ಲೋಕಸಭಾ ಫಲಿತಾಂಶ ಬರುವುದಕ್ಕೂ ಮೊದಲೇ ಈಶ್ವರಪ್ಪನವರು ಸೋಲನ್ನ ಒಪ್ಪಿಕೊಂಡಿದರಾ?
ನಮಸ್ಕಾರ ಪ್ರಿಯ ಸ್ನೇಹಿತರೇ, ಹಾವೇರಿಯಿಂದ ಪುತ್ರನಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಈಶ್ವರಪ್ಪ ರವರು ಸ್ವತಂತ್ರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದರು, ಫಲಿತಾಂಶ ಬರುವುದಕ್ಕೂ ಮುನ್ನವೇ ಈಶ್ವರಪ್ಪನವರು ಸೋಲು ಒಪ್ಪಿಕೊಂಡ ಪ್ರಶ್ನೆ ಉದ್ಭವಿಸಿದೆ.
ಬೆಂಗಳೂರು ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಈಶ್ವರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದ್ರೆ ಕಮಲ ಅಂತ ಜನ ಅಂದುಕೊಂಡಿದ್ದರು ಆದರೆ ಅದೇ ನನಗೆ ಮುಳುವಾಯಿತು ಅನೇಕರು ಕಮಲದ ಚಿಹ್ನೆಗೆ ವೋಟ್ ಹಾಕಿ ನನಗೆ ಹಾಕಿದ್ದೀನಿ ಅಂತ ಹೇಳಿದ್ದಾರೆ
ನಾನು ಪಕ್ಷೇತರ ಅಭ್ಯರ್ಥಿ ಎಂದು ಅರಿವು ಮೂಡಿಸುವಲ್ಲಿ ಎಡವಿದ್ದೆ ಎನ್ನುವ ಮೂಲಕ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಈಶ್ವರಪ್ಪನವರು ಸೋಲನ್ನ ಒಪ್ಪಿಕೊಂಡ ಎಂಬ ಅನುಮಾನ ಶುರುವಾಗಿದೆ.
ಪಕ್ಷೇತರ ಅಭ್ಯರ್ಥಿ ಇಂದು ಜನರಲ್ಲಿ ಅರಿವು ಮೂಡಿಸುವಲ್ಲಿ ಎಡವಿದ್ದೇನೆ ಈಶ್ವರಪ್ಪ ಬಿಜೆಪಿಯಲ್ಲಿ ಇದ್ದಾರೆ ಎಂದು ಕಮಲದ ಗುರುತಿಗೆ ಮತ ಹಾಕಿದ್ದಾರೆ. ಇದು ನನಗೆ ತೊಂದರೆಯನ್ನು ನೀಡಿದ್ದು ಮತದಾನದ ವೇಳೆ ಜನ ಗೊಂದಲಕೀಡಾಗಿದ್ದಾರೆ ಕಮಲದ ಚಿಹ್ನೆ ಎಂದು ಮತ ಹಾಕಿದ್ದಾರೆ.
ನಾನು ಕೊನೆ ಉಸಿರಿರುವ ತನಕ ಬಿಜೆಪಿ ಜೊತೆ ಇರ್ತೀನಿ ನಾನು ಬಿಜೆಪಿಯಿಂದ ಹೊರಗೆ ಹೋಗಿದ್ದೀನಿ ಎಂದು ಯಾರೂ ಅಂದುಕೊಂಡಿಲ್ಲ ನಾನು ಬಿಜೆಪಿಯಲ್ಲಿ ಇನ್ನೂ ಇದ್ದೀನಿ ಎಂದು ಎಲ್ಲರೂ ಅಂದುಕೊಂಡಿದ್ದಾರೆ ಈಶ್ವರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದ್ರೆ ಕಮಲ ಎಂದು ಅಂದುಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷ ನನ್ನ ತಾಯಿ, ನಾನು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಕೊನೆ ಉಸಿರು ಇರುವ ತನಕ ಬಿಜೆಪಿಯ ಜೊತೆ ಇರ್ತೀನಿ, ಚಿನ್ನೆಯು ಕೂಡ ನನ್ನನ್ನ ಬಿಜೆಪಿಯಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪನವರು ಹೇಳಿಕೊಂಡಿದ್ದಾರೆ.
ಬಿಜೆಪಿಯಿಂದ ನನ್ನನ್ನ ಉಚ್ಚಾಟನೆ ಮಾಡಲಾಗಿದೆ ಎಂದು ಬಿ ವೈ ವಿಜಯೇಂದ್ರ ಅವರಿಂದ ಪತ್ರ ಬಂದಿದೆ, ವಿಜಯೇಂದ್ರ ಇನ್ನೂ ಬ- ಚ್ಚಾ ರಾಜ್ಯದಲ್ಲಿ ಯಡಿಯೂರಪ್ಪ, ನಾನು, ಅನಂತ್ ಕುಮಾರ್, ಶಂಕರ್ ಮೂರ್ತಿ,
ರಾಮಚಂದ್ರಗೌಡರು ಸೇರಿ ನಾವೆಲ್ಲ ಕಟ್ಟಿದ ಪಕ್ಷ ಇದು ಇಂದು ವಿಜೇಂದ್ರ ವಿರುದ್ಧ ಕಿಡಿಕಾರ್ರಿದ್ರು. ಇನ್ನು ವಿಜೇಂದ್ರ ಎಲ್ಲಿದ್ದಾನೋ ಗೊತ್ತಿಲ್ಲ ಆದರೆ ತಂದೆಯ ಒತ್ತಾಯದಿಂದ ದಿಲ್ಲಿಗೆ ಹೋಗಿ ಒತ್ತಾಯ ಪೂರಕವಾಗಿ ರಾಜ್ಯಾಧ್ಯಕ್ಷನಾಗಿ ಬಂದಿದ್ದಾನೆ.
ಇದನ್ನು ಸಹ ಓದಿ:
ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್
IIMB ಯಲ್ಲಿ ಹುದ್ದೆಗಳು ಖಾಲಿ ಇವೆ 14 ಲಕ್ಷ ರೂಪಾಯಿ ಸಂಬಳ
ಆರ್ ಸಿ ಬಿ ಸೇರಿದ್ರೆ ಕ್ಯಾಪ್ಟನ್ ಆಗ್ತಾರಾ ಕನ್ನಡಿಗರ ರಾಹುಲ್
ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ಕೂಡ ಸಾಲ
ಯಡಿಯೂರಪ್ಪನವರೇ ಬಿಜೆಪಿ ಬಿಟ್ಟು ಹೋಗಿ ಬೇರೆ ಪಕ್ಷ ಕಟ್ಟಿದರು ಅಂತಹ ದ್ರೋಹದ ಕೆಲಸವನ್ನ ನಾನು ಮಾಡಿಲ್ಲ ಯಾವತ್ತಿಗೂ ಮಾಡಲ್ಲ ವಿಜೇಂದ್ರ ಯಾರು ಅಂತ ಕೇಳಬಹುದು ವಿನಃ ಈಶ್ವರಪ್ಪ ಯಾರು ಅಂತ ಕೇಳಲ್ಲ,
ಈಶ್ವರಪ್ಪ ಅಂದರೆ ಬಿಜೆಪಿ ಎಂದು ಪುನಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರಾದ ವಿಜೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.