ರೈತರಿಗೆ ತಿಂಗಳಿಗೆ 3000 ಪಿಂಚಣಿ ಸರ್ಕಾರದ ಹಣ ಪಡೆಯಲು ಇಲ್ಲಿದೆ ಮಾಹಿತಿ
ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಘೋಷಣೆ ಮಾಡುತ್ತದೆ ಆದರೆ ಎಷ್ಟು ರೈತರಿಗೆ
ಅವುಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ ಅವುಗಳಲ್ಲಿ ಪಿಎಂ ಕಿಸಾನ್ ಮಾನ್ ದನ್ ಯೋಜನೆ ಒಂದು ರೈತರಿಗೆ ತಿಂಗಳಿಗೆ 3000 ಪಿಂಚಣಿ ನೀಡಲಾಗುತ್ತದೆ ಹೇಗೆ ಪಡೆದುಕೊಳ್ಳುವುದು ಎನ್ನುವ ಮಾಹಿತಿಯನ್ನು ತಿಳಿಯೋಣ.
ಕಿಸಾನ್ ಸಮ್ಮಾನ್ ಯೋಜನೆ ಮತ್ತು ಕಿಸಾನ್ ಮಾನದನ್ ಯೋಜನೆ ಎರಡು ಯೋಜನೆಯೂ ಕೂಡ ಬೇರೆ ಬೇರೆಯವರ ಯೋಜನೆಯಾಗಿದೆ.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವರ್ಷಕ್ಕೆ ಆರು ಸಾವಿರ ಹಣವನ್ನು ಮೀಸಲಿಡುತ್ತದೆ, ಪಿ ಎಂ ಕಿಸಾನ್ ಮಾನ್ ಧನ್ ಯೋಜನೆಯಲ್ಲಿ ಸಣ್ಣ ರೈತರಿಗೆ ಪ್ರತಿ ತಿಂಗಳು 3000 ಹಣ ನೀಡಲಾಗುತ್ತದೆ.
ಎರಡು ಅಥವಾ ಐದು ಹೆಕ್ಟರ್ ಜಮೀನನ್ನ ಹೊಂದಿರುವವರು ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯ. 18 ರಿಂದ 40 ವರ್ಷದ ಒಳಗಿರುವಂತಹ ರೈತರು ಈ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಬೇಕು. 18 ವರ್ಷದಲ್ಲಿ ನೀವೇನಾದರೂ ಈ ಯೋಜನೆಯನ್ನು ಮಾಡಿಸಿದ್ದರೆ.
ಕನಿಷ್ಠ ತಿಂಗಳಿಗೆ 55 ರೂಪಾಯಿ ಹಣವನ್ನು ನೀವು ಕಟ್ಟುತ್ತಾ ಬರಬೇಕು. ಒಂದು ವೇಳೆ 40 ನೇ ವಯಸ್ಸಿನಲ್ಲಿ ಈ ಯೋಜನೆಯನ್ನು ನೀವು ಪಡೆದರೆ ಪ್ರತಿ ತಿಂಗಳು 200 ರೂಪಾಯಿ ಹಣವನ್ನ ಕಟ್ಟುತ್ತ ಬರಬೇಕು. 60 ವರ್ಷದವರೆಗೂ ಕೂಡ ಈ ಪಿಂಚಣಿ ಹಣಕ್ಕೆ ನಾವು ಹಣವನ್ನ ಕಟ್ಟುತ್ತಾ ಬರಬೇಕು.
ಅಷ್ಟೇ ಪ್ರಮಾಣದ ಹಣವನ್ನ ಕೂಡ ಕೇಂದ್ರ ಸರ್ಕಾರವು ನಿಮ್ಮ ಪಿಂಚಣಿ ಹಣಕ್ಕೆ ತುಂಬುತ್ತದೆ 60 ವರ್ಷಗಳಾದ ನಂತರ ನೀವು ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು.
ಕಿಸಾನ್ ಮಾನ್ ದನ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರೆ ಕೃಷಿ ಇಲಾಖೆಗಳಿಗೆ ಹೋಗಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಜಮೀನಿನ ವಿವರ ಈ ದಾಖಲೆಗಳ ಮೂಲಕ ನೀವು ನೊಂದಾಯಿಸಿಕೊಳ್ಳಬೇಕು.
ರೈತರ ವಯಸ್ಸಿಗನುಗುಣ ವಾಗಿ ಅವರು ಎಷ್ಟು ಹಣವನ್ನು ಕಟ್ಟಬೇಕು ಎಂಬುದನ್ನು ಸೂಚಿಸುತ್ತದೆ.
ಮೊದಲ ಹಂತದಲ್ಲಿ ನೀವು ಹಣದ ರೂಪದಲ್ಲಿಯೇ ಕಟ್ಟಬೇಕು ನಂತರ ಆಟೋ ಡೆಬಿಟ್ ಗಳ ಮೂಲಕ ಹಣವನ್ನು ಕಟ್ಟಬೇಕು. ನಂತರ ಹಣವು ಪ್ರತಿ ತಿಂಗಳು ನಿಮ್ಮ ಬ್ಯಾಂಕ್ಗಳ ಮೂಲಕವೇ ಕಟ್ಟಾಗುತ್ತಾ ಹೋಗುತ್ತದೆ.
ಈ ರೀತಿ ಮಾಡಿದ ನಂತರ ಪಿಂಚಣಿಯ ಅಕೌಂಟ್ಗಳೇ ಓಪನ್ ಆಗುತ್ತದೆ ನಂತರ ಕಿಸಾನ್ ಕಾರ್ಡ್ ಗಳನ್ನು ಕೂಡ ನೀಡಲಾಗುತ್ತದೆ ಈ ರೀತಿ ಮಾಡಿಸಿಕೊಳ್ಳುವ ಮೂಲಕ ರೈತರು ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು
ಇದನ್ನು ಓದಿ:
ಕೇಂದ್ರ ಸರ್ಕಾರದಿಂದ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಇದ್ದವರು
ಕೃಷಿ ಭೂಮಿ ಇಲ್ಲದ ರೈತರಿಗೆ ಹಕ್ಕು ಪತ್ರ ವಿತರಣೆ
SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್
ರೈತರಿಗೆ ಪ್ರತಿ ತಿಂಗಳು ಹಣ ಕೂಡ ಪಿಂಚಣಿ ಯೋಜನೆ ಜಾರಿ
ಮಾಹಿತಿ ಆಧಾರ