ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ IDFC FIRST ಬ್ಯಾಂಕ್ ನಿಂದ ಎರಡು ಲಕ್ಷ ರೂಪಾಯಿ ಸ್ಕಾಲರ್ಶಿಪ್
ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿದೆ, ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ.
ಉನ್ನತ ಶಿಕ್ಷಣ ಎನ್ನುವುದು ಇನ್ನೂ ಹಲವು ಕಡೆ ಗಗನ ಕುಸುಮಾ ಎನಿಸಿಕೊಂಡಿದೆ ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್, ಎಂಬಿಎ ಎಂತಹ ಉನ್ನತ ಶಿಕ್ಷಣದಲ್ಲಿನ ದುಬಾರಿ ಶುಲ್ಕ ಕಾರಣದಿಂದ ಹಣ ಹೊಂದಿಸಲು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಾರಿ ಸಂಕಷ್ಟ ಎದುರಾಗುತ್ತಾ ಇದೆ ಇಂದಿಗೂ ಕೂಡ ಜನ ಪರದಾಡುವಂಥ ಪರಿಸ್ಥಿತಿಗಳು ಎದುರಾಗುತ್ತದೆ.
ಇದೇ ಕಾರಣಕ್ಕಾಗಿ ಸರ್ಕಾರಗಳು ಮತ್ತು ಬ್ಯಾಂಕ ನಂತಹ ಕೆಲವು ಖಾಸಗಿ ಸಂಸ್ಥೆಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ಮುಂದೆ ಬಂದಿದೆ.
ಅದರಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನೀಡುವ ಸ್ಕಾಲರ್ಶಿಪ್ ತುಂಬಾ ಪ್ರಮುಖವಾದದ್ದು. ಬ್ಯಾಂಕ್ ಬಡ ಎಂಬಿಎ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ ಎರಡು ಲಕ್ಷ ರೂಪಾಯಿ ಒದಗಿಸುತ್ತದೆ ಇದಕ್ಕೆ ಯಾರೆಲ್ಲಾ ಅರ್ಹರು ಹೇಗೆ ಅಪ್ಲೈ ಮಾಡಬೇಕು ಎಂಬುದನ್ನು ತಿಳಿಯೋಣ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಬಿಎ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಯನ್ನು 2018ರಲ್ಲಿ ಪ್ರಾರಂಭ ಮಾಡಲಾಗಿದೆ. ಈ ಯೋಜನೆಯ ಮೂಲಕ ಅರ್ಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ 2 ಲಕ್ಷ ರೂಪಾಯಿ ನೆರವನ್ನು ನೀಡಲಾಗುತ್ತದೆ.
ಇದುವರೆಗೆ 152 ಕಾಲೇಜುಗಳ ಸುಮಾರು 1154 ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗಳನ್ನ ಪಡೆದುಕೊಂಡಿದ್ದಾರೆ. ಈ ಬಾರಿಯೂ ಕೂಡ ಅರ್ಜಿ ಸಲ್ಲಿಕೆಗಳು ಪ್ರಾರಂಭವಾಗಿದ್ದು ಆನ್ಲೈನ್ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 ಕೊನೆಯ ದಿನಾಂಕವಾಗಿದೆ. ಕೆಲವೊಂದಿಷ್ಟು ಅರ್ಹತೆಗಳು ಹೊಂದಿರಬೇಕು.
ಆ ಅರ್ಹತೆಗಳು ಯಾವುದು ಎಂದರೆ ಭಾರತದ ನಾಗರಿಕರಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ಅದಕ್ಕಿಂತ ಕಡಿಮೆ ಇರಬೇಕು.
ಎರಡು ವರ್ಷ ಪೂರ್ಣ ಅವಧಿಯೇ ಎಂಬಿಎ ಕೋರ್ಸ್ ಮೊದಲ ವರ್ಷದಲ್ಲಿ ಇರಬೇಕು, ಆಧಾರ್ ಕಾರ್ಡ್ ಜೊತೆಗೆ ಮೊಬೈಲ್ ನಂಬರ್ ಗಳನ್ನ ಲಿಂಕ್ ಮಾಡಬೇಕು.
ಇದನ್ನು ಸಹ ಓದಿ:
ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ
ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ
ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣದ ಬಿಡುಗಡೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಶುಭ ಸುದ್ದಿ ಸಿಕ್ಕಿದೆ
ಯಾವೆಲ್ಲಾ ಪ್ರಮುಖ ದಾಖಲೆಗಳು ಇರಬೇಕು ಎಂದರೆ ಕಾಲೇಜಿಗೆ ಪ್ರವೇಶ ಪಡೆದಿರುವ ಹೆಸರಾಗಿರಬಹುದು, ಅಡ್ಮಿಶನ್ ವರ್ಷ ಅದನ್ನು ನೀವು ಇಟ್ಟುಕೊಂಡಿರಬೇಕು, ಶುಲ್ಕವನ್ನು ಪಾವತಿ ಮಾಡಿದ ರಶೀದಿ, ಪದವೀ ತರಗತಿಯ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ. ಈ ಪ್ರಮುಖ ದಾಖಲೆಗಳನ್ನು ಇಟ್ಟುಕೊಂಡು ಈ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ
ಯಾವ ಕಾಲೇಜಿಗೆ ಅರ್ಜಿ ಸಲ್ಲಿಸಿದರೆ ಈ ಸ್ಕಾಲರ್ಶಿಪ್ ಪಡೆಯಬಹುದು ಎನ್ನುವುದಕ್ಕೆ ಈ ಲಿಂಕನ್ನ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ತಿಳಿಯಿರಿ. https://d2w7l1p59qkl0r.cloudfront.net/static/files/list-of-institutions-idfc-first-bank-mba-scholarship-2024-26.pdf ನೀವು ಕೂಡ ಈ ಸ್ಕಾಲರ್ಶಿಪ್ ಪಡೆಯಬೇಕು ಅಂದುಕೊಂಡಿದ್ದರೆ ಈ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಇಲ್ಲಿ ಸಂಪೂರ್ಣವಾಗಿ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ.
https://www.buddy4study.com/page/idfc-first-bank-mba-scholarship#scholarships