ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಇಲ್ಲದವರಿಗೆ ಗುಡ್ ನ್ಯೂಸ್.

60

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ನಾಗರಿಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ahara. kar. nic. ಹೊಸ ಪಡಿತರ ಚೀಟಿಯನ್ನ ಪಡೆಯಬೇಕು ಅಂದುಕೊಂಡಿರುವ ಅಭ್ಯರ್ಥಿಗಳು ಈ ವೆಬ್ ಸೈಟಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿಯ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಅಗತ್ಯವಾಗಿರುವ ದಾಖಲೆಗಳ ಮೂಲಕ ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಜೊತೆಗೆ ನೀವು ಅರ್ಜಿಯನ್ನು ಸಲ್ಲಿಸಿದ್ದರೆ ಅರ್ಜಿ ಎಲ್ಲಿ ಬಂದಿದೆ? ಹೇಗೆ ಇದೆ ಎಂಬ ಪರಿಸ್ಥಿತಿಗಳನ್ನು ಕೂಡ ತಿಳಿಯಬಹುದು. ಹೊಸ ಪಡಿತರ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳನ್ನ ಪಡೆಯಬೇಕು ಎಂದರೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯೋಣ. ಹೊಸ ಕಾರ್ಡ್ ಗಳನ್ನ ಪಡೆಯಲು ಬೇಕಾಗಿರುವಂತಹ ಕೆಲವೊಂದಿಷ್ಟು ಅರ್ಹತೆಗಳು ಯಾವುದು ಎಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು

ಪಡಿತರ ಚೀಟಿಯನ್ನು ಹೊಂದದೆ ಇರುವಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಹೊಸದಾಗಿ ಮದುವೆ ಆಗಿರುವಂತಹ ದಂಪತಿಗಳು ಹೊಸದಾಗಿ ಪಡಿತರ ಚೀಟಿಯನ್ನು ಪಡೆಯಬೇಕೆಂದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಎಪಿಎಲ್ ಪಿಪಿಎಲ್ ಎಂಬುದು ನಿರ್ಧರಿತವಾಗುತ್ತದೆ.

ಪಡಿತರ ಚೀಟಿಯನ್ನ ಪಡೆದುಕೊಳ್ಳಬೇಕು ಎಂದರೆ ಅಗತ್ಯವಾಗಿ ಕೆಲವೊಂದಿಷ್ಟು ದಾಖಲೆಗಳು ಇರಬೇಕು ಆ ದಾಖಲೆಗಳು ಯಾವುದು ಎಂದರೆ ಒಟಲ್ ಐಡಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವಯಸ್ಸಿನ ಪ್ರಮಾಣ ಪತ್ರ, ಇತ್ತೀಚಿನ ನಿಮ್ಮದೊಂದು ಫೋಟೋ, ಮೊಬೈಲ್ ಸಂಖ್ಯೆ ಈ ಕೆಲವೊಂದಿಷ್ಟು ದಾಖಲೆಗಳು ನಿಮ್ಮ ಬಳಿ ಇದ್ದೇ ಇದೆ ಆದರೆ ನೀವು ಕೂಡ ಈ ಪಡಿತರ ಚೀಟಿಯನ್ನು ಪಡೆಯಲು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ನೀವು ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿಯೇ ನೀವು ಅರ್ಜಿಯನ್ನ ಸಲ್ಲಿಸಲು ಅವಕಾಶವನ್ನ ನೀಡಲಾಗಿದೆ. ಆ ವೆಬ್ ಸೈಟ್ಗಳಿಗೆ ಹೋಗಿ ಅಗತ್ಯ ದಾಖಲೆಗಳನ್ನು ಮಾಹಿತಿ ಕೇಳುತ್ತದೆ ಆ ಮಾಹಿತಿಗಳನ್ನು ನೀವು ಭರ್ತಿ ಮಾಡಿದ ನಂತರ ನೀವು ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನ ಪಡೆಯುವವರು ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here