ತಂದೆಯ ಆಸ್ತಿ ಮಕ್ಕಳ ಹೆಸರಿಗೆ ಮಾಡುವುದು ಹೇಗೆ
ನಮಸ್ಕಾರ ಪ್ರಿಯ ಸ್ನೇಹಿತರೇ, ತಂದೆ ಮಾಡಿರುವಂತಹ ಆಸ್ತಿಯನ್ನ ಕುಟುಂಬದ ಎಲ್ಲಾ ಸದಸ್ಯರು ಹೇಗೆ ಮಾಡಿಸಿಕೊಳ್ಳಬೇಕು, ಯಾವ ರೀತಿ ಪಾಲನ ಮಾಡಿಕೊಳ್ಳಬೇಕು ಯಾವ ರೀತಿಯ ದಾಖಲೆಗಳು ಇರಬೇಕು, ಆಸ್ತಿಯನ್ನು ಹಂಚಿಕೆ ಮಾಡುವಾಗ ಮಕ್ಕಳ ಪಾತ್ರ ಏನು ಆಸ್ತಿಯ ಮೇಲೆ ಸಾಲ ಇದ್ದರೆ ಅದನ್ನ ಹೇಗೆ ವಿಭಾಗಿಸಿಕೊಳ್ಳಬೇಕು. ಸಬ್ ರಿಜಿಸ್ಟರ್ ನಲ್ಲಿ ಯಾವ ರೀತಿಯ ಪ್ರಕ್ರಿಯೆಗಳು ಇರುತ್ತದೆ.
ಮಕ್ಕಳು ಆಸ್ತಿಯನ್ನು ಭಾಗ ಹಾಗೂ ಮುಂಚೆ ಕೆಲವೊಂದು ಇಷ್ಟು ಸೂಚನೆಗಳನ್ನ ಪಾಲಿಸಬೇಕು ಅವುಗಳು ಯಾವುದು ಎಂದರೆ ಪಿತ್ರಾಜಿದ ಆಸ್ತಿಯ ಭಾಗ ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಎಂಬುದು ಇರಲೇಬೇಕು. ವಂಶಾವಳಿಯ ಪತ್ರ ಕಡ್ಡಾಯವಾಗಿರಲೇಬೇಕು,
ಮನೆಯಲ್ಲಿರುವಂತಹ ಹೆಣ್ಣು ಮಕ್ಕಳಾಗಿರಬಹುದು ಅಥವಾ ಸೊಸೆಯಿಂದ ಆಗಿರಬಹುದು ಅವರ ಒಪ್ಪಿಗೆ ಎಂಬುದು ಇರಲೇಬೇಕು.
ಆಸ್ತಿಯ ಮೇಲೆ ಸಾಲ ಇದ್ದರೆ ಅದನ್ನ ನೀವು ವಿಲೇವಾರಿ ಮಾಡಿಕೊಳ್ಳಬಹುದಾಗಿದೆ. ಇದು ಪಿತ್ರಾಜಿತ ಆಸ್ತಿಯ ಸಂದರ್ಭದಲ್ಲಿ. ಸ್ವಯಾರ್ಜಿತ ಆಸ್ತಿಯ ಭಾಗಕ್ಕೆ,
ಮನೆಯ ಯಜಮಾನ ಸ್ವಂತ ದುಡಿಮೆಯ ಮೂಲಕ ಆಸ್ತಿಯನ್ನ ಮಾಡಿಕೊಂಡಿದ್ದರೆ ಅದು ಯಾವುದಕ್ಕೂ ಕೂಡ ಸಂಬಂಧಪಟ್ಟಿರುವುದಲ್ಲ ತನ್ನ ಸ್ವಇಚೆಯಿಂದ ಯಾರಿಗಾದರೂ ಹಕ್ಕನ್ನ ವರ್ಗಾವಣೆ ಮಾಡಿಕೊಳ್ಳುವುದು.
ಇದನ್ನು ಓದಿ:
ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ
ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ
ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ
ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ತಂದೆಯಾದವರು ತನ್ನ ಆಸ್ತಿಯನ್ನು ಮಕ್ಕಳಿಗೆ ಹೇಗೆ ವರ್ಗಾವಣೆ ಮಾಡಬೇಕು ಎಂಬುದನ್ನು ತಿಳಿಯೋಣ ಮೂರು ರೀತಿಯ ವಿಭಾಗಗಳಿರುತ್ತದೆ ವಿಭಾಗಗಳಲ್ಲಿ ಒಪ್ಪಂದ ಪತ್ರ ಬರೆಯುವುದು,
ಹಿರಿಯರ ಸಮ್ಮುಖದಲ್ಲಿ ಹಂಚಿಕೆ ಕುರಿತು ಒಂದು ಬಿಳಿಯ ಪೇಪರ್ ಅಥವಾ ಸ್ಟ್ಯಾಂಪ್ ಪೇಪರ್ ಗಳ ಮೇಲೆ ನೀವು ಒಪ್ಪಂದ ಪತ್ರವನ್ನು ಬರೆಯಬೇಕು.
ಇದರ ಮೇಲೆ ಮನೆಯ ಕುಟುಂಬದವರ ಸಂಪೂರ್ಣ ಒಪ್ಪಿಗೆ ಎಂಬುದು ಇರಲೇಬೇಕು. ಎರಡನೆಯದಾಗಿ ಜಮೀನು ಅಳತೆ ಕಾರ್ಯ ಮತ್ತು ನಕ್ಷೆ,
ಮೊದಲು ನೀವು ಜಮೀನನ್ನ ಅಳತೆ ಮಾಡುವುದಕ್ಕೆ ಅರ್ಜಿಯನ್ನ ಸಲ್ಲಿಸಬೇಕು 11E, ಯಾವ ಭಾಗ ಯಾರಿಗೆ ಸೇರಬೇಕು ಎನ್ನುವ ಆಧಾರದ ಮೇಲೆ ಮೊದಲು ನೀವು ನಿರ್ಧಾರ ಮಾಡಿಕೊಂಡು ನಾಡಕಚೇರಿಗೆ ಅರ್ಜಿಯನ್ನು ಸಲ್ಲಿಸಬೇಕು.
ನಿಗದಿತ ದಿನಾಂಕದೊಳಗೆ ಭೂಮಿಗೆ ಸಂಬಂಧಿಸಿದಂತೆ ಅಳತೆಯನ್ನು ಮಾಡಿ ಇಲಾಖೆಗೆ ವರದಿಯನ್ನು ಸಲ್ಲಿಸಿ 11 ಈ ನಕ್ಷೆ ಪ್ರಿಂಟನ್ನ ನೀವು ತೆಗೆದುಕೊಳ್ಳಲೇಬೇಕು.
ಜಮೀನಿನ ರಿಜಿಸ್ಟರ್ ಪ್ರಕ್ರಿಯೆಯನ್ನು ಮಾಡಿಸಿಕೊಳ್ಳಬೇಕು 11 ಈ ನಕ್ಷೆ ಆಧಾರ್ ಕಾರ್ಡ್ ವಂಶಾವಳಿ ಪ್ರಮಾಣ ಪತ್ರ ಮತ್ತು ಎರಡು ಜನರ ಸಾಕ್ಷಿಯೊಂದಿಗೆ ಉಪ ನೋಂದಣಿ ಕಚೇರಿಯಲ್ಲಿ ನೀವು ರಿಜಿಸ್ಟರ್ ಮಾಡಿಸಿಕೊಳ್ಳಬೇಕು.
15 ದಿನದ ಒಳಗಾಗಿ ನಿಮ್ಮ ಎಲ್ಲಾ ರೀತಿಯ ಮಾಹಿತಿಗಳು ತಹಶೀಲ್ದಾರ್ ಕೇಂದ್ರಗಳಿಗೆ ಎಲ್ಲಾ ರೀತಿಯಲ್ಲೂ ಕೂಡ ಮುಗಿದು ಹೋಗಿರುತ್ತದೆ ನಂತರ ನಿಮ್ಮ ಆಸ್ತಿಯನ್ನು ಈ ರೀತಿಯಲ್ಲಿ ಮಕ್ಕಳಿಗೆ ಹಂಚಿಕೆ ಮಾಡಬಹುದಾಗಿದೆ.
ಮಾಹಿತಿ ಆಧಾರ: