚಲಾಯಿಸಲು ಹೆಚ್ಚು ಅನುಕೂಲಕರವಾಗಿರುತ್ತದೆ ಎಂಬ ವಾದ.

ಏಕ ಕಾಲದಲ್ಲಿ ಚುನಾವಣೆ ನಡೆಸುವುದರಿಂದ ಹೆಚ್ಚು ಪ್ರಯೋಜನ ಇದೆ ಎಂದು ಕೇಂದ್ರ ಸರ್ಕಾರದವರು ತಿಳಿಸಿದ್ದಾರೆ. ಮಸೂದೆ ಅಂಗೀಕಾರದ ಸವಾಲುಗಳೇನೆಂದರೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳಿಗೆ ಅನುಮೋದನೆ ಮುದ್ರೆ ನೀಡಬೇಕು.

ಅಂದರೆ ದೇಶದ 28 ರಾಜ್ಯಗಳ ಪೈಕಿ 14 ರಾಜ್ಯಗಳು ಈ ಮಸೂದೆಯ ಪರವಾಗಿರಬೇಕು. ಪ್ರಸ್ತುತ 10 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ 6 ರಾಜ್ಯಗಳಲ್ಲಿ ಬಿಜೆಪಿ ಬೆಂಬಲಿತ ಸರ್ಕಾರಗಳು ಇವೆ. ಕೇಂದ್ರಕ್ಕೆ ಅನೇಕ ರೀತಿಯ ಸವಾಲುಗಳಿದ್ದರೂ ಕೂಡ ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ತರಲು ಮುಂದಾಗಿದೆ.

LEAVE A REPLY

Please enter your comment!
Please enter your name here