ರಾಮನಗರದಲ್ಲಿ ಚುನಾವಣಾ ಅಧಿಕಾರಿಗಳಿಗೆ ಬ್ಯಾಲೆಟ್ ಪೇಪರ್ ಕಿತ್ಕೊಂಡು ಎಸ್ಕೇಪ್.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಕೆಲವೊಂದು ಇಷ್ಟು ರಾಜ್ಯಗಳಲ್ಲಿ ಒಂದು ಕಾಲದಲ್ಲಿ ಚುನಾವಣೆಯನ್ನು ನಡೆಸುವುದೇ ಬಹಳ ಕಷ್ಟವಾದ ಪರಿಸ್ಥಿತಿ ಎದುರಾಗಿತ್ತು, ಲೋಕಸಭೆ ಚುನಾವಣೆ ವಿಧಾನಸಭೆ ಚುನಾವಣೆ ಗ್ರಾಮ ಪಂಚಾಯಿತಿ ಚುನಾವಣೆಯು ಕೂಡ ಕಷ್ಟದ ಪರಿಸ್ಥಿತಿ ಬಂದಿತ್ತು.

ಆ ಭಾಗಗಳಲ್ಲಿ ತುಂಬಾ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿದ್ದರು. ಎಲೆಕ್ಷನ್ ಬೂತ್ ಗೆ ನುಗ್ತಿದ್ದರೂ ಮತ ಯಂತ್ರವನ್ನು ತೆಗೆದುಕೊಂಡು ಹೋಗುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ರೀತಿಯ ಗಲಾಟೆಗಳು ಉಂಟಾಗುತ್ತವೆ, ಪ್ರಾಣವನ್ನ ಕಳೆದುಕೊಂಡಿದ್ದಾರೆ ಬೆಂಕಿಯನ್ನು ಕೂಡ ಹಚ್ಚಿದ್ದಾರೆ,

ಈ ರೀತಿಯಲ್ಲಿ ಅನೇಕ ರೀತಿ ಆ ಸಂದರ್ಭಗಳು ಕೂಡ ಒದಗಿ ಬಂದಿದ್ದವು. ಆ ಭಾಗದಲ್ಲಿ ಚುನಾವಣೆಯನ್ನು ಮುಗಿಸಿದರೆ ಆ ಭಾಗದ ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ವ್ಯವಸ್ಥೆಯಲ್ಲಿ ಯಾರ್ಯಾರು ಭಾಗಿಯಾಗಿರುತ್ತಾರೋ ಅವರಿಗೆ ಒಂದು ರೀತಿಯಲ್ಲಿ ಆರಾಮದಾಯಕವಾಗಿರುತ್ತಿತ್ತು.

ಸಾಕಷ್ಟು ರೀತಿಯ ಸುಧಾರಣೆಯನ್ನು ಗಮನಿಸಬಹುದು ಆದರೆ ಇನ್ನೂ ಕೆಲವೊಂದಿಷ್ಟು ಭಾಗಗಳಲ್ಲಿ ಈ ರೀತಿ ಸಮಸ್ಯೆ ಉಂಟಾಗಿರುವುದನ್ನ ಗಮನಿಸಬಹುದು. ಚುನಾವಣಾ ಅಧಿಕಾರಿಗಳು ಚುನಾವಣೆಯಲ್ಲಿ ನಡೆಸಲು ಬಂದಾಗ ಕೆಲವೊಂದಿಷ್ಟು ಪುಂಡಪೋಕರಿಗಳು ಕಾರಿನಲ್ಲಿ ಬಂದು ಬ್ಯಾಲೆಟ್ ಪೇಪರ್ ಗಳನ್ನ ತೆಗೆದುಕೊಂಡು ಓಡಿ ಹೋಗಿದ್ದಾರೆ.

ಹುಳೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಚುನಾವಣೆ ನಿಗದಿಯಾಗಿತ್ತು. ರಾಜ್ಯ ಸರ್ಕಾರವು ದಿನಾಂಕವನ್ನು ಕೂಡ ನಿಗದಿಪಡಿಸಿತು 23 ವರ್ಷಗಳಾದ ನಂತರ ಅಲ್ಲಿ ಚುನಾವಣೆ ನಡೆದಿದೆ. ಚುನಾವಣೆಯನ್ನು ತುಂಬಾ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು.

ಒಂದು ಭಾಗದವರಿಗೆ ಸೋಲುತ್ತೇನೆ ಎನ್ನುವ ಮನೋಭಾವ ಇತ್ತಂತೆ. ಚುನಾವಣೆಯೇ ನಡೆಯದೇ ಇದ್ದರೆ ನಮಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ನಮ್ಮ ಪ್ರತಿಷ್ಠೆಗೆ ಧಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಕೆಲವೊಂದಿಷ್ಟು ಅಧಿಕಾರಿಗಳು ಅವರು ಬ್ಯಾಲೆಟ್ ಪೇಪರ್ ಅನ್ನು ತೆಗೆದುಕೊಂಡು ಬರುವ ಅಧಿಕಾರಿಗಳ ಕಾರಣ ಅಡ್ಡ ಹಾಕಿ ನಿಮ್ಮ ಬಳಿಯಲ್ಲಿರುವ ಎಲ್ಲಾ ಪರಿಕರಗಳನ್ನು ನಮಗೆ ಕೊಡಿ ಎಂದು ಚಾಕುವಿನ ಹಿಡಿದು ಬೆದರಿಕೆಯನ್ನು ಹಾಕಿದ್ದಾರೆ.

ಅಧಿಕಾರಿಗಳು ಕೊಡಲು ಮುಂದಾಗದೆ ಇದ್ದಾಗ ಅಲ್ಲಿರುವ ಜನಗಳೇ ಕಾರಿನೊಳಗೆ ಇದ್ದಂತ 250 ಬ್ಯಾಲೆಟ್ ಪೇಪರ್ ಗಳು ಎರಡು ಲ್ಯಾಪ್ಟಾಪ್ ಮತ್ತು ಎರಡು ರಬ್ಬರ್ ಸ್ಟ್ಯಾಂಪ್ ಗಳನ್ನ ತೆಗೆದುಕೊಂಡು ಹೋಗಿದ್ದಾರೆ.

ಅವರನ್ನು ಹಿಡಿಯಲು ಹೋದಾಗ ಅಲ್ಲಿರುವಂತಹ ವ್ಯಕ್ತಿ ಅದನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾನೆ ರಾಮನಗರದ ಚುನಾವಣೆಯಲ್ಲಿ ಅಧಿಕಾರಿಗಳಿಂದ ಬ್ಯಾಲೆಟ್ ಪೇಪರ್ ಅನ್ನು ತೆಗೆದುಕೊಂಡು ಎಸ್ಕೇಪ್ ಆಗಿರುವ ಘಟನೆ ನಮ್ಮ ಕರ್ನಾಟಕದಲ್ಲಿ ಕೂಡ ಹೇಳಬಹುದು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here