ರೈತರಿಗೆ ಭರ್ಜರಿ ಗುಡ್ ನ್ಯೂಸ್ ಗಂಗಾ ಕಲ್ಯಾಣ ಯೋಜನೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯ ಮೂಲಕ ಅರ್ಹ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.
ಈ ಯೋಜನೆಗೆ ಯಾವೆಲ್ಲಾ ರೈತರು ಅರ್ಜಿಯನ್ನ ಸಲ್ಲಿಸಬೇಕು ಹಾಗೆ ಯಾವೆಲ್ಲಾ ಅರ್ಹತೆಗಳು ಇರಬೇಕು, ಯಾವೆಲ್ಲ ದಾಖಲೆಗಳು ಬೇಕು ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ. ಈ ಗಂಗಾ ಕಲ್ಯಾಣ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಒಂದು ಎಕರೆಯಿಂದ 5 ಎಕ್ಕರೆ ಒಳಗೆ ಜಮೀನನ್ನು ಹೊಂದಿರಬೇಕು.
ಹಾಗೆಯೇ ಈ ರೀತಿಯ ನಿಗಮದಿಂದ ಯಾವುದೇ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳದೆ ಇರುವಂತವರು ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿಗಳನ್ನು ತೆರೆದು ಪಂಪ್ ಗಳನ್ನ ಹಾಕಿ ವಿದ್ಯುತ್ ಅನ್ನ ಸಂಪರ್ಕ ಮಾಡುವುದಕ್ಕೆ ನಿಮ್ಮ ಬೆಳೆಗಳಿಗೆ ಸಂಬಂಧಿಸಿದಂತೆ ನೀರಾವರಿ ವ್ಯವಸ್ಥೆಯನ್ನು ಈ ರೀತಿಯಾಗಿ ಕಲ್ಪಿಸಲಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಪ್ರಮುಖ ಕೆಲವೊಂದಿಷ್ಟು ಅರ್ಹತೆಗಳು ಹೊಂದಿರಬೇಕು ಅ ಅರ್ಹತೆಗಳು ಯಾವುದು ಎಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು, 18 ವರ್ಷ ಮೇಲ್ಪಟ್ಟವರಾಗಿರಬೇಕು ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಅಂಬೇಡ್ಕರ್, ಭೋವಿ ಅಥವಾ ಆದಿ ಜಾಂಬವ ಈ ವರ್ಗಕ್ಕೆ ಸೇರಿದವರಾಗಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಸಣ್ಣ ಮತ್ತು ಅತಿ ಸಣ್ಣ ರೈತರ ಮಾತ್ರ ಆಗಿರಬೇಕು, ಸರ್ಕಾರದ ಯಾವುದೇ ಯೋಜನೆಯಿಂದ ಸಾಲ ಅಥವಾ ಸೌಲಭ್ಯವನ್ನು ಪಡೆದುಕೊಳ್ಳದೆ ಇರುವಂತವರು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸರ್ಕಾರಿ ನೌಕರಿಯನ್ನು ಹೊಂದಿರಬಾರದು, ಫಲಾನುಭವಿಗಳು ವ್ಯವಸಾಯವನ್ನ ಮಾಡುತ್ತಿರಬೇಕು.
ಈ ಯೋಜನೆಯ ಸೌಲಭ್ಯ ಪಡೆಯಬೇಕೆಂದರೆ ಅರ್ಜಿಯನ್ನು ಸಲ್ಲಿಸಬೇಕು ಅದಕ್ಕೆ ಬೇಕಾದಂತಹ ದಾಖಲೆಗಳು ಯಾವುದು ಎಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಇದನ್ನು ಸಹ ಓದಿ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ?
ಬ್ಯಾಂಕ್ ಪಾಸ್ ಬುಕ್, ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಜಮೀನಿನ ಪಹಣಿ, fid ನಂಬರ್ ಇರಬೇಕು, ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರ, ಮೊಬೈಲ್ ನಂಬರ್ ಈ ದಾಖಲೆಗಳು ಕಡ್ಡಾಯವಾಗಿ ಇರಬೇಕು.
ಒಂದರಿಂದ ಐದು ಎಕರೆ ವ್ಯವಸಾಯದ ಜಮೀನನ್ನ ಹೊಂದಿರುವಂತಹ ಫಲಾನುಭವಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ,
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಒಂದು ಕೊಳವೆ ಬಾವಿಗಳನ್ನು ಕೊರೆದು ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ನಿಮ್ಮ ಹತ್ತಿರದಲ್ಲಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಜೂನ್ 29 ನೇ ತಾರೀಖಿನ ಒಳಗಡೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾಹಿತಿ ಆಧಾರ:
https://youtu.be/U2PxpLPr51g?si=2Skd4MykGwe8BQEu