ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಎಲ್ಲರೂ ಕೂಡ ಹಾಕಿಸಲೇಬೇಕು ಇಲ್ಲವಾದರೆ ದಂಡ.

175

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಬಳಿ ಹಳೆಯ ವಾಹನಗಳು ಏನಾದರೂ ಇದ್ದರೆ ಅದಕ್ಕೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನ ಹಾಕಿಸಿಕೊಳ್ಳಲೇಬೇಕು. ನಿಮ್ಮ ಬಳಿ ಬೈಕು ಕಾರು ಅಥವಾ ಯಾವುದೇ ಇದ್ದರೂ ಕೂಡ ಈ ನಿಯಮವನ್ನು ನೀವು ಪಾಲಿಸಲೇಬೇಕು.

ಎಚ್ ಎಚ್ ಆರ್ ಪಿ ನಂಬರ್ ಪ್ಲೇಟ್ ಎಂದರೆ ನಿಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್. ಈ ಪ್ಲೇಟ್ ಅನ್ನು ಅಲುಮಿಯಂ ಅನ್ನ ಬಳಸಿ ತಯಾರು ಮಾಡಲಾಗಿರುತ್ತದೆ. ಈ ನಂಬರ್ ಪ್ಲೇಟ್ ನಲ್ಲಿ ಲೇಸರ್ ಎನ್ ಕೋರ್ಟ್ ಮಾಡಲಾಗುತ್ತದೆ.

ನಿಮ್ಮ ಎಡಗಡೆಯಲ್ಲಿ ಅಶೋಕ ಚಕ್ರದೊಂದಿಗೆ ಕ್ರೋಮಿಯಂ ಓಲೋ ಗ್ರಾಂ ಹ್ಯಾಂಡ್ ಸ್ಟಾಪ್ ಅನ್ನ ಮಾಡಿರುತ್ತಾರೆ. ಸರ್ಕಾರದ ಪ್ರಕಾರ ಏಪ್ರಿಲ್ 1 2019 ಕ್ಕಿಂತ ಮೊದಲು ರಿಜಿಸ್ಟರ್ ಆಗಿರುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಹೊಂದಿರಲೇಬೇಕು.

ಮೊಬೈಲ್ ನಲ್ಲಿ ಹೇಗೆ ನೀವು ಅಪ್ಲೈ ಮಾಡಬಹುದು ಎಂದರೆ siam in ಎನ್ನುವ ವೆಬ್ಸೈಟ್ ಅನ್ನ ನೀವು ಓಪನ್ ಮಾಡಬೇಕು. ನಿಮ್ಮ ಬಲಭಾಗದಲ್ಲಿ ಬುಕ್ ಹೆಚ್ಎಸ್ಆರ್‌ಪಿ ಎಂದು ಇದೆ. ಇದರ ಮೇಲೆ ಕ್ಲಿಕ್ ಮಾಡಿಕೊಂಡು ಎಚ್ಎಸ್ಆರ್‌ಪಿ ರಿಜಿಸ್ಟ್ರೇಷನ್ ನೀವು ಮಾಡಬಹುದಾಗಿದೆ.

ನಿಮ್ಮ ಹೆಸರು ಇ-ಮೇಲ್ ಮತ್ತು ನೀವು ಯಾವ ರಾಜ್ಯದವರು, ನಿಮ್ಮ ವಾಹನದ ರಿಜಿಸ್ಟ್ರೇಷನ್ ನಂಬರನ್ನು ಹಾಕಬೇಕು. ನಿಮ್ಮ ಮೊಬೈಲ್ ನಂಬರ್ ಹಾಗೂ ನೀವು ಯಾವ ಜಿಲ್ಲೆಯವರು ಎಂದು ತಿಳಿಸಬೇಕು.

ಈ ರೀತಿ ಮಾಡಿದ ನಂತರ ಅಲ್ಲಿ ಸರ್ಚ್ ಎಂದು ಕೊಡುತ್ತದೆ ಅದನ್ನು ನೀವು ಓಪನ್ ಮಾಡಿ ನಿಮ್ಮ ವಾಹನ ಯಾವ ಕಂಪನಿದು ಎಂಬುದನ್ನ ಕೇಳುತ್ತದೆ ಅದನ್ನು ನೀವು ಸರಿಯಾಗಿ ಸೂಚಿಸಬೇಕು. ಬುಕ್ ಮೈ ಎಚ್ಎಸ್ಆರ್‌ಪಿ ಎಂಬುದು ಇದೆ ಅಲ್ಲಿ ಬುಕ್ ಎಂದು ಬರುತ್ತದೆ ಅದನ್ನು ನೀವು ಕ್ಲಿಕ್ ಮಾಡಿ.

ನಿಮ್ಮ ವಾಹನದ ಕೆಲವೊಂದು ಇಷ್ಟು ಮಾಹಿತಿಗಳನ್ನು ಕೇಳುತ್ತದೆ,ಅವುಗಳನ್ನು ನೀವು ತಿಳಿಸಬೇಕು. ಈ ರೀತಿ ನೀವು ಮಾಡುವುದರಿಂದ ನಿಮ್ಮ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಬರುತ್ತದೆ ಆದರೆ ಈ ನಂಬರ್ ಪ್ಲೇಟ್ ಅನ್ನ ನೀವು ಮಾಡಿಸಿಕೊಳ್ಳದೆ ಇದ್ದರೆ

ಮುಂದಿನ ದಿನಗಳಲ್ಲಿ ನಿಮಗೆ ದಂಡವನ್ನ ಕಟ್ಟುವ ಸಾಧ್ಯತೆ ಇರುತ್ತದೆ ಆದ್ದರಿಂದ ಎಲ್ಲರೂ ಕೂಡ ಈ ನಂಬರ್ ಪ್ಲೇಟ್ ಗಳನ್ನ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here