ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ಹಣ ನಿಮ್ಮ ಗಂಡನ ಖಾತೆಗೆ ಬರುತ್ತೆ

67

ನಮಸ್ಕಾರ ಪ್ರಿಯ ಸ್ನೇಹಿತರೇ, ಇನ್ನು ಮುಂದೆ ಉಚಿತವಾಗಿ ಬರುವಂತಹ 2000 ಹಣ ನಿಮ್ಮ ಗಂಡನ ಖಾತೆಗೆ ಜಮಾ ಮಾಡಬಹುದಾಗಿದೆ. ಯಾಕೆ ಗಂಡನ ಖಾತೆಗೆ ಜಮಾ ಮಾಡುತ್ತಾರೆ ಇದರ ಉದ್ದೇಶವೇನು ಎಂಬುವ ಮಾಹಿತಿ ಇಲ್ಲಿದೆ. ಗಂಡನ ಖಾತೆಗೆ ಏಕೆ ಗೃಹಲಕ್ಷ್ಮಿ ಯೋಜನೆಗೆ 2,000 ಹಣ ಜಮಾ ಮಾಡುತ್ತಿದ್ದಾರೆ ಎಂದರೆ ಗೃಹ ಲಕ್ಷ್ಮಿ ಯೋಜನಗೆ ಅರ್ಜಿ ಸಲ್ಲಿಸಿರುವ ಮಹಿಳೆಯರು ಒಂದು ಕೋಟಿ ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಒಂದು ಕೋಟಿ ಇಪ್ಪತೈದು ಲಕ್ಷಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಒಂಬತ್ತು ಲಕ್ಷ ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನಿಂದ ಮೂರನೇ ಕಂತಿನವರೆಗೆ ಹಣ ಎಂಬುದು ಜಮಾ ಆಗಿಲ್ಲ. ಗೃಹ ಲಕ್ಷ್ಮೀ ಯೋಜನೆಯ ಹಣ ಜಮಾ ಆಗುತ್ತಾ ಇಲ್ಲ ಅಂತಹ ಮಹಿಳೆಯರು ಅವರ ಗಂಡನ ಖಾತೆಗೆ 2000 ಹಣ ಜಮಾ ಆಗುವ ಸಾಧ್ಯತೆ ಹೆಚ್ಚಾಗಿದೆ.

ಗೃಹಲಕ್ಷ್ಮಿ ಯೋಜನೆ ಒಂದನೇ ಕಂತಿನಿಂದಲೂ ಕೂಡ ಹಣ ಬಂದಿಲ್ಲ ಎಂದವರಿಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣ ಎಂಬುದು ವರ್ಗಾವಣೆಯಾಗುತ್ತಾ ಇಲ್ಲ ಆದ್ದರಿಂದ ಸಮಸ್ಯೆಗಳು ಎದುರಾಗುತ್ತಾ ಇದೆ ಆದ್ದರಿಂದ ಅವರ ಗಂಡನ ಖಾತೆಯನ್ನ ಪಡೆದುಕೊಂಡು ಅವರ ಗಂಡನ ಖಾತೆಗೆ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಒಂದು ವೇಳೆ ಅತ್ತೆ ಸೊಸೆ ಮಗ ಇದು ಅವರ ಗಂಡ ಏನಾದರೂ ಮರಣ ಹೊಂದಿದರೆ ಅತ್ತೆಯ ಖಾತೆಗೆ ಹಣ ಜಮಾ ಆಗಲು ಸಾಧ್ಯವಾಗುತ್ತಿರುವುದಿಲ್ಲ ಸೊಸೆ ಅಥವಾ ಮಗನ ವಯಸ್ಸನ್ನ ಆಧಾರದ ಮೇಲೆ ಅವರ ಖಾತೆಗೆ ಹಣವನ್ನ ಜಮಾ ಮಾಡಲು ತೀರ್ಮಾನ ಕೈಗೊಂಡಿದೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ

ಇದ್ದರೆ ನಿಮ್ಮ ಗಂಡನ ಖಾತೆಗೆ ಅಥವಾ ನಿಮ್ಮ ಮಗನ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ ಆದ್ದರಿಂದ ನೀವು ಬ್ಯಾಂಕುಗಳಿಗೆ ಹೋಗಿ ಪರಿಶೀಲನೆ ಮಾಡಿಕೊಳ್ಳುವುದು ಮುಖ್ಯ ಏಕೆಂದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರ ಖಾತೆಗೆ ಹಣ ಎಂಬುದು ವರ್ಗಾವಣೆಯಾಗುತ್ತಾ ಇಲ್ಲ ಅಂತಹ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳುವುದಕ್ಕೆ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here