ಕಡಿಮೆ ಜಾಗದಲ್ಲಿ ಕಡಿಮೆ ಬಂಡವಾಳ ಕಡಿಮೆ ಸಮಯದ ಈ ಕೃಷಿ ಮಾಡಿ

65

ನಮಸ್ಕಾರ ಪ್ರಿಯ ಸ್ನೇಹಿತರೇ, ಬ್ರೊಕೋಲಿ ಈ ಕೃಷಿಯನ್ನು ನಾವು ಮಾಡುವುದರಿಂದ ಕಡಿಮೆ ಜಾಗದಲ್ಲಿ ಕಡಿಮೆ ಸಮಯವನ್ನು ತೆಗೆದುಕೊಂಡು ಸಾಕಷ್ಟು ರೀತಿಯ ಲಾಭವನ್ನು ಪಡೆಯಬಹುದು. ಈ ಕೃಷಿಯನ್ನು ಮಾಡಬೇಕಾದರೆ ಮೊದಲು ನಾವು ಕೃಷಿ ಭೂಮಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪಿ ಹೆಚ್ ಮಟ್ಟ 6-6.8 ಎಷ್ಟು ಇರಲೇಬೇಕು ಫಲವತ್ತಾದ ಮಣ್ಣಿನಲ್ಲಿ ಬ್ರೊಕೋಲಿ ಉತ್ತಮವಾಗಿ ಬೆಳೆಯುತ್ತದೆ.

ಮಣ್ಣಿನಲ್ಲಿರುವ ಲವಣಾಂಶಗಳಿಗೆ ತುಂಬಾ ಸೂಕ್ಷ್ಮವಾಗಿರುವಂತಹ ಕೃಷಿಯಾಗಿದೆ. ಕಡಿಮೆ ಉಪ್ಪಿನಂಶ ಹೊಂದಿರುವ ಭೂಮಿಯನ್ನ ನಾವು ಆಯ್ಕೆ ಮಾಡಿಕೊಳ್ಳಬೇಕು. ಈ ಬೆಳೆಯನ್ನ ನಾವು ಬೆಳೆಯಬೇಕಾದರೆ ಸಾಕಷ್ಟು ಸೂರ್ಯನ ಬೆಳಕು ಇರಲೇಬೇಕು. ಮಾರುಕಟ್ಟೆಯಲ್ಲಿ ಬ್ರೊಕೋಲಿ ಎನ್ನುವ ಎರಡು ರೀತಿಯ ಬೀಜಗಳನ್ನ ನೋಡಬಹುದು ಅವುಗಳಲ್ಲಿ ನಾವು ಉತ್ತಮವಾದದ್ದನ್ನ ಆಯ್ಕೆ ಮಾಡಿಕೊಳ್ಳಬೇಕು.

ಒಂದು ತೆರೆದ ಪರಾಗಸ್ಪರ್ಶ ಇನ್ನೊಂದು ಹೈಬ್ರಿಡ್ ತಳಿಗಳು. ತೆರೆದ ಪರಾಗಸ್ಪರ್ಶ ಇವು ಕಡಿಮೆ ಬೆಲೆಯನ್ನ ಹೊಂದಿರುತ್ತವೆ, ಭವಿಷ್ಯದ ಬದುಕಿಗಾಗಿ ಇವುಗಳನ್ನ ನಾವು ಬಳಸಿಕೊಳ್ಳಬಹುದು. ಹೈಬ್ರಿಡ್ ಬೀಜಗಳು ಇವು ತುಂಬಾ ದುಬಾರಿಯಾಗಿದ್ದರು ಕೂಡ ಉತ್ತಮ ಇಳುವರಿಯ ಜೊತೆಗೆ ರೋಗನಿರೋಧಕವನ್ನ ನೀಡುತ್ತವೆ. ಹೈಬ್ರಿಡ್ ತಳಿಗಳನ್ನು ನಾವು ಆಯ್ಕೆ ಮಾಡಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.

ಮಾರುಕಟ್ಟೆ ಮತ್ತು ಕೃಷಿಗೆ ಯೋಗ್ಯವಾಗಿರುವಂಥ ಬೀಜಗಳನ್ನ ನಾವು ಖರೀದಿ ಮಾಡುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯ. ಬ್ರಕೋಲಿ ಬೀಜಗಳನ್ನು ನೇರವಾಗಿ ನೀವು ಹೊಲದಲ್ಲಿ ಬಿತ್ತನೆ ಮಾಡಬಹುದಾಗಿದೆ. ಮೊಳಕೆ ಬರುವವರೆಗೂ ಅವುಗಳನ್ನು ಪೋಷಣೆ ಪಾಲನೆ ಮಾಡಬೇಕು. ಈ ಬೀಜಗಳನ್ನು ನೀವು ಹಾಕಬೇಕಾದರೆ 12 ಅಡಿ ಅಂತರದಲ್ಲಿ ಒಂದಕ್ಕೊಂದು ದೂರ ಬಿಟ್ಟು ಈ ಬೆಳೆಯನ್ನ ನೀವು ಬೆಳೆಯಬೇಕು

ಈ ಬೆಳೆಯನ್ನ ಬೆಳೆಯುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು ಏಕೆಂದರೆ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಎಂಬುದು ಇದೆ. ಕೃಷಿಯನ್ನು ನೀವು ಮಾಡುತ್ತೀರಾ ಎಂದರೆ ಗಿಡ ಹೇನುಗಳು ಜೀರುಂಡೆಗಳು ಹಾಗೆ ಬೇರೆ ಬೇರೆ ರೀತಿಯ ಹುಳಗಳು ಕೂಡ ಇವುಗಳನ್ನ ತಿನ್ನುತ್ತವೆ. ಈ ಬೆಳೆಗಳನ್ನ ನಾವು ಮೇಲ್ವಿಚಾರಣೆ ಮಾಡುತ್ತಾರೆ ಇರಬೇಕು ಏಕೆಂದರೆ ಈ ಕೀಟಗಳು ಪ್ರಾಣಿಗಳು ತಿನ್ನುವುದರಿಂದ ಅವುಗಳು ನಾಶವಾಗುವ ಸಾಧ್ಯತೆ ಇದೆ.

ಸೋಂಕಿತ ಸಸ್ಯಗಳನ್ನ ನಾವು ನಾಶ ಮಾಡಬೇಕು ಇಲ್ಲವಾದರೆ ಒಂದು ವೇಳೆ ಈ ಒಂದು ಸಸ್ಯಕ್ಕೆ ರೋಗ ಇದೆ ಎಂದರೆ ಇನ್ನೊಂದು ಸಸ್ಯಕ್ಕೂ ರೋಗಗಳು ಬರುವ ಸಾಧ್ಯತೆ ಇದೆ. ಈ ಬ್ರೊಕೋಲಿಯನ್ನ ನೀವು ಬೆಳೆಯುವುದರಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here